ರುಚಿ ಪರಸನಹಳ್ಳಿ., ಸಾಹಿತಿಗಳು
ಕರ್ನಾಟಕ ಸರಕಾರ ನೀಡಿರುವ ಮಕ್ಕಳ ಕಲ್ಯಾಣ ಕ್ಷೇತ್ರ ರಾಜ್ಯ ಪ್ರಶಸ್ತಿ ಪುರಸ್ಕೃತರು ೯೯೪೫೮೮೬೮೦೪


(ಬೇಸಿಗೆ ರಜೆಯಲ್ಲಿ ಮಕ್ಕಳ ಕಲಿಕೆ ನಿರಂತರವಾಗಿರಲು)


ಶಾಲೆಗಳಿಗೆ ಬೇಸಿಗೆ ರಜೆಯ ದಿನಗಳು ಸಮೀಪಿಸು ತ್ತಿದ್ದಂತೆ ಮಕ್ಕಳಿಗೆ ಎಲ್ಲಿಲ್ಲದ ಖುಷಿಯೋ ಖುಷಿ. ಕಾರಣ ಶಾಲೆಗೆ ಬೇಸಿಗೆ ರಜೆ ಇರುವುದರಿಂದ ಮತ್ತು ಕೋವಿಡ್ ೧೯ ಸಂದರ್ಭದಲ್ಲಿ ಕನಿಷ್ಠ ೧೮ ತಿಂಗಳ ಶಾಲಾ ಭೌತಿಕ ತರಗತಿಗಳು ನಡೆಯಲಿಲ್ಲ . ಇಂತಹ ಸಂದರ್ಭದಲ್ಲಿ ನಮ್ಮ ಮಕ್ಕಳ ಕಲಿಕಾ ಸಾಮರ್ಥ್ಯಗಳು ಕ್ಷೀಣಿಸಿರುವ ಸಂದರ್ಭ ನಮ್ಮ ಗಮನಕ್ಕೆ ಹಲವಾರು ವರದಿಗಳಿಂದ ಹಾಗೂ ನಮ್ಮ ಮಕ್ಕಳ ಕಲಿಕೆಯನ್ನು ನಾವೂ ಮನೆಯಲ್ಲಿ ಪರಿಶೀಲಿಸಿದಾಗ ಕಂಡುಕೊಂಡಿದ್ದೇವೆ .


ಈ ಬಾರಿಯ ಬೇಸಿಗೆ ರಜೆಯಲ್ಲಿ ಮಕ್ಕಳ ಕಲಿಕೆ ನಿರ್ವ ಹಣೆ ನಿರಂತರವಾಗಿ ಇರುವಂತೆ ನೋಡಿಕೊಂಡು ಹೋಗುವ ಜವಾಬ್ದಾರಿಯು ಪ್ರತಿ ಒಬ್ಬ ಪಾಲಕ ಪೋಷಕರ ಮೇಲಿದೆ ಎಂದು ಪಾಲಕರಾದ ನಾವು ತಿಳಿದುಕೊಂಡು ಕಾರ್ಯ ಪ್ರವೃತ್ತರಾಗಬೇಕು.
