ಸಾಗರ : ತಾಲ್ಲೂಕಿನ ತ್ಯಾಗರ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೋಟೆಕೊಪ್ಪ ಗ್ರಾಮದಲ್ಲಿ ಬಂಗಾರದ ಸರ ಪಾಲೀಶ್ ಮಾಡಿಕೊಡುವ ನೆಪದಲ್ಲಿ ಇಬ್ಬರು ಅಪರಿಚಿತರು ಮಹಿಳೆಯೊಬ್ಬರಿಗೆ ಮಂಕುಬೂದಿ ಎರಚಿ ೪೦ಗ್ರಾಂ ತೂಕದ ಮಾಂಗಲ್ಯ ಸರ ಅಪಹರಿಸಿಕೊಂಡು ಹೋದ ಘಟನೆ ಮಂಗಳವಾರ ನಡೆದಿದೆ.
ಇಬ್ಬರು ಅಪರಿಚಿತರು ಕೋಟೆಕೊಪ್ಪ ಗ್ರಾಮದ ಕೆಲವು ಮನೆಗಳಿಗೆ ಹೋಗಿ ಬೆಳ್ಳಿ ಮತ್ತು ಬಂಗಾರದ ಆಭರಣವನ್ನು ಪಾಲೀಸ್ ಮಾಡಿಕೊಡುವ ಕೆಲಸ ಮಾಡಿದ್ದಾರೆ. ಮನೆ ಎದುರು ಬೇರೆಬೇರೆ ರಾಸಾಯನಿಕ ಬೆಳೆಸಿ ಬೆಂಕಿ ಹಾಕಿ ಬೆಳ್ಳಿ ಆಭರಣ ಪಾಲೀಸ್ ಮಾಡಿ ಕೊಟ್ಟಿದ್ದಾರೆ.


ಸಂಜೆ ೫ರ ಸುಮಾರಿಗೆ ಮಂಜಪ್ಪ ಅವರ ಪತ್ನಿ ಸರೋಜಮ್ಮ ಅವರ ಮನೆಗೆ ಬಂದ ಇಬ್ಬರು ಅಪರಿಚಿತರು ಮೊದಲು ಬೆಳ್ಳಿ ಗೆಜ್ಜೆಯನ್ನು ಪಾಲೀಸ್ ಮಾಡಿ ಕೊಟ್ಟಿದ್ದಾರೆ. ನಂತರ ಕುತ್ತಿಗೆಯಲ್ಲಿರುವ ಬಂಗಾರದ ಮಾಂಗಲ್ಯ ಸರವನ್ನು ಪಾಲೀಸ್ ಮಾಡಿ ಕೊಡುವುದಾಗಿ ನಂಬಿಸಿ ಮುಖಕ್ಕೆ ಮಂಕುಬೂದಿ ಎರಚಿ ಸುಮಾರು ೨ ಲಕ್ಷ ರೂ. ಮೌಲ್ಯದ ೪೦ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರ ಅಪಹರಿಸಿಕೊಂಡು ಗದ್ದೆ ಬಯಲಿನಲ್ಲಿ ಓಡಿ ಹೋಗಿದ್ದಾರೆ.


ಸ್ಥಳೀಯರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!