ಶಿವಮೊಗ್ಗ
ಬೆಂಗಳೂರು ಯುವತಿಯ ಮೇಲೆ ಆಸಿಡ್ ಎರಚಿ ಅಮಾನುಷ ಕೃತ್ಯ ಎಸಗಿ ಪರಾರಿಯಾಗಿದ್ದ ನಾಗೇಶ್ ನನ್ನು ನಮ್ಮ ಪೊಲೀಸರುಅತ್ಯಂತ ಶ್ರಮ ಮತ್ತು ದಕ್ಷತೆಯಿಂದ ನೆರೆಯ ರಾಜ್ಯವಾದ ತಮಿಳುನಾಡಲ್ಲಿ ಅಡಗಿದ್ದವನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸಿ ನಮ್ಮ ಪೋಲಿಸರು ಹೆಡೆಮುರಿ ಕಟ್ಟುವುದರ ಮೂಲಕ ದೇಶದಲ್ಲಿಯೇ, ಅತ್ಯಂತ ದಕ್ಷತೆ ಹಾಗೂ ವೃತ್ತಿಪರ ಪಡೆಯೆಂದು, ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇದಕ್ಕಾಗಿ ನಾನು ಪೊಲೀಸರನ್ನು ಅಭಿನಂದಿಸುತ್ತನೆ.ತಮಿಳು ನಾಡಿನ ಪೊಲೀಸರೂ, ಸಹ ಇಂತಹ ಹೀನ ಕೃತ್ಯ ನಡೆಸಿದ ಕಿರಾತಕ ನನ್ನು ಬಂಧಿಸುವ ಕಾರ್ಯದಲ್ಲಿ ನಮ್ಮ ಪೊಲೀಸರಿಗೆ ನೆರವಾಗಿದ್ದಾರೆ.ಅವರಿಗೂ ನನ್ನ ಅಭಿನಂದನೆಗಳು ಎಂದರು.
ಅಪರಾಧಿಗೆ ಅತ್ಯಂತ ಉಗ್ರ ಶಿಕ್ಷೆ ಯಾಗುವಂತೆ, ಅಪರಾಧಿಯನ್ನು, ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ದಲ್ಲಿ ಆರೋಪಿಯ ವಿಚಾರಣೆ ನಡೆಸಿ ಎಲ್ಲಾ ರೀತಿಯ ಕಾನೂನು ಕ್ರಮ ಜರುಗಿಸ ಲಾಗುತ್ತದೆ. ಎಂದರು,