೨೦೨೧-೨೦೨೨ ನೇ ಶೈಕ್ಷಣಿಕ ಸಾಲಿನಲ್ಲಿ ಕೋವಿಡ್ ಕಾರಣದಿಂದಾಗಿ ಕನಿಷ್ಠ ತಿಂಗಳು ಮಾತ್ರ ಮಕ್ಕಳ ಶಾಲಾ ಭೌತಿಕ ತರಗತಿಗಳು ನಡೆದಿವೆ. ಅಷ್ಟೊತ್ತಿಗಾಗಲೇ ಬೇಸಿಗೆ ರಜೆ ಬಂದೇ ಬಿಟ್ಟಿತು. ಇಂತಹ ಸಂದರ್ಭದಲ್ಲಿ ನಮ್ಮ ಗ್ರಾಮೀಣ ಮಕ್ಕಳ ಕಲಿಕಾ ನಿರಂತರತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು? ಮಕ್ಕಳನ್ನು ಮನೆಯಲ್ಲಿ ಹೇಗೆ ಕಲಿಕೆಯಲ್ಲಿ ತೊಡಗಿಸಬೇಕು? ಪಾಲಕರಾದ ನನ್ನ ಕರ್ತವ್ಯ ಜವಾಬ್ದಾರಿಗಳೆನು? ಜೊತೆಗೆ ಮಕ್ಕಳೊಂದಿಗೆ ಯಾವ ಯಾವ ಚಟುವಟಿಕೆಗಳು ಮಾಡುವ ಮೂಲಕ ಕಾಲ ಕಳೆಯಬಹುದು? ಇತ್ಯಾದಿಗಳ ನಿರ್ವಹಣೆ ಮಾಡುವ ಮೂಲಕ ನಾವು ಅಂದರೆ ಪ್ರತಿ ಮಗುವಿನ ಪಾಲಕ – ಪೋಷಕರು ಶಿಕ್ಷಕರಾಗ ಬೇಕಿದೆ. ಈ ಎಲ್ಲಾ ಅಂಶಗಳನ್ನು ಆಧರಿಸಿ ನಮ್ಮ ನಮ್ಮ ಮನೆಯಲ್ಲಿ ನಮ್ಮ ಮಕ್ಕಳೊಂದಿಗೆ ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ನಾವೂ ನಿರ್ವಹಿಸಬಹುದು.

  • ಪೋಷಕರು ಶಿಕ್ಷಕರ ಸ್ಥಾನದಲ್ಲಿ ನಿಂತು ಮಾಡಬೇಕಾದ ಕಾರ್ಯಗಳು :-
    ೧ ) ಪ್ರತಿಯೊಬ್ಬ ಪಾಲಕ ಪೋಷಕರು ತಮ್ಮ ಬಿಡುವಿನ ನಿರ್ದಿಷ್ಟ ಸಮಯ ಗುರುತಿಸಿಕೊಂಡಿರಬೇಕು.
    ೨) ಬೇಸಿಗೆ ರಜೆ ಅವಧಿಯನ್ನು ಗಮನದಲ್ಲಿಟ್ಟು ಕೊಂಡಿರಬೇಕು
    ೩) ಒಂದು ದಿನದಲ್ಲಿ ಮಕ್ಕಳ ಕಲಿಕಾ ಅವಧಿ ಗುರುತಿಸಿ.
    ೪) ಕೋವಿಡ್ ಸಂದರ್ಭದಲ್ಲಿ ಮಕ್ಕಳ ಕಲಿಕೆ ಕುಂಠಿತ ವಾಗಿರುವ ಬಗ್ಗೆ ಗಮನವಿರಲಿ.
    ೫) ಬೇಸಿಗೆ ರಜೆ ಅವಧಿಯಲ್ಲಿ ಮಕ್ಕಳ ಕಲಿಕಾ ನಿರಂ ತರತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು.
    ೬) ಬಿಸಿಲಿನ ತಾಪ ಹೆಚ್ಚು ಇರುವುದರಿಂದ ಮಕ್ಕಳ ಆರೋಗ್ಯದ ಬಗ್ಗೆ ಹೇಗೆ ನಿಗಾ ವಹಿಸಬಹುದು.
    ೭) ಮನೆಯಲ್ಲಿ ಮಕ್ಕಳಿಗೆಂದೇ ಒಂದು ನಿರ್ದಿಷ್ಟ ಓದುವ ಸ್ಥಳ ಗುರುತಿಸಬೇಕು.
    ೮) ಮಕ್ಕಳೊಂದಿಗೆ ಆಟ ಆಡುವುದು
    ೯) ಪಾಲಕ ಪೋಷಕರು – ಶಿಕ್ಷಕರೊಂದಿಗೆ ಪೋನ್ ಸಂಪರ್ಕ ( ಮಕ್ಕಳ ಕಲಿಕೆ ಕುರಿತು ಚರ್ಚೆ )
    ೧೦) ಮಕ್ಕಳೊಂದಿಗೆ ಔಪಚಾರಿಕ ಸಂವಹನ ಚರ್ಚೆ ಅಥವಾ ಕಥೆ ಹಾಗೂ ಹಾಡು ಹೇಳುವುದು.

