ಶಿವಮೊಗ್ಗ, ಆ.22:
ಕೊರೊನಾಗೆ ಭಗವಂತ ವಿಘ್ನ ವಿನಾಶಕ ವಿನಾಯಕ ಮುಕ್ತಿ ನೀಡಿದ್ದಾನೆ ಎನಿಸುತ್ತದೆ. ಇಂದಿನವರೆಗೂ ದಾಖಲಾದ ಸೊಂಕಿನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಏಕೆಂದರೆ ನಿತ್ಯ ರಾತ್ರಿ ಎಂಟರ ಹೊತ್ತಿನೊಳಗೆ ರಾಜ್ಯ ಹಾಗೂ ಜಿಲ್ಲೆಯ ವರದಿಗಳು ಮಾದ್ಯಮಗಳಿಗೆ ತಲುಪುತ್ತಿದ್ದವು. ಇಂದು ರಾತ್ರಿ 9.30 ಆದರೂ ಬಾರದಿರುವುದು ಅಚ್ಚರಿ ಜೊತೆ ಕೊರೊನಾ ಮಾಯವಾಯಿತೇ ಎಂಬ ಪ್ರಶ್ನೆಗಳನ್ನು ಮೂಡಿಸಿದೆ.
ನಿಮ್ಮ ತುಂಗಾ ತುಂಗಾ ಕನ್ನಡ ದಿನಪತ್ರಿಕೆ ತನ್ನದೆಯಾದ ಓದುಗರನ್ನು ಹೊಂದಿದೆ. ಮುದ್ರಣದ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ನಿಖರ ಮಾಹಿತಿ ನೀಡುವ ಕೆಲಸ ಮಾಡುತ್ತಿದೆ. ಅಲ್ಲಿನ ಬಹುಮಂದಿ ಅಂದರೆ ಸಾವಿರಾರು ಮಂದಿ ಸಂಜೆಯ ನಂತರ ಈಗಲೂ ಕೇಳುತ್ತಿರುವ ಪ್ರಶ್ನೆಯೆಂದರೆ ಕೊರೊನ ಸುದ್ದಿ ಹಾಕಿಲ್ಲ ಎಂಬುದಷ್ಟೇ ಆಗಿದೆ.
ಯಾರದೊ ಮಾತು ಕೇಳಿ ಅಂಕಿಅಂಶಗಳ ದಾಖಲೆ ಇಲ್ಲದೆ ಸುದ್ದಿ ಪ್ರಕಟಿಸುವುದು ಪತ್ರಿಕೆಯ ನಿಯಮವಲ್ಲ. ಯಾವುದೇ ಸುದ್ದಿ ನಿಖರವಾಗಿರಬೇಕು, ಹೇಳಿದ ಅಂಶ ಇಲಾಖೆಗಳ ವರದಿಗೆ ಪೂರಕವಾಗಿರಬೇಕು. ಇಲ್ಲಿಯವರೆಗೆ ಅಂದರೆ ಈ ಕ್ಷಣದವರೆಗೆ ಕೊರೊನಾ ವರದಿ ಬಂದಿಲ್ಲ ಎಂದು ಓದುಗ ಬಳಗಕ್ಕೆ ತುಂಗಾತರಂಗ ತಿಳಿಸುತ್ತಿದೆ. ಓದುಗರಿಗೆ ನಿತ್ಯ ತಪ್ಪದೇ ಮಾಹಿತಿ ನೀಡುತ್ತಿರುವ ತುಂಗಾತರಂಗ ಅನಿವಾರ್ಯವಾಗಿ ಈ ಮಾಹಿತಿಯನ್ನು ಪ್ರಕಟಿಸಬೇಕಾಗಿದೆ.