ಶಿವಮೊಗ್ಗ, ಜೂ.03:
ಪರಿಚಯವಿದ್ದರೂ ಹೆಣ್ಣು ಮಕ್ಕಳ ಜೊತೆ ಮಾತಾಡಲು ಭಯ ಪಡುವ ಇಂದಿನ ದಿನಮಾನಗಳಲ್ಲಿ ಅಪರಿಚಿತ ಮಹಿಳೆಯ ಮೊಬೈಲ್ ಗೆ ಅಶ್ಲೀಲ ವೀಡಿಯೋ ರವಾನಿಸಿದರೆ ನಮ್ಮ ಕಾನೂನು, ಪೊಲೀಸರು ಸುಮ್ನೆ ಬಿಡ್ತಾರಾ?
ಇಂತಹದೊಂದು ಪೀಠಿಕೆ ಹಾಕಲು ಕಾರಣ ಶಿವಮೊಗ್ಗ ಜಿಲ್ಲೆಯ ಮಹಿಳೆಯೋರ್ವರ ಮೊಬೈಲ್ ಗೆ ಯಾರೂ ಅಪರಿಚಿರು ಅಶ್ಲೀಲ ವೀಡಿಯೋ ಕಳಿಸಿದ್ದದೇ, ಕೇಳಿದ್ದಕ್ಕೆ ಅಸಭ್ಯವಾಗಿ ಮಾತನಾಡಿ ಬ್ಲಾಕ್ ಮೇಲ್ ಗೆ ಇಳಿದಿದ್ದಾರೆ.
ಮಹಿಳೆಯೋರ್ವರ ಮೊಬೈಲ್ ಗೆ ಅಶ್ಲೀಲ ವಿಡಿಯೋ ರವಾನಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಈ ಅಪರಿಚಿತರ ವಿರುದ್ಧ ಮಹಿಳೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿದೂರು ದಾಖಲಿಸಿದ್ದಾರೆ.
ರಿಪ್ಪನ್ ಪೇಟೆ ಸಮೀಪದ ಗ್ರಾಮವೊಂದರ ನಿವಾಸಿಯಾಗಿರುವ ಮಹಿಳೆಯ ಮೊಬೈಲ್ ಗೆ ಮೇ.10 ರಂದು ಅಶ್ಲೀಲ ವಿಡಿಯೋಗಳನ್ನ ಎರಡು ಅಪರಿಚಿತ ನಂಬರ್ ನಿಂದ ರವಾನಿಸಿ ಮೇಲಿಂದ ಮೇಲೆ ಕರೆ ಮಾಡಿ ಮಾನಸಿಕ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಮಹಿಳೆ ದಾಖಲೆ ಸಹಿತ ದೂರು ನೀಡಿದ್ದರು.
ಇದರ ಬೆನ್ನು ಹತ್ತಿದ ಪೊಲೀಸರು ಎರಡು ಅಪರಿಚಿತ ಮೊಬೈಲ್ ಗಳನ್ನ ಪತ್ತೆ ಹಚ್ಚಿದ್ದಾರೆ. ಎರಡು ಅಪರಿಚಿತ ನಂಬರ್ ಗಳು ಉತ್ತರ ಕನ್ನಡದ ನಿವಾಸಿಗಳ ಹೆಸರಿನಲ್ಲಿದ್ದು, ಆದರೆ ಇವರುಗಳು ಈ ನಂಬರ್ ಗಳನ್ನ ಪತ್ತೆಯಾಗಿರುವ ಹೆಸರಿನ ಗ್ರಾಹಕರು ಬಳಸದೆ ಇರುವುದು ಸಹ ಬೆಳಕಿಗೆ ಬಂದಿದೆ.
ಈ ಬಗ್ಗೆ ಹೆಚ್ಚಿನ ತನಿಖೆಗೆ ಅನುಮತಿ ಕೋರಿ ಪೊಲೀಸ್ ಇಲಾಖೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಪೊಲೀಸರ ತಂಡ ಈಗಾಗಲೇ ಉತ್ತರ ಕನ್ನಡದಲ್ಲಿ ಮೊಕ್ಕಾಂ ಹೂಡಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಇಲ್ಲಿ ತಪ್ಪಿತಸ್ಥರು ಸಿಕ್ಕಿ ಹಾಕಿಕೊಳ್ಳುವುದಂತೂ ಸತ್ಯ.