೧) ಪ್ರತಿಯೊಬ್ಬ ಪಾಲಕ ಪೋಷಕರು ತಮ್ಮ ಬಿಡುವಿನ ನಿರ್ದಿಷ್ಟ ಸಮಯ ಗುರುತಿಸಿಕೊಂಡಿರಬೇಕು :-
ಪಾಲಕ ಪೋಷಕರು ತಮ್ಮ ದಿನ ನಿತ್ಯದ ಸಾಂಸಾರಿಕ ಜೀವನದಲ್ಲಿ ಬಿಡುವಿಲ್ಲದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿರುವುದರಿಂದ ಆ ಸಮಯದಲ್ಲಿ ತಮಗೆ ಯಾವುದು ಸೂಕ್ತ ಬಿಡುವಿನ ಸಮಯ ಎಂದು ಅನಿಸುತ್ತದೆ ಆ ಸಮಯ ಮಾತ್ರ ( ಬೆಳಿಗ್ಗೆ ಅಥವಾ ಸಾಯಂಕಾಲ) ಬಳಸಿಕೊಂಡು ನಿತ್ಯ ಆ ಸಮಯಕ್ಕೆ ತಾವೂ ಪೂರ್ವ ಸಿದ್ಧತೆ ಮಾಡಿಕೊಂಡು ಮಕ್ಕಳೊಂದಿಗೆ ತೊಡಗಿಸಿ ಕೊಳ್ಳಬೇಕು.
೨)ಬೇಸಿಗೆರಜೆ ಅವಧಿಯನ್ನು ಗಮನದಲ್ಲಿ ಟ್ಟುಕೊಂಡಿರಬೇಕು :-೨೦೨೨ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಕನಿಷ್ಠ ೩೫ ರಜೆ ದಿನಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮದೆ ಆದ ಒಂದು ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಳ ಮಾಡುವಲ್ಲಿ ಈ ಸಮಯ ಸದ್ಭಳಕೆ ಮಾಡಬೇಕಾಗಿದೆ. ಆದ್ದರಿಂದ ಈ ದಿನಗಳ ಸಮಯ ತಮ್ಮ ಬಿಡುವಿಲ್ಲದ ಸಮಯವಾಗಿದ್ದರೂ ಸಹ ನಮ್ಮ ಮಕ್ಕಳ ಭವಿಷ್ಯದ ಕುರಿತು ತಾರ್ಕಿಕವಾಗಿ ಯೋಚಿಸಿ ರಜಾ ದಿನಗಳನ್ನು ಬಳಸಿಕೊಳ್ಳಲು ತಯಾರಿ ಮಾಡಿಕೊಂಡಿರಬೇಕು.
೩) ಒಂದು ದಿನದಲ್ಲಿ ಮಕ್ಕಳ ಕಲಿಕಾ ಅವಧಿ ಗುರುತಿಸಿ :- ಪಾಲಕ ಪೋಷಕರು ಪ್ರತಿ ದಿನ ತಮಗೆ ಯಾವ ಸಮಯ ಸೂಕ್ತವೋ ಆ ಸಮಯವನ್ನು ಕಲಿಕಾ ಅವಧಿ ಎಂದು ಗುರುತಿಸಿಕೊಂಡು ಆ ಸಮಯದಲ್ಲಿ ಮಗುವನ್ನು ಕಲಿಕೆಯಲ್ಲಿ ತೊಡಗುವಂತೆ ಮಾಡುವ ಮೂಲಕ ತಾವೂ ಸಹ ಭಾಗಿಯಾಗಿ ನಂತರ ಮಕ್ಕಳು ಬರೆದ ಬರವಣಿಗೆ, ಓದುವಿಕೆ , ಚಿತ್ರ ಬಿಡಿಸುವ ಇತ್ಯಾದಿ ಗಳ ಚಟುವಟಿಕೆಗಳ ಬಗ್ಗೆ ಚರ್ಚೆ ಮಾಡಬೇಕು. ಆಗ ಮಾತ್ರ ಮಗುವಿನಲ್ಲಿ ಕಲಿಕಾ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ.
