ರಾಕೇಶ್ ಸೋಮಿನಕೊಪ್ಪ
ಶಿವಮೊಗ್ಗ,
ಮಕ್ಕಳು ದೇಶದ ನಿಜವಾದ ಆಸ್ತಿ. ಇಂತಹ ಮಕ್ಕಳ ಭವಿಷ್ಯ ಉತ್ತಮವಾಗಿ ರೂಪುಗೊಳ್ಳಬೇಕು ಹಾಗೂ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಮಹತ್ವದ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿದ ಡಾ.ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲವೆಂಬುದು ಪೋಷಕರ ಆರೋಪ.
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿ ಯರ ವಸತಿ ಶಾಲೆಯ ಪ್ರತಿಭಾನ್ವಿತ ಬಡ ಮಕ್ಕಳ ಪರಿಸ್ಥಿತಿ ಅಧ್ವಾನಕ್ಕಿಡಾಗಿದೆ ಎಂಬುದು ಪೋಷಕರ ಆರೋಪ
ಶಿವಮೊಗ್ಗದ ಗಾಡಿಕೊಪ್ಪದಲ್ಲಿದ್ದ ಡಾ.ಬಿ. ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಗೆ ಸರಿಯಾದ ಕಟ್ಟಡವಿಲ್ಲದೇ ಪರದಾಡು ತ್ತಿದೆ ಎಂದರೆ ತಪ್ಪಾಗಲಾರದು. ಈ ಬಾಲಕಿ ಯರ ವಸತಿ ಶಾಲೆ ಮೊದಲು ಹುಣಸೆಕಟ್ಟೆ ಯಲ್ಲಿದ್ದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆಯುತ್ತಿತ್ತು. ನಂತರ ಅನಿ ವಾರ್ಯ ಕಾರಣಗಳಿಂದ ಶಿವಮೊಗ್ಗ ನಗರದ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿರುವ ವೀರಶೈವ ಜಂಗಮ ಅರ್ಚಕರ ಮತ್ತು ಪುರೋ ಹಿತರ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ವಿಪರ್ಯಾಸವೆನೆಂದರೆ ಈ ವಸತಿ ಶಾಲೆಯಲ್ಲಿ ಮಕ್ಕಳಿಗೆ ಸರಿಯಾದ ಸೌಲಭ್ಯಗಳು ಲಭ್ಯವಿಲ್ಲ.
ಈ ಬಾಡಿಗೆ ಕಟ್ಟಡದಲ್ಲಿ ಸುಮಾರು80 ರಿಂದ 90 ಮಕ್ಕಳು ಒಂದೇ ಹಾಲ್‌ನಲ್ಲಿ ಮಲಗಬೇಕು ಹಾಗೂ ತಮ್ಮ ಟ್ರಂಕ್‌ಗಳನ್ನು ಸಹ ಇಟ್ಟುಕೊಳ್ಳಬೇಕು. ಈ ಮಕ್ಕಳಿಗೆ2 ಶೌಚಾ ಲಯಗಳಿದ್ದು, ತೀವ್ರ ಕಿರಿ ಕಿರಿ ಉಂಟಾಗುತ್ತಿದೆ ಎಂಬುದು ಇಲ್ಲಿಯ ಮಕ್ಕಳ ಆರೋಪ.
ಶಿವಮೊಗ್ಗ ಜಿಲ್ಲೆಯಲ್ಲಿ ೩೪ ವಸತಿ ಶಾಲೆಗಳಿದ್ದು, ಅದರಲ್ಲೂ ೧೩ ವಸತಿ ಶಾಲೆಗಳಿಗೆ ಸ್ವಂತ ಕಟ್ಟಗಳ ಭಾಗ್ಯವೇ ಇಲ್ಲದೇ ಅಲೆಮಾರಿ ಜೀವನ ನಡೆಸುವಂತಾಗಿದ್ದು, ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರು ಇದರ ಬಗ್ಗೆ ಗಮನಹರಿಸಬೇಕಿದೆ.
ಈ ವಸತಿ ಶಾಲೆಯ ಸೌಲಭ್ಯ ಕೊರತೆಗಳ ಬಗ್ಗೆ ಶಾಸಕ ಕೆ.ಎಸ್.ಈಶ್ವರಪ್ಪ, ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಾಗಿದೆ.
ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯನ್ನು ಕಟ್ಟಲು ಸರ್ಕಾರದಿಂದ ಹೊಳೆಹೊನ್ನೂರಿನ ಕನಸಿನ ಕಟ್ಟೆಯಲ್ಲಿ ನಿವೇಶನ ಮಂಜೂರಾಗಿದ್ದು, ಸ್ವಂತ ಕಟ್ಟಡ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಮಾಡಿಲಾಗಿದ್ದು ಹಣ ಮಂಜೂರಾಗಬೇಕಿದೆ. ಕಟ್ಟಡ ನಿರ್ಮಾಣವಾಗುವವರೆಗೂ ನಾವು ಬಾಡಿಗೆ ಕಟ್ಟಡದಲ್ಲೆ ವಸತಿ ಶಾಲೆಯನ್ನು ನಡೆಸಬೇಕು.
-ಪ್ರಾಂಶುಪಾಲರು, ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ
ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಹಾಗೂ ಮಲಗಲು ಮತ್ತು ಪಾಠ ಕೇಳಲು ತೀವ್ರ ಸಮಸ್ಯೆ ಉಂಟಾಗಿದೆ ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕಾಗಿದೆ.
-ಮಕ್ಕಳ ಪೋಷಕರು.