Tunga Taranga News, April,23,2022 | Special News

ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಲ್ಲಿ ಓಸಿ, ಇಸ್ಪೀಟ್ ಸೇರಿದಂತೆ ಎಲ್ಲಾ ಬಗೆಯ ಅಕ್ರಮ ದಂಧೆಗಳು ಸದ್ದು ಮಾಡದೇ ಮಿತಿ ಮೀರುತ್ತಿವೆ. ಅದರ ನಡುವೆ ಸುದ್ದಿಗಳು ಕಳೆದೋಗಿವೆ. ರಕ್ಷಣಾ ಇಲಾಖೆ ಅನಗತ್ಯ ಕಿರಿಕ್ ಗಳ ವಿಚಾರದಲ್ಲಿ ತಲ್ಲೀನರಾಗಿದ್ದಾರೆ.
ಅನಗತ್ಯ ಕಿರಿಕ್ ಎಂದರೆ, ಹಿಜಾಬ್, ಸಂತೋಷನ 40 ಪರ್ಸೆಂಟೇಜ್, ಹರ್ಷ ಕೊಲೆ ಇಂತಹ ವಿಷಯಗಳ ಓಡಾಟ ಜಾಸ್ತಿಯಾಗಿದೆ ಅಷ್ಟೇ.
ಇದರ ನಡುವೆ ಸದ್ದು ಗದ್ದಲವಿಲ್ಲದೇ, ಓಸಿ ಹೈ ಅಲಾರ್ಟ್ ಆಗಿದೆ.
ನಗರದ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಕನಿಷ್ಟ ಇನ್ನೂರು ಕಡೆ ಚೀಟಿ ಬರೆಯುತ್ತಾರೆ. ಗ್ರಾಮೀಣ ಭಾಗದಲ್ಲಿ ಕನಿಷ್ಟ ಹತ್ತು ಕಡೆ ಈ ವ್ಯವಹಾರ ನಡೆಯುತ್ತಿದೆ.
ಅದರ ನಡುವೆ ಮತ್ತೆ ಸದ್ದಿಲ್ಲದೇ ಇಸ್ಪೀಟ್ ದಂಧೆ ನಗರ ಹಾಗೂ ಹೊರವಲಯದಲ್ಲಿ ನಡೆಯುತ್ತಿದೆ. ಹೋಗಿ ಬಂದ ಕೆಲವರಿಗೆ ಮಾಮೂಲಿ ಸಿಗುತ್ತಿದೆಯಷ್ಟೇ. ಸ್ಟಾಂಡರ್ಡ್ ಹೆಸರಿಸ ಕ್ಲಬ್ ಗಳು ಇದನ್ನೇ ದಂದೆ ಮಾಡಿಕೊಂಡಿವೆ.
ಈ ನಡುವೆ ಶಿವಮೊಗ್ಗದ ಕೋಟೆ ಪೊಲೀಸರು ಸದ್ದಿಲ್ಲದೇ ನಿನ್ನೆ ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಶಿವಮೊಗ್ಗದ ಹೃದಯ ಭಾಗದಲ್ಲಿರುವ ರೋವರ್ಸ್​ ಕ್ಲಬ್​ ಮೇಲೆ ದಾಳಿ ನಡೆಸಿ 40 ಜನರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.
ರೋವರ್ಸ್ ಕ್ಲಬ್ ನಲ್ಲಿ ಕ್ಲಬ್ ನ ಸದಸ್ಯರನ್ನ ಹೊರತುಪಡಿಸಿ ಇತರೆಯವರಿಗೆ ಇಸ್ಪೀಟ್ ಆಡಲು ಅವಕಾಶವಿಲ್ಲ. ಆದರೆ ಇತರರಿಗೆ ಕ್ಲಬ್ ನಲ್ಲಿ ಇಸ್ಪೀಟ್ ಆಡಲು ಅವಕಾಶವಿಲ್ಲ. ಅವಕಾಶ ನೀಡಿದ ಬೆನ್ನಲ್ಲೇ ಕೋಟೆ ಪೊಲೀಸ್ ಠಾಣೆಯ ಪಿಐ ಚಂದ್ರಶೇಖರ್ ನೇತೃತ್ವದಲ್ಲಿ ಭರ್ಜರಿ ದಾಳಿ ನಡೆದಿದೆ. 1 ಲಕ್ಷದ 76ಸಾವಿರದ 318ರೂ.ಗಳನ್ನ ಸೀಜ್ ಮಾಡಲಾಗಿದೆ.

ಜನಈ ದಾಳಿ ಇಸ್ಪೀಟ್ ದಂಧೆ ಮಾಡುವವರಿಗೆ ಬಿಗ್ ಶಾಕ್ ಇರಬಹುದಾ? ಅಥವಾ ಇದು ನೆಪ ಮಾತ್ರದ್ದಾ…? ಉಳಿದೆಲ್ಲಾ ಕ್ಲಬ್ ಗಳು ನೀಟಾಗಿವೆವೆಯಾ? ಅಲ್ಲಿ ಕಾರ್ಡ್ ಮುಟ್ಟೋದೇ ಇಲ್ಲವಾ? ಓಸಿ ಕಾಣ್ತಿಲ್ವಾ…? ನಮ್ ಓದುಗರ ವಿವೇಚನೆ, ಚರ್ಚೆ ಹಾಗೂ ಪ್ರತಿಕ್ರಿಯೆಗಳಿಗೆ ತಕ್ಕಂತೆ ವರದಿ ಬರುತ್ತೆ.

By admin

ನಿಮ್ಮದೊಂದು ಉತ್ತರ

You missed

error: Content is protected !!