ರೈಲುಗಳ ರದ್ದತಿ, ಭಾಗಶಃ ರದ್ದತಿ ಮತ್ತು ನಿಯಂತ್ರಣ ಕುರಿತ ಮಾಹಿತಿ ನಿಮಗಿರಲಿ

ಶಿವಮೊಗ್ಗ:    ದೇವನೂರು ಮತ್ತು ಬಾಣಾವರ ರೈಲ್ವೇ ಯಾರ್ಡ್‍ಗಳಲ್ಲಿ ಥಿಕ್ ವೆಬ್‍ಸ್ವಿಚ್ ಅಳವಡಿಸುವ ಕಾರ್ಯದ ಪ್ರಯುಕ್ತ ಲೈನ್ ಅಡಚಣೆಯಾಗಿರುವುದರಿಂದ ಕೆಳಕಂಡ ರೈಲುಗಳನ್ನು ರದ್ದು/ಭಾಗಶಃ ರದ್ದು/ನಿಯಂತ್ರಣಗೊಳಿಸಲಾಗುವುದು.

ರದ್ದು: ರೈಲು ಸಂಖ್ಯೆ 06591 ತುಮಕೂರು-ಶಿವಮೊಗ್ಗ ಪಟ್ಟಣ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲನ್ನು ದಿನಾಂಕ: 10-05-2022, 17-05-2022, 22-05-2022, 27-05-2022 ರಂದು ರದ್ದುಪಡಿಸಲಾಗಿದೆ. ಹಾಗೂ ರೈಲು ಸಂಖ್ಯೆ 06592 ಶಿವಮೊಗ್ಗ ಪಟ್ಟಣ-ತುಮಕೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲನ್ನು ದಿನಾಂಕ: 11-05-2022, 18-05-2022, 23-05-2022 ಮತ್ತು 28-05-22 ರಂದು ರದ್ದುಪಡಿಸಲಾಗಿದೆ.

ಭಾಗಶಃ ರದ್ದು : ರೈಲು ಸಂಖ್ಯೆ 07368 ಎಸ್‍ಎಸ್‍ಎಸ್ ಹುಬ್ಬಳ್ಳಿಯಿಂದ ಹೊರಡುವ ಎಸ್‍ಎಸ್‍ಎಸ್ ಹುಬ್ಬಳ್ಳಿ-ಅರಸೀಕೆರೆ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲನ್ನು ದಿನಾಂಕ 10-05-2022, 17-05-2022, 27-05-2022 ರಂದು ಬೀರೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಪಡಿಸಲಾಗುವುದು ಹಾಗೂ ಬೀರೂರು ಸ್ಟೇಷನ್‍ನಲ್ಲಿ ಸಮಾಪ್ತಿಗೊಳಿಸಲಾಗುವುದು.


       ಅರಸೀಕೆರೆಯಿಂದ ಹೊರಡುವ ರೈಲು ಸಂಖ್ಯೆ 07367 ಅರಸೀಕೆರೆ –ಎಸ್‍ಎಸ್‍ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ಸ್ಪೆಷಲ್ ರೈಲನ್ನು ದಿನಾಂಕ: 10.05.2022, 17.05.2022, 22.05.2022 & 27.05.2022 ರಂದು ಅರಸೀಕೆರೆ ಮತ್ತು ಶಿವಮೊಗ್ಗ ಪಟ್ಟಣದ ನಡುವೆ ಭಾಗಶಃ ರದ್ದುಪಡಿಸಲಾಗುವುದು ಹಾಗೂ ಅರಸೀಕೆರೆ ಸ್ಟೇಷನ್‍ನಲ್ಲಿ ಸಮಾಪ್ತಿಗೊಳಿಸಲಾಗುವುದು.


      ಶಿವಮೊಗ್ಗ ಪಟ್ಟಣದಿಂದ ಹೊರಡುವ ರೈಲು ಸಂಖ್ಯೆ 12090 ಶಿವಮೊಗ್ಗ ಪಟ್ಟಣ-ಕೆಎಸ್‍ಆರ್ ಬೆಂಗಳೂರು ಜನಶತಾಬ್ದಿ ಡೈಲಿ ಎಕ್ಸ್‍ಪ್ರೆಸ್ ರೈಲನ್ನು 11.05.2022, 18.05.2022, 23.05.2022 & 28.05.2022 ರಂದು ಶಿವಮೊಗ್ಗ ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಪಡಿಸಲಾಗುವುದು ಹಾಗೂ ನಿಗದಿತ ವೇಳಾಪಟ್ಟಿಯಂತೆ ಈ ರೈಲು ಶಿವಮೊಗ್ಗದ ಬದಲಾಗಿ ಅರಸೀಕೆರೆಯಿಂದ ಪ್ರಾರಂಭಿಸಲಾಗುವುದು.

ನಿಯಂತ್ರಣ : ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 16535 ಮೈಸೂರು-ಸೋಲಾಪುರ್ ಗೋಲ್‍ಗುಂಬಜ್ ಡೈಲಿ ಎಕ್ಸ್‍ಪ್ರೆಸ್ ರೈಲನ್ನು 10.05.2022, 17.05.2022, 22.05.2022 & 27.05.2022 ರಂದು ಸ್ಟೇಷನ್ ಮಾರ್ಗದಲ್ಲಿ 70 ನಿಮಿಷಗಳ ಕಾಲ ನಿಯಂತ್ರಣದಲ್ಲಿಡಲಾಗುವುದು(regulated).
    ಮಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 07378 ಮಂಗಳೂರು ಜೆಎನ್-ವಿಜಯಪುರ ಡೈಲಿ ಎಕ್ಸ್‍ಪ್ರೆಸ್ ಸ್ಪೆಷಲ್ ರೈಲನ್ನು 10.05.2022, 17.05.2022, 22.05.2022 & 27.05.2022 ರಂದು ಸ್ಟೇಷನ್ ಮಾರ್ಗದಲ್ಲಿ 70 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
       ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 16545 ಯಶವಂತಪುರ-ಕಾರಟಗಿ ಡೈಲಿ ಎಕ್ಸ್‍ಪ್ರೆಸ್ ರೈಲನ್ನು 10.05.2022, 17.05.2022, 22.05.2022 & 27.05.2022ಸ್ಟೇಷನ್ ಮಾರ್ಗದಲ್ಲಿ 15 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು ಎಂದು ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!