೪) ಕೋವಿಡ್ ಸಂದರ್ಭದಲ್ಲಿ ಮಕ್ಕಳ ಕಲಿಕೆ ಕುಂಠಿತವಾಗಿರುವ ಬಗ್ಗೆ ಗಮನವಿರಲಿ :-
ಕೋವಿಡ್ ಕಾರಣದಿಂದಾಗಿ ಮಕ್ಕಳ ಕಲಿಕಾ ಭವಿಷ್ಯದ ಎಲ್ಲಾ ಪಾಲಕರು ಚಿಂತಿಸುವಂತೆ ಮಾಡಿದೆ ಮತ್ತು ಭೌತಿಕ ತರಗತಿಗಳು ನಡೆಯದ ಸಂದರ್ಭದಲ್ಲಿ ಮಕ್ಕಳ ಕಲಿಕಾ ವೇಗ ಕಡಿಮೆಯಾಗಿದೆ ಎಂಬುದು ಪಾಲಕ ಪೋಷಕರ ಗಮನಕ್ಕೆ ಬಂದಿದೆ. ಆದ್ದರಿಂದ ಆ ಕಲಿಕಾ ವೇಗ ಮತ್ತೆ ಈ ಬೇಸಿಗೆ ರಜೆಯಲ್ಲಿ ಮನೆಯಲ್ಲಿ ಕಲಿಸುವ ಮೂಲಕ ಮುಂದಿನ ಶೈಕ್ಷಣಿಕ ವರ್ಷದಿಂದ ಮಗುವಿನ ಕಲಿಕಾ ವೇಗವನ್ನು ಪಡೆಯಲು ಸಹಕರಿಸಿದಂತಾಗುತ್ತದೆ.
೫) ಬೇಸಿಗೆ ರಜೆ ಅವಧಿಯಲ್ಲಿ ಮಕ್ಕಳ ಕಲಿಕಾ ನಿರಂತರತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು :- ಪಾಲ ಕರು, ಪೋಷಕರು ಬಹು ಮುಖ್ಯವಾಗಿ ಮಾಡ ಬೇಕಾದ ಕೆಲಸವೆಂದರೆ ಮನೆಯಲ್ಲಿ ಸಹೋ ದರ ಸಹೋದರಿಯರ ಅಥವಾ ಪಕ್ಕದ ಮನೆ ಯಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಕಲಿಯುತ್ತಿರುವವರ ಸಹಾಯ ಅಥವಾ ಅವರು ಅಭ್ಯಾಸ ಮಾಡುವ ಸಮಯದಲ್ಲಿ ತಮ್ಮ ಮಕ್ಕಳನ್ನು ಅವರೊಂದಿಗೆ ಬೆರೆಯುವಂತೆ ನೋಡಿಕೊ ಳ್ಳುವ ಮೂಲಕ ಸಹ ನಮ್ಮ ಮಕ್ಕಳು ಸಮರ್ಪಕವಾಗಿ ಅವರು ಮಾರ್ಗದರ್ಶನ ಪಡೆದುಕೊಂಡು ಕಲಿಯಲು ಸಾಧ್ಯವಾಗುತ್ತದೆ.
೬) ಬಿಸಿಲಿನ ತಾಪ ಹೆಚ್ಚು ಇರುವುದರಿಂದ ಮಕ್ಕಳ ಆರೋಗ್ಯದ ಬಗ್ಗೆ ಹೇಗೆ ನಿಗಾ ವಹಿಸಬಹುದು :-
ಸರ್ವೇ ಸಾಮಾನ್ಯ ಅದರಲ್ಲೂ ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೇಸಿಗೆ ಅವಧಿಯಲ್ಲಿ ಅತಿ ಹೆಚ್ಚು ಬಿಸಿಲಿನ ತಾಪ ಇರುವುದರಿಂದ ಹಾಗೂ ಇದೆ ಸಮಯದಲ್ಲಿ ಶಾಲಾ ರಜೆ ಅವಧಿಯು ಇರುವುದರಿಂದ ಮಕ್ಕಳ ಆರೋಗ್ಯದ ಕಡೆ ಅಷ್ಟೇ ಮಹತ್ವದ ಗಮನ ಹರಿಸಬೇಕು. ಹೇಗೆಂದರೆ ದಿನ ನಿತ್ಯ ಮಕ್ಕಳಿಗೆ ಊಟದ ಜೊತೆಗೆ ಹಾಲು,ಮೊಸರು ,ಮಜ್ಜಿಗೆ ಹೆಚ್ಚು ಬಳಸಬೇಕು ಹಾಗೂ ಮಧ್ಯಾಹ್ನದ ಅವಧಿಯಲ್ಲಿ ಮಕ್ಕಳಿಗೆ ಆಟ ಆಡಲು ಬಿಡಬಾರದು .
