ನಮ್ಮಪಕ್ಷದ ಪಂಚರತ್ನ ಕಾರ್ಯಕ್ರಮವನ್ನ ಅಧಿಕಾರಕ್ಕೆ ಬಂದ ಮೇಲೆ ನೆರವೇರಿಸದಿದ್ದರೆ ನನ್ನ ಪಕ್ಷವನ್ನ ವಿಸರ್ಜಿಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರ ಸ್ವಾಮಿ ಘೋಷಿಸಿದ್ದಾರೆ.
ಅವರು ತಾಲೂಕಿನ ಕುಂಸಿಯಲ್ಲಿ ಜನತಾ ಜಲಧಾರೆ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿ, ಶಿಕ್ಷಣ,ಆರೋಗ್ಯ ವಸತಿ ಉದ್ಯೋಗ ಮತ್ತು ಸ್ವಾವಲಂಬಿ ಜೀವನಕ್ಕೆ ರೂಪು ರೇಷ ಹಮ್ಮಿಕೊಂಡಿದ್ದೇನೆ. ಈ ಕಾರ್ಯಕ್ರಮವನ್ನ ಜನತಾ ಜಲಧಾರೆಯ ನಂತರ ಪ್ರಕಟಿಸುವೆ ಎಂದರು.
ಯಾವುದೇ ಖಾಯಿಲೆ ಕಾಣಿಸಿಕೊಂಡರೂ ಗ್ರಾಪಂ ವ್ಯಾಪ್ತಿಯಲ್ಲಿ 24 ಗಂಟೆ ವೈದ್ಯರ ಸೇವೆ, ಮತ್ತು ಆಸ್ಪತ್ರೆ ವ್ಯವಸ್ಥೆ ಮಾಡಲಾಗುತ್ತದೆ. ರೈತ ಸಾಲಗಾರ ಆಗಬಾರದು. ಮುಂದಿನ ದಿನಗಳಲ್ಲಿ ಪ್ರತಿ ಕುಡುಂಬಕ್ಕೂ ಉದ್ಯೋಗ, ಸ್ವಂತ ಉದ್ಯೋಗಕ್ಕೂ ರೂಪರೇಷ ನೀಡಲಿದ್ದೇನೆ. ಚುನಾವಣೆಯ ಸಂದರ್ಭದಲ್ಲಿ ಮಾಹಿತಿ ನೀಡಲ್ಲ. ಈಗಲೇ‌ ಘೋಷಿಸುವೆ ಎಂದರು.

ಶಾರದಾ ಪೂರ್ಯಾನಾಯ್ಕ್ ರಿಗೆ ಖಂಡಿತ ಸಚಿವಗಿರಿ

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಶಾರದಾ‌ಪೂರ್ಯನಾಯ್ಕ ಗೆಲ್ಲಿಸಿದರೆ ಉತ್ತಮ ಸಚಿವ ಸ್ಥಾನ ನೀಡುವುದಾಗಿ ಘೋಷಿಸಿದ ಮಾಜಿ ಸಿಎಂ ಸರ್ಕಾರಿ ಶಾಲೆಯನ್ನ 1 ರಿಂದ 12 ರವರೆಗೆ 6000 ಗ್ರಾಪಂನಲ್ಲಿ ಉಚಿತ ಶಿಕ್ಷಣವನ್ನ ನೀಡಲಾಗುವುದು. ನಿಮ್ಮ ಮಕ್ಕಳಿಗೆ ಯಾವ ಖಾಸಗಿ ಶಾಲೆಗೂ ಕಡಿಮೆಯಾಗದಂತೆ ಶಿಕ್ಷಣ ವ್ಯವಸ್ಥೆ ರೂಪಿಸಲಾಗುವುದು ಎಂದರು.

