ಶಿವಮೊಗ್ಗ ಮೇ.09:
ನಗರದ ನೆಹರು ಕ್ರೀಡಾಂಗಣದಲ್ಲಿ ಮೇ ೬ ರಿಂದ ಮೇ ೮ ರವರೆಗೆ ಮೂರು ದಿನಗಳ ಕಾಲ ನಡೆದ ಪುನೀತ್‌ ರಾಜ್‌ ಕುಮಾರ್‌ ಕಪ್‌ ರಾಷ್ಟ್ರಮಟ್ಟದ ಫುಟ್ಬಾಲ್‌ ಪಂದ್ಯಾವಳಿಯಲ್ಲಿ ಬೆಂಗಳೂರಿನ ಆಶ್ರಯ ಫುಟ್ಬಾಲ್‌ ಕ್ಲಬ್‌ ತಂಡವು ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರೆ, ಮಹಿಳಾ ವಿಭಾಗದಲ್ಲೂ ಬೆಂಗಳೂರಿನ ಮಾಡ್ರರ್ನ್ಸ್‌ ಫುಟ್ಬಾಲ್‌ ತಂಡವು ಪ್ರಥಮ ಸ್ಥಾನ ಗೆದ್ದು ಕೊಂಡಿದೆ.

ಹಾಗೆಯೇ ಕ್ರಮವಾಗಿ ಪುರುಷರ ವಿಭಾಗದಲ್ಲಿ ಶಿವಮೊಗ್ಗದ ಅನಿಲ್‌ ಫ್ರೆಂಡ್ಸ್‌ ಫುಟ್ಬಾಲ್‌ ತಂಡ ಹಾಗೂ ಮಹಿಳೆಯ ವಿಭಾಗದಲ್ಲಿ ಮಂಗಳೂರು ಯುನೈಟೆಡ್‌ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡವು. ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನಕ್ಕೆ ೫೦ ಸಾವಿರ ನಗದು ಹಾಗೂ ಪಾರಿತೋಷಕ ನೀಡಲಾಯಿತು. ಹಾಗೆಯೇ ಮಹಿಳೆಯ ವಿಭಾಗದಲ್ಲಿನ ಪ್ರಥಮ ಸ್ಥಾನಕ್ಕೆ ೧೫ ಸಾವಿರ ನಗದು ಹಾಗೂ ಪಾರಿತೋಷಕ ನೀಡಲಾಯಿತು.


ಇನ್ನು ದ್ವಿತೀಯಸ್ಥಾನ ಪುರುಷರ ವಿಭಾಗದಲ್ಲಿ ೨೫ ಸಾವಿರ ನಗದು ಹಾಗೂ ಪಾರಿತೋಷಕ ನೀಡಿದರೆ, ಮಹಿಳೆಯ ವಿಭಾಗದಲ್ಲಿ ೧೦ ಸಾವಿರ ನಗದು ಹಾಗೂ ಪಾರಿತೋಷಕ ನೀಡಲಾಯಿತು.
ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ನೀಡಿಸನ್ಮಾನಿಸಲಾಯಿತು. ಪುನೀತ್‌ ರಾಜ್‌ ಕುಮಾರ್‌ ನೆನಪಿನಲ್ಲಿ ಮೂರು ದಿನಗಳ ಕಾಲ ನಡೆದ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಕರ್ನಾಟಕವು ಸೇರಿದಂತೆ ದೇಶದ ವಿವಿದೆಡೆಗಳಿಂದ ೩೫ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.
ರಾಷ್ಟ್ರೀಯ ಮಟ್ಟದ ಆಟಗಾರರ ಜತೆಗೆ ಅಂತಾರಾಷ್ಟ್ರೀಯ ಮಟ್ಟದ ಆಟಗಾರರು ಕೂಡ ವಿವಿಧ ತಂಡಗಳಲ್ಲಿ ಭಾಗವಹಿಸಿ, ಪಂದ್ಯಾವಳಿಗೆ ಹೊಸ ಮೆರಗು ನೀಡಿದ್ದರು.
ಪುನೀತ್‌ ರಾಜ್‌ ಕುಮಾರ್‌ ಅಭಿಮಾನಿಗಳ ಬಳಗ ಹಾಗೂ ಶಿವಮೊಗ್ಗ ಜಿಲ್ಲಾ ಫುಟ್ಬಾಲ್‌ ಸಂಸ್ಥೆಯ ಸಹಯೋಗದಲ್ಲಿ ಈ ಪಂದ್ಯಾವಳಿ ಆಯೋಜಿಸಲಾಗಿತ್ತು.
ಪಂದ್ಯಾವಳಿ ಯಶಸ್ವಿಯಾಗಿ ನಡೆದಿದ್ದರ ಕುರಿತು ಪುನೀತ್‌ ರಾಜ್‌ ಕುಮಾರ್‌ ಅಭಿಮಾನಿಗಳ ಬಳಗದ ಅಧ್ಯಕ್ಷ ಹರ್ಷಭೋವಿ ಸಂತಸ ಹಂಚಿಕೊಂಡಿದ್ದು, ನಿರೀಕ್ಷೆಯಂತೆ ಕ್ರೀಡಾಕೂಟ ಯಶಸ್ವಿಯಾಗಿ ನಡೆದಿದ್ದು. ಇದಕ್ಕೆ ಶಿವಮೊಗ್ಗ ಜನರ ಸಹಕಾರವೇ ಕಾರಣ ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!