೭) ಮನೆಯಲ್ಲಿ ಮಕ್ಕಳಿಗೆಂದೇ ಒಂದು ನಿರ್ದಿಷ್ಟ ಓದುವ ಸ್ಥಳ ಗುರುತಿಸಬೇಕು :- ನಮ್ಮ ಮನೆ ದೊಡ್ಡದಾಗಲಿ, ಚಿಕ್ಕದಾಗಲಿ, ಸ್ಟೀನ್ ಮನೆಯಾಗಲಿ ಅಥವಾ ಗುಡಿಸಲಾಗಲಿ ಇದೆಲ್ಲದಕ್ಕೂ ಮಿಗಿಲಾಗಿದ್ದು ಮನಸು ” ಮನಸಿದ್ದರೆ ಮಾರ್ಗ ” ಎನ್ನುವ ಅಚಲ ಮನಸಿನಿಂದ ನಮ್ಮ ನಮ್ಮ ಮನೆಯಲ್ಲಿಯೇ ಇರುವ ಸ್ಥಳಾವಕಾಶದಲ್ಲಿ ಒಂದು ನಿರ್ದಿಷ್ಟ ಸ್ಥಳವನ್ನು ಗುರುತಿಸಿಕೊಂಡು ಆ ಸ್ಥಳದಲ್ಲಿ ಮಗು ಕಲಿಯಲು ಆಸಕ್ತಿ ಬರುವಂತೆ ಅಂದರೆ ಆ ಸ್ಥಳದಲ್ಲಿ ಚಿಕ್ಕ ಕಟ್ಟೆ ಕಟ್ಟಿ ಅಥವಾ ಮಗುವಿಗೆ ಓದು ಬರೆಯಲು ಅನುಕೂಲವಾಗುವಂತೆ ಇಟ್ಟಿಗೆ ಅಥವಾ ಕಲ್ಲು ಜೋಡಿಸು ವುದು. ಕಲಿಕಾ ಚಾರ್ಟ್ ಅಥವಾ ಚಿತ್ರಗಳು ಅಂಟಿಸುವುದು ಹಾಗೂ ಕಲಿಕಾ ಸಾಮಗ್ರಿಗಳು ಇಡುವ ಮೂಲಕ ಆ ಸ್ಥಳದಲ್ಲಿ ಮಗು ಕಲಿಯುವಂತೆ ನೋಡಿಕೊಳ್ಳಬೇಕು.
೮) ಮಕ್ಕಳೊಂದಿಗೆ ಆಟ ಆಡುವುದು :- ಪಾಲಕ ಪೋಷಕರು ಪ್ರತಿ ದಿನ ಕಲಿಯಲು ಎಷ್ಟು ಒತ್ತು ನೀಡಬೇಕು ಅಷ್ಟೇ ಮಕ್ಕಳು ಆಡುವ ಪ್ರಕ್ರಿಯೆಯಲ್ಲಿ ತೊಡಗುವಾಗ ನಾವೂ ಸಹ ಅವರೊಂದಿಗೆ ಮಕ್ಕಳಾಗಿ ಬೆರೆತರೆ ಮಕ್ಕಳ ಮನಸು ಇನ್ನಷ್ಟು ಕ್ರೀಡೆಯಲ್ಲಿ ತೊಡಗಿಸಿ ಕೊಳ್ಳುತ್ತಾರೆ ಜೊತೆಗೆ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗುತ್ತಾರೆ.
