ಶಿವಮೊಗ್ಗ, ಮೇ.09:
ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರ ಸರ್ಕಾರಿ ನಿವಾಸದ ಆವರಣದಲ್ಲಿ ನಾಗರಹಾವೊಂದು ಅಲ್ಲಿನ ಸಿಬ್ಬಂದಿಗಳಿಗೆ ಕಾಣಿಸಿಕೊಂಡಿದೆ.
ಜಿಲ್ಲಾಧಿಕಾರಿಗಳ ಮನೆ ಹಿಂಭಾಗದ ಗಾರ್ಡನ್ ನಲ್ಲಿದ್ದ ಕಲ್ಲು ಚಪ್ಪಡಿಯ ಕೆಳಭಾಗದಲ್ಲಿ ಕಪ್ಪೆಯೊಂದನ್ನು ಹಾವೊಂದು ತಿನ್ನುತ್ತಿದ್ದನ್ನು ಅಲ್ಲಿನ ಸಿಬ್ಬಂದಿಗಳು ನೋಡಿದ್ದಾರೆ.
ಪ್ರಾಣಿ, ಪಕ್ಷಿ ಪ್ರಿಯರಾದ ಜಿಲ್ಲಾಧಿಕಾರಿಗಳಿಗೆ ಈ ಮಾಹಿತಿ ತಲುಪಿದೆ. ಅದನ್ನು ಸೇಪಾಗಿ ಕಳುಹಿಸಲು ಸೂಚಿಸಿದ್ದಾರೆನ್ನಲಾಗಿದೆ. ಕೂಡಲೇ ಸಿಬ್ಬಂದಿಗಳು ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕಾಗಮಿಸಿದ ಕಿರಣ್, ಸುಮಾರು ಮೂರೂವರೆ ಅಡಿ ಉದ್ದದ ನಾಗರಹಾವನ್ನು ಹಿಡಿದು ಸಂರಕ್ಷಿಸಿದ್ದಾರೆ.
ಕಳೆದ ಹಲವು ದಿನಗಳಿಂದ ನಿವಾಸದ ಸುತ್ತಮುತ್ತಲು ಹಾವು ಓಡಾಡುತ್ತಿತ್ತು. ಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಅರಣ್ಯಕ್ಕೆ ಬಿಡಲಾಗಿದೆ ಎಂದು ಸ್ನೇಕ್ ಕಿರಣ್ ಅವರು ಮಾಹಿತಿ ನೀಡಿದ್ದಾರೆ.