ಮದುವೆ ಆಗದ ಮಹಿಳೆಯರಿಗೆ, ವಿಧವೆಯರಿಗೆ ಅಂಗವಿಕಲ ಮಹಿಳೆಯರಿ ತಿಂಗಳ ವೇತನ ಮತ್ತು ವೃದ್ಧರಿಗೆ ಪ್ರತಿ ತಿಂಗಳು 5000 ರೂ. ವೇತನ ನೀಡಲಾಗುವುದು ಎಂದು ಕುಮಾರ ಸ್ವಾಮಿ ಈ ಯೋಜನೆಯನ್ನ ನನ್ನ ಮನೆಯಿಂದ ತಂದು ಕೊಡೊಲ್ಲ. ರಾಜ್ಯದ ಖಜಾನೆಯನ್ನ ನೀವುಗಳು ದರಿರ್ದ್ರವಾಗಿಸಲು ಬಿಟ್ಟಿಲ್ಲ. 30-40 ಸೀಟನ್ನ ಗೆಲ್ಲಲು ನನಗೆ ಕಷ್ಟವನ್ನ. ಆದರೆ ಇದರಿಂದ ಏನು ಮಾಡಲಿ ಎಂದು ಪ್ರಶ್ನಿಸಿದರು.

ಕಮಿಷನ್ ಎಕ್ಸಪೆಕ್ಟ್ ಮಾಡಿಲ್ಲ

ಕಳೆದ ಚುನಾವಣೆಯಲ್ಲಿ ರೈತರ ಆತ್ಮಹತ್ಯೆ ಹಿನ್ಬಲೆಯಲ್ಲಿ ರೈತರ ಸಾಲ ಮನ್ನ ಮಾಡಲಾಗುತ್ತದೆ ಎಂದಿದ್ದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಗೇಲಿ ಮಾಡಿದವು. ಆದರೆ ಕಾಂಗ್ರೆಸ್ ಸರ್ಕಾರದ ಜೊತೆ 14 ತಿಂಗಳಲ್ಲಿ 25 ಸಾವಿರ ಕೋಟಿ ಸಾಲ ಮನ್ನ ಮಾಡಿದೆ. ಕಮಿಷನ್ ಕೇಳಿದೆನಾ?
ಸಂಪೂರ್ಣ ಅಧಿಕಾರವಿಲ್ಲವೆಂದು ಸುಳ್ಳು ಹೇಳಿ ರೈತರ ಸಾಲವನ್ನ ಮನ್ನ ಮಾಡದೆ ಜಾರಿಕೊಳ್ಳಬಹುದು. ಕಮಿಷನ್ ಎಕ್ಸಪೆಕ್ಟ್ ಮಾಡಿದ್ದರೆ ಲೂಟಿ ಮಾಡಬಹುದಿತ್ತು. ಇದನ್ನ ಸರಿಪಡಿಸುವರು ಯಾರು ಎಂದು ಪ್ರಶ್ನಿಸಿದರು

2006 ರವೆಗೂ ಬಿಜೆಪಿ ನಾಯಕರ ಆಸ್ತಿ ಎಷ್ಟಿತ್ತು ಈಗ ಎಷ್ಟಿದೆ?

2006 ಇಸವಿಗೂ ಮುಂಚೆ ಬಿಜೆಪಿ ನಾಯಕರ ಆಸ್ತಿ ಎಷ್ಟಿತ್ತು. ಕಣ್ಣಿಗೆ ಕಾಣುತ್ತೆ ಆದರೂ ನೀವು ಅವರಿಗೆ ಮತಕೊಡುತ್ತೀರಿ. ಸರ್ಕಾರದಲ್ಲಿ ವಿದವೆ ಮತ್ತು ಅಂಗವಿಕಲರಿಗೆ ನೀಡುವ‌ ವೇತನ ಹಣ 200 ರೂ ನಿಂದ 800 ಏರಿಸಿ ಮೊನ್ನೆ 2018 ರಲ್ಲಿ 1500 ಏರಿಸಿದ್ದೇನೆ ಕಮಿಷನ್ ಎಕ್ಸಪೆಕ್ಟ್ ಮಾಡಿಲ್ಲ ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!