ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಶಿವಮೊಗ್ಗದ ರನ್ನರ‍್ಸ್ ಅಸೋಸಿಯೇಷನ್ ಕ್ರೀಡಾಪಟುಗಳು


ಶಿವಮೊಗ್ಗ, ಮೇ.೧೭:
ಶಾಲಾ ಕಾಲೇಜುಗಳಲ್ಲಿ ಕಲಿತ ಕ್ರೀಡೆಯನ್ನು ಮತ್ತೆ ಒಗ್ಗೂಡಿ ಕಲಿತು ರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಜಯಿಸಿ ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಕೀರ್ತಿ ಸಮಾನ ಮನಸ್ಕ ತಂಡವಾದ ಶಿವಮೊಗ್ಗದ ರನ್ನರ‍್ಸ್ ಅಸೋಸಿಯೇಷನ್‌ಗೆ ಸಲ್ಲುತ್ತದೆ.


ಪೊಲೀಸರು, ವಕೀಲರು, ಉದ್ಯಮಿಗಳು, ಶಿಕ್ಷಕರು, ಮೆಸ್ಕಾಂ ಅಧಿಕಾರಿಗಳು, ಶಿಕ್ಷಕರು, ವೈದ್ಯರು, ಇಂಜಿನಿಯರ್‌ಗಳು,ಕೃಷಿಕರು ಸೇರಿದಂತೆ ಎಲ್ಲಾ ಬಗೆಯ ವೃತ್ತಿಯ ನಡುವೆ ಪ್ರತಿದಿನ ಬೆಳಿಗ್ಗೆ ಬೇಟಿಯಾಗುತ್ತಿದ್ದ ನೆಹರೂ ಕ್ರೀಡಾಂಗಣದಲ್ಲೇ ಸಮಾನ ಚರ್ಚೆ ನಡೆದು ಆರಂಭಗೊಂಡ ಈ ಅಸೋಸಿಯೇಷನ್‌ನ ಏಳು ಕ್ರೀಡಾ ಪಟುಗಳು ಪ್ರಸಕ್ತ ವರುಷ ಮೇನಲ್ಲಿ ಬೆಂಗಳೂರನಲ್ಲಿ ನಡೆದ ರಾಷ್ಟ್ರ ಮಟ್ಟದ ಪ್ಯಾನ್ ಇಂಡಿಯಾ ಮಾಸ್ಟರ್ ಗೇಮ್ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡದ ಪರವಾಗಿ ಬಾಗವಹಿಸಿದ್ದ ಇವರು ತಲಾ ಎರಡಕ್ಕಿಂತ ಹೆಚ್ಚು ಪದಕ ಪಡೆಯುವ ಮೂಲಕ ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾ
ರೆ.


ಶಿವಮೊಗ್ಗ ಪೋದಾರ್‌ಶಾಲೆಯ ಶಿಕ್ಷಕ ನಾಗಾರ್ಜುನ್ ಲಾಂಗ್‌ಜಂಪ್, ಟ್ರಿಪ್ಪಲ್ ಜಂಪ್ನಲ್ಲಿ ಬಂಗಾರದ ಪದಕ, ನೂರು ಮೀಟರ್ ಓಟದಲ್ಲಿ ಕಂಚಿನ ಪದಕ, ಪೊಲೀಸ್ ಇಲಾಖೆಯ ಪ್ರಕಾಶ್ ಆರ್ ೮೦೦ ಮತ್ತು ೧೫೦೦ ಮೀ. ಓಟದಲ್ಲಿ ಬಂಗಾರದ ಪದಕ, ವಕೀಲರಾದ ಮಲ್ಲೇಶ್ ಸಿ.ಎನ್. ಅವರು ವೈಟ್ ಲಿಪ್ಟಿಂಗ್ ನಲ್ಲಿ ಬೆಳ್ಳಿ, ಜಾವಲಿನ್ ಎಸೆತದಲ್ಲಿ ಬಂಗಾರ, ಕೃಷಿಕರಾದ ಭದ್ರಪ್ಪ ೧೦೦ ಮೀ. ಓಟದಲ್ಲಿ ಬಂಗಾರ, ಕೈಗಾರಿಕೋದ್ಯಮಿ ಅಶೋಕ್ ಅವರು ೧೧೦ ಮೀಟರ್ ಹರ್ಡಲ್ ಓಟದಲ್ಲಿ ಬೆಳ್ಳಿ, ೪೦೦ ಮೀಟರ್ ಹರ್ಡಲ್ ಓಟದಲ್ಲಿ ಬಂಗಾರ ಮತ್ತು ಟ್ರಿಪ್ಪಲ್ ಜಂಪ್‌ನಲ್ಲಿ ಕಂಚಿನ ಪದಕ, ಟಿಸಿಎಸ್ ಉದ್ಯಮಿ ರಾಜೇಶ್ ಟ್ರಿಪ್ಪಲ್ ಜಂಪ್‌ನಲ್ಲಿ ಕಂಚಿನ ಪದಕ, ಮೆಸ್ಕಾಂನ ಎಇಇ ಯಶವಂತ ನಾಯ್ಕ್ ೧೧೦ ಮೀ.ಹರ್ಡಲ್ ಓಟದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.


ಈ ಎಲ್ಲಾ ಆಟಗಾರರು ಕಳೆದ ನಾಲ್ಕು ವರುಷಗಳಿಂದ ಸದ್ದಿಲ್ಲದೇ ನಿತ್ಯ ನೆಹರೂ ಕ್ರೀಡಾಂಗಣದಲ್ಲಿ ತರಬೇತಿ ಹಾಗೂ ತಯಾರಿ ಪಡೆದು ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ಭಾತರ ದೇಶವನ್ನು ಪ್ರತಿನಿಧಿಸಲಿದ್ದಾರೆ.
ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿರುವ ಕ್ರೀಡಾಪಟುಗಳನ್ನು ಶಿವಮೊಗ್ಗ ರನ್ನರ‍್ಸ್ ಅಸೋಸಿಯೇಷನ್ ಅದ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!