೯) ಪಾಲಕ ಪೋಷಕರು – ಶಿಕ್ಷಕರೊಂದಿಗೆ ಪೋನ್ ಸಂಪರ್ಕ ( ಮಕ್ಕಳ ಕಲಿಕೆ ಕುರಿತು ಚರ್ಚೆ ) :- ಬೇಸಿಗೆ ರಜೆ ಇರುವುದರಿಂದ ಶಾಲಾ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರ ಮೊಬೈಲ್ ಸಂಖ್ಯೆ ಪಡೆದುಕೊಂಡು ಮಕ್ಕಳ ಕಲಿಕಾ ಚಟುವಟಿಕೆಗಳು ಕುರಿತು ಅಥವಾ ಮಕ್ಕಳ ಮಾಡಿರುವ ಕಲಿಕಾ ವರದಿಗಳು ಹಂಚಿಕೊಂಡು ಶಿಕ್ಷಕರಿಂದ ಸಲಹೆ ಮತ್ತು ಮಾರ್ಗದರ್ಶನ ಪಡೆಯಲು ಯತ್ನಿಸುವುದು ಜೊತೆಗೆ ವಾರಕ್ಕೆ ಒಂದು ಬಾರಿ ಆದರೂ ಪೋನ್ ಕರೆ ಮಾಡಿ ಕಲಿಕಾ ಸಂಪರ್ಕ ಇಟ್ಟುಕೊಂಡು ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಕಾರ್ಯ ಮಾಡಬೇಕು.
೧೦) ಮನೆಯ ಸರ್ವ ಸದಸ್ಯರು ಮಕ್ಕಳೊಂದಿಗೆ ಔಪಚಾರಿಕ ಸಂವಹನ ನಡೆಸುವುದು ಅಥವಾ ಕಥೆ, ಹಾಡು ಹೇಳುವುದು :-ನಮ್ಮ ಪುರಾತನ ಕಾಲದಿಂದಲೂ ನಮ್ಮ ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಸರ್ವೇ ಸಾಮಾನ್ಯ ಮನೆಯ ಹಿರಿಯರು ಮಕ್ಕಳಿಗೆ ವಿವಿಧ ಬಗೆಯ ಕಥೆಗಳು, ಹಾಡುಗಳು ಮತ್ತು ಜಾನಪದ ಗೀತೆಗಳು ಹೇಳುತ್ತಿದ್ದರು. ಆದರೆ ಇತ್ತೀಚೆಗೆ ಆಧುನಿಕ ತಂತ್ರಜ್ಞಾನ ಪ್ರಭಾವದಿಂದ ಅಥವಾ ಕೆಲಸದ ಒತ್ತಡದಿಂದಾಗಿ ಅವುಗಳು ಕ್ಷೀಣಿಸುತ್ತಿವೆ. ಆದ್ದರಿಂದ ಪಾಲಕರು ಈ ರಜೆ ಅವಧಿಯಲ್ಲಿ ಆದರೂ ಸಹ ತಮ್ಮ ಮಕ್ಕಳಿಗೆ ಇಂತಹ ಹಾಡು ಕಥೆಗಳು ಹೇಳುವ ರೂಢಿ ಮಾಡಿಕೊಂಡು ಮಕ್ಕಳಲ್ಲಿ ಮಾನವೀಯ ಮೌಲ್ಯ ಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಬೆಳೆಯುವಂತೆ ಮಾಡಿದಂತೆ.
ಈ ಎಲ್ಲಾ ಮೇಲ್ಕಾಣಿಸಿದ ಅಂಶಗಳು ಆಧಾರ ವಾಗಿಟ್ಟುಕೊಂಡು ಬೇಸಿಗೆ ರಜೆಯಲ್ಲಿ ಪಾಲಕರು ಪೋಷಕರು ಜವಾಬ್ದಾರಿ ವಹಿಸಿಕೊಂಡಿದ್ದೆ ಆದಲ್ಲಿ ನಮ್ಮ ಮಕ್ಕಳು ಕಲಿಕೆ ನಿರಂತರವಾಗಿ ಮುಂದಿನ ತರಗತಿಗೆ ಅಣಿ ಗೊಂಡು ಸರಾಗವಾಗಿ ಕಲಿಯಲು ಸಹಕರಿಸಿದಂ ತಾಗುತ್ತದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ನನ್ನ ಅನುಭವಾತ್ಮಕ ಅಂಶಗಳು ಗ್ರಾಮೀಣ ಪ್ರದೇಶದ ಪಾಲಕರೊಂದಿಗೆ ಹಂಚಿಕೊಂಡಿರುವೆ.

By admin

ನಿಮ್ಮದೊಂದು ಉತ್ತರ

You missed

error: Content is protected !!