ಶಿವಮೊಗ್ಗ, ಮೇ.30:
ಪ್ರೀತಿ ನೆಪದಲ್ಲಿ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಬಂಧ ಬೆಳೆಸಿಕೊಂಡು ಕೊನೆಗೆ ಕೈ ಕೊಡಲು ಮುಂದಾಗಿದ್ದ ಆಟೋ ಚಾಲಕನೋರ್ವ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಆ ಆಟೊಇಚಾಲಕ ಯುವಕನ ವಿರುದ್ದ ಯುವತಿ ಅತ್ಯಾಚಾರ ಹಾಗೂ ನಂಬಿಸಿ ವಂಚಿಸಿದ ಆರೋಪದಡಿ ಜಿಲ್ಲೆಯ ಕಾರ್ಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿದ್ಸಾರೆ.
ಕಾರ್ಗಲ್ ಶಿವರಾಜ್ ಎಂಬ ಆಟೋ ಚಾಲಕ ಯುವಕ ಅದೇ ಊರಿನ ಯುವತಿಯನ್ನ ಪ್ರೀತಿಸಿದ್ದನು. 4 ವರ್ಷದ ಪ್ರೀತಿಸಿ ಅತ್ಯಾಚಾರವೆಸಗಿದ್ದನು ಎಂದು ಆರೋಪಿಸಲಾಗಿದೆ.


ಆಟೋ ಚಾಲಕನಾಗಿದ್ದ ಈ ಯುವಕ ನಾಲ್ಕು ವರುಷಗಳಿಂದ ಈ ಯುವತಿಯನ್ನ ಪ್ರೀತಿಸುತ್ತಿದ್ದ. ಈಗ್ಗೆ ಕಳೆದ 1 ವರ್ಷದಿಂದ ಖಾಸಗಿ ಬಸ್ ಚಾಲಕನಾಗಿದ್ದ ಶಿವರಾಜ್. ಕುಂದಾಪುರದಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಈ ಯುವತಿಗೆ ಕೈ ಕೊಡಲು ಮುಂದಾಗಿದ್ದ ಎಂಬ ಆರೋಪವಿದೆ.
ಒಂದೇ ಊರಿನವರಾದ ಇವರುಗಳು ಪರಸ್ಪರ ಪ್ರೀತಿಯ ಬಲೆಗೆ ಬಿದ್ದಿದ್ದರು. ನಿಧಾನವಾಗಿ ಶಿವರಾಜ್ ಅತ್ಯಾಚರವೆಸಗಿ ಯುವತಿಗೆ ಕೈಕೊಡಲು ನಿರ್ಧರಿಸಿದ್ದನು. ಆತನನ್ನು ಕಾರ್ಗಲ್ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ

By admin

ನಿಮ್ಮದೊಂದು ಉತ್ತರ

error: Content is protected !!