ಶಿವಮೊಗ್ಗ, ಜೂ.೧೪:
ಶಿವಮೊಗ್ಗ ಬೆಳ್ಳಿ ಮಂಡಲ, ಯುಗಧರ್ಮ ಜಾನಪದ ಸಮಿತಿ ಸಿಹಿಮೊಗೆ, ಶಿವಮೊಗ್ಗ ಚಿತ್ರ ಸಮಾಜಗಳ ಸಂಯುಕ್ತಾಶ್ರಯದಲ್ಲಿ ಅಂಬೇಗಾಲು-೫ ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬೆಳ್ಳಿ ಮಂಡಲದ ಕಾರ್ಯಾಧ್ಯಕ್ಷ ಡಿ.ಎಸ್. ಅರುಣ್ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ೪ ವರ್ಷಗಳಲ್ಲಿ ನಡೆದ ಅಂಬೇಗಾಲು ಕಿರುಚಿತ್ರ ಸ್ಪರ್ಧೆಗಳಲ್ಲಿ ಶಿವಮೊಗ್ಗ ಸುತ್ತಮುತ್ತಲಿನ ಕ್ರಿಯಾಶೀಲ ನಿರ್ದೇಶಕರು ಪಾಲ್ಗೊಂಡು ಈಗಾಗಲೇ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಫನ್ಮಂಡ್ರಿ ಕ್ರಾಸ್, ಹೆಕ್ಕೆಮನೆ, ಚೌಕಿ, ನೊಂದವರ ಯುವಕರ ಸಂಘ, ದೂರದರ್ಶನ, ಸೌಮ್ಯ ಮುಂತಾದ ಪ್ರಶಸ್ತಿ ಪುರಸ್ಕೃತ ಚಿತ್ರಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಈಗ ಅಂಬೇಗಾಲು-೫ ಸ್ಪರ್ಧೆಯಲ್ಲೂ ಕೂಡ ಶ್ರೇಷ್ಠಮಟ್ಟದ ಚಿತ್ರಗಳನ್ನು ನಿರೀಕ್ಷಿಸಲಾಗಿದೆ ಎಂದರು.


ಈ ಬಾರಿ ಹಾಸ್ಯ ಕಥಾನಕವುಳ್ಳ ಕಿರುಚಿತ್ರಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು. ಪ್ರತಿ ಚಿತ್ರ ೮ ರಿಂದ ೧೦ ನಿಮಿಷ ಇರಬೇಕು. ಜೂ.೧೦ ರ ನಂತರ ಚಿತ್ರೀಕರಿಸಿ ರಬೇಕು. ಚಿತ್ರೀಕರಣ ಉತ್ತಮ ಶ್ರೇಣಿಯಲ್ಲಿರಬೇಕು. ನಿರ್ದೇಶಕ ಮತ್ತು ನಿರ್ಮಾಪಕರ ಭಾವಚಿತ್ರ ಕಡ್ಡಾಯವಾ ಗಿರಬೇಕು. ಮೂಲ ಕಥೆ ಅಥವಾ ಗೀತೆಗಳನ್ನು ಎರವಲು ಪಡೆದಿದ್ದರೆ ಅದರ ಅನುಮತಿ ಇರಬೇಕು. ಈ ಮೊದಲು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶನ ವಾಗಿರಬಾರದು. ಸಂಪೂರ್ಣ ಸ್ವತಂತ್ರವಾಗಿರಬೇಕು. ಎಲಿಮಿನೇಷನ್‌ಗೆ ಅವಕಾಶವಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದರು.


ಇದಕ್ಕೆ ಸಂಬಂಧಿಸಿದಂತೆ ಅರ್ಜಿಗಳನ್ನು ಬಿಹೆಚ್ ರಸ್ತೆಯಲ್ಲಿರುವ ದೀಪಕ್ ಪೆಟ್ರೋಲ್ ಬಂಕ್‌ನಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಜುಲೈ ೨೦ ರ ಒಳಗೆ ೪ ಹೆಚ್.ಡಿ. ಶ್ರೇಣಿಯ ಡಿವಿಡಿ ಸಹಿತ ಸೆ.೨೦ರ ಒಳಗೆ ಸಲ್ಲಿಸಬೇಕು. ಇದಕ್ಕೆ ೫೦೦ ರೂ. ಶುಲ್ಕ ನಿಗದಿ ಮಾಡಲಾಗಿದೆ ಎಂದರು.
ಹೆಚ್ಚಿನ ವಿವರಗಳಿಗೆ 9844456505, 8310679925, 9449284495, 9686559950 ನ್ನು ಸಂಪರ್ಕಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಚೇತನ್, ವಿಜಯ್‌ಕುಮಾರ್, ಶಿವಾನಂದ್, ಕಿರಣ್, ಸಂತೋಷ್, ನಾಗರಾಜ್, ಮಹೇಶ್ ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!