ಶಿವಮೊಗ್ಗ, ಜೂ.07:
ಶಿವಮೊಗ್ಗ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಎಸೈ ಆಗಿ ಹಾಗೂ ಪ್ರಸ್ತುತ ಪಿಐ ಆಗಿ ಸೇವೆ ಸಲ್ಲಿಸುತ್ತಿರುವ ಅಭಯ್ ಪ್ರಕಾಶ್ ಅವರ ಮಾನವೀಯ ಕಳಕಳಿಯ ಕಾರ್ಯಕ್ರಮಗಳು ಸಾಲು ಸಾಲಾಗಿ ಕಾಣುತ್ತಿವೆ. ಹಾಗಾಗಿ ಅಭಯ್ ಇತರರಿಗಿಂತ ವಿಶೇಷವಾಗಿ ಕಾಣುತ್ತಾರೆ.
ನಿನ್ನೆ ಅಜ್ಜಿಯಂದಿರ ದುರಸ್ತಿ ಗೊಂಡ ಹೋಟೆಲನ್ನು ಉದ್ಘಾಟಿಸಿದ್ದಾರೆ.
ಇದು ಇತರೆ ಕಾರ್ಯಗಳಿಗಿಂತ ಹೇಗೆ ವಿಭಿನ್ನ ಗೊತ್ತಾ? ಇಲ್ಲಿ ಪಿಐ ಅಭಯ್ ಪ್ರಕಾಶ್ ಹಾಗೂ ಅವರ ತಂಡ ಮಾಡಿದ ಮಾನವೀಯ ಕಳಕಳಿಯೇ ಮುಖ್ಯವಾಗುತ್ತದೆ.
ವಿವರ ಇಂತಿದೆ:
ಕುಂಸಿ ಪೊಲೀಸ್ ಠಾಣೆ ಮಗ್ಗುಲಲ್ಲಿ ಹಲವಾರು ವರ್ಷಗಳಿಂದ ಸಣ್ಣ ಹೋಟೆಲ್ ಇಟ್ಟುಕೊಂಡಿದ್ದ ಇಬ್ಬರು ವೃದ್ಧ ಅಜ್ಜಿಯಂದಿರು ಎಲ್ಲರಿಗೂ ಆತ್ಮೀಯರು. ತಾಯಿಯಂತಹ ಮನೋಭಾವ ಅವರಲ್ಲಿರುತ್ತಿದ್ದನ್ಬು ಅಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸರೆಲ್ಲಾ ಗಮನಿಸಿದ್ದರು.
ಇವರ ಈ ಜೋಪಡಿ ಅಂತಹ ಮುರುಕಲು ಅಂಗಡಿಯನ್ನು ಕುಂಸಿ ಪೊಲೀಸ್ ಠಾಣೆ ಪಿ ಐ ಅಭಯ ಪ್ರಕಾಶ್ ಸೋಮನಾಳ್ ಹಾಗೂ ಸಿಬ್ಬಂದಿಗಳು ಗಮನಿಸಿದ್ದಾರೆ
ಮೇಲ್ಛಾವಣಿಗಳು ಗೆದ್ದಲು ಹಿಡಿದು ಮುರಿದುಬೀಳುವ ಹಂತದಲ್ಲಿ ಇದ್ದಿದ್ದನ್ನು ಗಮನಿಸಿದ ಠಾಣೆಯ ಪಿ ಐ ಅಭಯ್ ಹಾಗೂ ಸಿಬ್ಬಂದಿ ಈ ಇಬ್ಬರು ಅಜ್ಜಿಯಂದಿರಿಗೆ ಹೊಸದೊಂದು ರೀತಿಯಲ್ಲಿ ಹೋಟೆಲ್ ನವೀಕರಿಸಿ ಕೊಡಬೇಕೆಂದು ಮನಸ್ಸು ಮಾಡಿದ್ದಾರೆ.
ನಿನ್ನೆ ಗೆದ್ದಲು ಹಿಡಿದ ಮೇಲ್ಚಾವಣಿ ಬದಲಿಸಿ ಹೊಸ ರೀತಿಯ ನವೀಕರಣ ಮಾಡಿ ಹೊಸ ತಗಡಿನ ಸೀಟನ್ನು ಹಾಕಿಸಿದ್ದಾರೆ.
ಕುಂಸಿ ಪೊಲೀಸ್ ಠಾಣೆಯ ಪಿ ಐ ಅಭಯ ಪ್ರಕಾಶ್ ಹಾಗೂ ಸಿಬ್ಬಂದಿ ಮಾನವೀಯತೆ ಮೆರೆದು ಅ ಇಬ್ಬರು ಅಜ್ಜಿಯಂದಿರ ಪಾಲಿಗೆ ಮರೆಯಲಾರದ ಮಾಣಿಕ್ಯ ಎಂದರೆ ತಪ್ಪಾಗಲಾರದು
ಇಂದಿನ ದಿನಗಳಲ್ಲಿ ಬಹುತೇಕ ಅಧಿಕಾರಿಗಳು ಹಣ ಮಾಡುವುದೊಂದೇ ನಮ್ಮ ಕಾಯಕ ಎಂದುಕೊಂಡಿದ್ದಾರೆ. ಸರ್ಕಾರ ನಮಗೆ ಸಂಬಳ ಕೊಡುತ್ತದೆ ಓಡಾಡಲು ವಾಹನ ನೀಡಿದೆ ದುಡ್ಡು ಮಾಡಲು ಅಧಿಕಾರವಿದೆ ಎಂಬ ಈ ಅವಧಿಯಲ್ಲಿ ಇಂಥ ಮಾನವೀಯತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದಾರೆಂಬುದೇ ವಿಶೇಷ. ಗುಡ್ ವರ್ಕ್ ಅಭಯ್ ಸರ್.