ಶಿವಮೊಗ್ಗ, ಆ.07:
ಶಿವಮೊಗ್ಗ ಜಿಲ್ಲೆಯ ಕೊರೊನಾ ಸಾವಿನ ಕಂಟಕಗಳು ದಿನೇ ದಿನೇ ಹೆಚ್ಚುತ್ತಿದ್ದು, ಇಂದು ಸಹ ಮತ್ತೆ ಓರ್ವರು ಸಾವು ಕಂಡಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದ್ದು, ನಿಧನ ಹೊಂದಿದವರ ಸಂಖ್ಯೆ 49 ಬಂದಿರುವುದು ಆತಂಕದ ಸಂಗತಿ.
ಇಂದಿನ ಈ ಜಿಲ್ಲಾ ವರದಿಯಲ್ಲಿ ಶಿವಮೊಗ ಜಿಲ್ಲೆಯಲ್ಲಿ 114 ಜನರಿಗೆ ಸೊಂಕು ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ರಾಜ್ಯ ವರದಿಯಲ್ಲಿ ಇಂದಿನ ಸಂಖ್ಯೆ ವ್ಯತ್ಯಾಸವಾಗಿದೆ.
ದುರಂತ ಗೊತ್ತೇ…,
ರಾಜ್ಯದ ದೊರೆ, ಶಿವಮೊಗ್ಗ ನಗರದ ಶಾಸಕರಿಗೆ, ಹಿರಿಯ ಅಧಿಕಾರಿಗಳಿಗೆಗೆ ಕೊರೊನಾ ಸೊಂಕು ಕಾಣಿಸಿಕೊಂಡ ಬೆನ್ನಲ್ಲೇ ಜನಪ್ರತಿನಿಧಿಗಳ ಕಛೇರಿಗೆ ನಿತ್ಯನಿರಂತರ ಎಂಬಂತೆ ದಾಳಿ ಇಡುತ್ತಿದೆ. ಇದು ಜನಸಾಮಾನ್ಯರಿಗಿಂತ ಹೆಚ್ಚು ಅಂತಹವರನ್ನೇ ಟಾರ್ಗೇಟ್ ಮಾಡಿದೆ.
ಇಂದು ಸಂಜೆ ಹೊರಬಿದ್ದ ಶಿವಮೊಗ್ಗ ಕೋವಿಡ್-19 ವರದಿಯಲ್ಲಿ 690ನೆಗಿಟೀವ್ ಇದ್ದರೆ 114 ಪಾಸಿಟಿವ್ ಬಂದಿದೆ.
ಭಯ ಬರಲು ಕಾರಣ ಎಲ್ಲೆಡೆ ಕೊರೊನಾ ಕಂಟಕ ಕಾಣುತ್ತಿರುವುದು ಎನ್ನಲಾಗಿದೆ.
96 ಜನ ಡಿಸ್ಚಾರ್ಜ್ ಆಗಿದ್ದರೂ ಸಹ 2477 ಸೋಂಕಿತರಲ್ಲಿ 1375 ಜನ ಗುಣಮುಖರಾಗಿದ್ದಾರೆ.
ಇಂದಿನ ಈ ವರದಿಯಲ್ಲಿ ಶಿವಮೊಗ್ಗ ನಗರದಲ್ಲಿ 53, ಶಿಕಾರಿಪುರದಲ್ಲಿ 21, ಭದ್ರಾವತಿಯಲ್ಲಿ 21, ಸಾಗರ 11, ಸೊರಬ 2, ಹೊಸನಗರದಲ್ಲಿ 1,, ಇತರೆ ಜಿಲ್ಲೆಗಳ 5 ಪ್ರಕರಣಗಳು ಪತ್ತೆಯಾಗಿವೆ.
ಇಂದಿನವರೆಗೆ ಸಾವು ಕಂಡವರ ಸಂಖ್ಯೆ 49 ಆಗಿದ್ದು, ಅದರ ಸಂಖ್ಯೆ ಹೆಚ್ಚಾಗಲಿದೆ. ದಿನೇ ದಿನೇ ಸಾವಿನ ಸಂಖ್ಯೆ ಶಿವಮೊಗ್ಗದಲ್ಲಿ ಹೆಚ್ಚುತ್ತಿರುವುದು ಭಯ ಹುಟ್ಟಿಸಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!