Shimoga/ ಬಾರೀ ಮಳೆಯ ರೆಡ್ ಅಲಾರ್ಟ್ ನಡುವೆ ಚುನಾವಣೆ, ಶಾಲೆ- ಕಾಲೇಜ್? https://tungataranga.com/?p=11136 ಮೌನ ಮರಿಯದ ಅಧಿಕಾರಿಗಳ ಸುದ್ದಿ ಓದಲು ಲಿಂಕ್ ಕ್ಲಿಕ್ ಮಾಡಿ👆

ಶಿವಮೊಗ್ಗ,ಮೇ.19:
ಮೊನ್ನೆ ಸಂಜೆಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಅಲ್ಲೊಂದಿಷ್ಟು ಎಂಬಂತೆ ಸುರಿಯುತ್ತಿರುವ ಜಿಟಿಜಿಟಿ ಹಾಗೂ ಬಾರೀ ಮಳೆ ನಡುವೆ ಕೆಲ ಗ್ರಾಮಪಂಚಾಯತಿಗಳ ಚುನಾವಣೆಯ ಮತದಾನ ನಡೆಯುತ್ತಿದೆ. ಇದರ ನಡುವೆ ಶಾಲಾ ಕಾಲೇಜುಗಳ ವಿಷಯ ಮಾತ್ರ ಮೌನವಾಗಿದೆ ಎಂದು ಇಂದು ಬೆಳಿಗ್ಗೆ ಮಕ್ಕಳ, ಶಿಕ್ಷಕರ, ಪೋಷಕರ ಮನದ ಮಾತು ಹೊತ್ತು ‘ತುಂಗಾತರಂಗ’ ವರದಿಗೆ ಪೂರಕವೆಂಬಂತೆ ಈಗ ಅಂದರೆ ಬೆಳಿಗ್ಗ ಒಂಬತ್ತರ ಹೊತ್ತಿಗೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಡಿಡಿಪಿಐ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಿದೆ.
ಇದಕ್ಕೂ ಮೊದಲು ತಾಲ್ಲೂಕಿನ ವಸ್ತುಸ್ಥಿತಿಯನ್ನು ಜಿಲ್ಲಾಡಳಿತದ ಗಮನಕ್ಕೆ ತರಲಾದ ಶಿವಮೊಗ್ಗ ಹಾಗೂ ಹೊಸನಗರ ಬಿಇಓಗಳು ಜಿಲ್ಲಾ ಅಪರ ಜಿಲ್ಲಾಧಿಕಾರಿಗಳ ಸೂಚನೆಯಂತೆ ರಜೆ ನೀಡಿದ್ದರು.


ರಾಜ್ಯ ಸರ್ಕಾರದ ರಾಜ್ಯದ 12 ಜಿಲ್ಲೆಗಳಲ್ಲಿ ರೆಡ್ ಅಲಾರ್ಟ್ ಘೋಷಿಸಿದ್ದರೆ, ನಾಲ್ಕು ಜಿಲ್ಲೆಗಳಲ್ಲಿ ಯಲ್ಲೋ ಅಲಾರ್ಟ್ ಘೋಷಿಸಿದೆ.
ನಿನ್ನೆ ಬೆಳಿಗ್ಗೆಯಿಂದ ಇಂದು ಈಗಿನವರೆಗೂ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಲ್ಲಿ ಬಾರೀ ಮಳೆಯಾಗುತ್ತಿದೆ.
ಅನಗತ್ಯ ದಿನಗಳಲ್ಲಿ ಉದ್ದೇಶವಿಲ್ಲದೇ ರಜೆ ಕೊಡುವ ವ್ಯವಸ್ಥೆ ನಡುವೆ ಇಂದಿನ ಪರಿಸ್ಥಿತಿ ಶಿಕ್ಷಣ ಇಲಾಖೆಗೆ ಅರ್ಥವಾಗದಿರುವುದು ದುರಂತದ ಸಂಗತಿ ಎಂದು ಬಹಳಷ್ಟು ಶಾಲೆಗಳ ಶಿಕ್ಷಕ ವೃಂದ ಆರೋಪಿಸಿದ್ದ ಬಗ್ಗೆ ವರದಿಯಲ್ಲಿ ಹೇಳಲಾಗಿತ್ತು.


ಇವತ್ತು ಬೆಳಿಗ್ಗೆಯೂ ಇಂತಹ ಮಳೆ ದಾರಾಕಾರವಾಗಿ ಸುರಿಯುತ್ತಿರುವಾಗ ಹೇಗೆ ತಾನೇ ಮಕ್ಕಳು ಶಾಲೆಗೆ ಬರಲು ಸಾದ್ಯ ಎಂದು ಪೋಷಕರು ಹಾಗೂ ಮಕ್ಕಳು ಆಕ್ಷೇಪಿಸಿದ್ದಾರೆ.

ಶಿವಮೊಗ್ಗ ತಾಲ್ಲೂಕಿನ ಶಾಲೆಗಳಿಗೆ ಇಂದು ರಜೆ https://tungataranga.com/?p=11141

ಶಿವಮೊಗ್ಗದಂತೆ ಹೊಸನಗರ ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಣೆ https://tungataranga.com/?p=11147


ಚುನಾವಣೆ, ಸರ್ಕಾರಿ ಇಲಾಖೆ ಕಾರ್ಯಕ್ರಮಗಳು, ಕರ್ತವ್ಯಗಳು ಬೇಕಿದ್ದರೆ ನಡೆಯಲಿ, ಆದರೆ, ಮೊನ್ನೆಯಷ್ಟೇ ಬಹಳ ಸಮಯದ ನಂತರ ಶಾಲೆಗೆ ಬರಲಾರಂಭಿಸಿದ ಮಕ್ಕಳಿಗೆ ಈ ಕಿರಿಕಿರಿ ಸಹ್ಯವಾಗುತ್ತದಾ? ಅಧಿಕಾರಿಗಳು ಯೋಚಿಸಬೇಕಿದೆ ಎಂದು ಹಲವು ಪ್ರಮುಖರು ತಿಳಿಸಿದ್ದ ಮಾಹಿತಿ ಸುದ್ದಿ ರೂಪದಲ್ಲಿ ಹರಡಿದ ಮೇಲೆ ಜಿಲ್ಲಾ ಶಿಕ್ಷಣ ಇಲಾಖೆ ಎಚ್ಚೆತ್ತಿದೆ.

By admin

ನಿಮ್ಮದೊಂದು ಉತ್ತರ

error: Content is protected !!