ಶಿವಮೊಗ್ಗ, ಮೇ೦೭:
ಕೆ.ಪಿ.ಎಸ್.ಸಿ. ಹಗರಣದಲ್ಲಿ ಭಾಗಿಯಾಗಿ ರುವ ಸಂಸದ ಡಿ.ಕೆ. ಸುರೇಶ್ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಆಗ್ರಹಿಸಿ ರಾಷ್ಟ್ರ ಭಕ್ತರ ಬಳಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.


ಕೆ.ಪಿ.ಎಸ್.ಸಿ.ಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂ.ಗಳ ಲಂಚವನ್ನು ಸಂಸದ ಡಿ.ಕೆ. ಸುರೇಶ್ ಪಡೆದಿದ್ದಾರೆ. ಸುಮಾರು ೨೫ ಲಕ್ಷ ರೂ. ಪಡೆದಿರುವ ಬಗ್ಗೆ ಈಗಾಗಲೇ ಅಭ್ಯರ್ಥಿ ಟಿ.ಎಸ್. ಲೋಕೇಶ್ ಎಂಬುವವರು ಮಾಧ್ಯಮ ಗಳ ಮೂಲಕ ತಿಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಅವರ ಭ್ರಷ್ಟಾಚಾರ ಕೆಪಿಸಿಸಿ ಕಚೇರಿಯಿಂದಲೇ ಆರಂಭಗೊಂಡಿದೆ. ಈ ಇಬ್ಬರು ಸಹೋದರರು ಸುಮಾರು ೮೦೦ ಕೋಟಿ ರೂ.ಗೂ ಹೆಚ್ಚು ಬೇನಾಮಿ ಆಸ್ತಿ ಮಾಡಿದ್ದಾರೆ. ಐಟಿ ಮತ್ತು ಇಡಿ ದಾಳಿಯಲ್ಲಿ ೨೦೦ ಕೋಟಿಗೂ ಹೆಚ್ಚು ಬೇನಾಮಿ ಆಸ್ತಿ ಪತ್ತೆಯಾಗಿದೆ ಎಂದು ದೂರಿದರು.


೨೦೧೭ ರಲ್ಲಿ ಕೆ.ಪಿ.ಎಸ್.ಸಿ. ಜಿಲ್ಲಾ ಅಲ್ಪಸಂಖ್ಯಾತರ ಅಧಿಕಾರಿ ಉದ್ಯೋಗಕ್ಕೆ ಅರ್ಜಿ ಕರೆಯಲಾಗಿತ್ತು. ೨೦೧೮ ರಲ್ಲಿ ಪರೀಕ್ಷೆ ಬರೆದು ೨೦೧೯ ರಲ್ಲಿ ಸಂದರ್ಶನ ನಿಗದಿಯಾಗಿತ್ತು. ಈ ಎಲ್ಲಾ ಪ್ರಕ್ರಿಯೆಗಳಲ್ಲಿಯೂ ಡಿ.ಕೆ. ಸುರೇಶ್ ಭಾಗಿಯಾಗಿದ್ದಾರೆ. ಲೋಕೇಶ್ ಅವರಿಗೆ ಉದ್ಯೋಗ ನೀಡುವ ಭರವಸೆ ಕೂಡ ಕೊಡಲಾಗಿ ತ್ತು. ಡಿ.ಕೆ. ಸುರೇಶ್ ಅವರ ಈ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು. ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ರಾಷ್ಟ್ರ ಭಕ್ತರ ಬಳಗ ಮನವಿಯಲ್ಲಿ ಆಗ್ರಹಿಸಿದೆ.


ಪ್ರತಿಭಟನೆಯಲ್ಲಿ ರಾಷ್ಟ್ರ ಭಕ್ತರ ಬಳಗದ ಪ್ರಮುಖರಾದ ಮೋಹನ್ ರಾವ್ ಜಾಧವ್, ಚೇತನ್, ವಿಕ್ರಂ, ಇ. ವಿಶ್ವಾಸ್, ಮುರುಗೇಶ್, ರಾಧಾ ಗುರುದತ್ತ, ಸೋಮೇಶ್ ಶೇಟ್, ಪುರುಷೋತ್ತಮ್ ಮೊದಲಾದವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!