ಶಿವಮೊಗ್ಗ ಜೂ.02:
ಶಿವಮೊಗ್ಗದಲ್ಲೊಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಕಚೇರಿ ಎಂಬುದು ಇದೆ ಎಂಬುದೇ ಬಹಳಷ್ಟು ಜನರಿಗೆ ಗೊತ್ತಿಲ್ಲ. ವಿಶೇಷವೆಂದರೆ ಡಿಹೆಚ್ ಓ ಕಛೇರಿಯ ಹಳೇ ಕಟ್ಟಡದಲ್ಲಿರುವ ಈ ಇಲಾಖೆಯಲ್ಲಿ ಓರ್ವ ಹಿರಿಯ ಅಧಿಕಾರಿ ಜಿಲ್ಲಾ ಅಂಕಿತಾಧಿಕಾರಿ ಇದ್ದಾರೆ.


ಇಲ್ಲಿನ ಎಲ್ಲಾ ಕಾರ್ಯ, ವ್ಯವಹಾರ ನೋಡಿಕೊಳ್ಳುವ ಜವಾಬ್ದಾರಿ ಕಚೇರಿಯ ಸಹಾಯಕಿಯ ಮೇಲಿದೆ. ಈ ಸಹಾಯಕಿ ಈಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಈ ಫುಡ್ ಸೇಫ್ಟಿ ಕಚೇರಿಯ ಮೇಲೆ ಎಸಿಬಿ ದಾಳಿಯಲ್ಲಿ ಕಚೇರಿಯ FDA ಅಂದರೆ ಇಲ್ಲಿನ ಕಚೇರಿ ಸಹಾಯಕಿ ಲೀಮಾ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.


ವಿನೋಬನಗರದಲ್ಲಿ ದಿನಸಿ ಅಂಗಡಿಯನ್ನ ಫುಡ್ ಸೇಫ್ಟಿ ಕಚೇರಿಯಲ್ಲಿ ನೊಂದಣಿ ಮಾಡಿಸಲು ರಾಮ ಕುಮಾರ್ ಎಂಬುವರು ಎಫ್ ಡಿ ಎ ಲೀಮಾ ಎಂಬುವರಿಗೆ 1000 ರೂ ಲಂಚ ನೀಡುವ ವೇಳೆ ದಾಳಿ ನಡೆದಿದೆ.
ಅವರನ್ನು ವಿಚಾರಣೆಗೊಳಪಡಿಸಿರುವ ಎಸಿಬಿ ಮುಂದಿನ ಕ್ರಮ ಕೈಗೊಂಡಿದೆ. ಲೀಮಾ ಅವರು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಎಸಿಬಿ ಡಿವೈಎಸ್ಪಿ ಲೋಕೇಶ್, ನಿರೀಕ್ಷಕರಾದ ವಸಂತಕುಮಾರ್, ಇಮ್ರಾನ್ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ.
ಬಿಹೆಚ್ ರಸ್ತೆಯಲ್ಲಿರುವ ಡಿಹೆಚ್ ಒ ಕಚೇರಿಯಲ್ಲಿರುವ ಫುಡ್ ಸೇಫ್ಟಿ ಕಚೇರಿಯಲ್ಲಿನ ಸದ್ದು ಮಾಡದ ಸುದ್ದಿ ಬಹಿರಂಗಗೊಂಡಿದೆ.
ತಳ್ಳೋಗಾಡಿಯಿಂದ ಹಿಡಿದು ಹೋಟೆಲ್ ಅಂಗಡಿ ಬಾರ್ ಅಂಡ್ ರೆಸ್ಟೋರೆಂಟ್ ಸೇರಿದಂತೆ ಹೈಫೈ ಹೋಟೆಲ್ ಗಳು ಸಹ ಇಲ್ಲಿನ ವ್ಯಾಪ್ತಿಗೆ ಬರುತ್ತವೆ. ಈ ಇಲಾಖೆ ನಿಯಂತ್ರಣ ರಾಜದಾನಿ ಮಟ್ಟದಲ್ಲಿರುವುರಿಂದ ಇಲ್ಲಿನ ಸಿಬ್ಬಂದಿಗಳು ಸದ್ದು ಮಾಡದೇ ವ್ಯವಹಾರಕ್ಕಿಳಿಯುತ್ತಿದ್ದರೆಂಬ ಆರೋಪವಿದೆ.

By admin

ನಿಮ್ಮದೊಂದು ಉತ್ತರ

error: Content is protected !!