1. ಸೋಮನಾಥ.
    ಗುಜರಾತ್ ರಾಜ್ಯದ ಸೌರಾಷ್ಟ್ರ ಭಾಗದ ವೇರಾವಳ್ ಪ್ರದೇಶದ ಪ್ರಭಾಸ ಕ್ಷೇತ್ರದಲ್ಲಿ ಸೋಮನಾಥ ಜ್ಯೋತಿರ್ಲಿಂಗವಿದೆ. ಇದನ್ನು ಅನಂತಮಯ ದೇಗುಲವೆಂದು ಬಣ್ಣಿಸಲಾಗಿದೆ.
  2. ಮಹಾಕಾಲೇಶ್ವರ.
    ಮಧ್ಯ ಪ್ರದೇಶದ ಪುರಾತನ ಹಾಗು ಪವಿತ್ರ ನಗರವಾದ ಉಜ್ಜಯಿನಿಯಲ್ಲಿ ಮಹಾಕಾಲೇಶ್ವರ ಜ್ಯೋತಿರ್ಲಿಂಗವಿದೆ. ಸ್ವಯಂಭೂ ಲಿಂಗ ರೂಪದ ಮಹಾಕಾಲೇಶ್ವರ ದೇವಸ್ಥಾನವು ರುದ್ರ ಸಾಗರ ಕೆರೆಯ ತಟದಲ್ಲಿದೆ.
  3. ಓಂಕಾರೇಶ್ವರ.
    ಓಂಕಾರೇಶ್ವರ ಶಿವನ ದೇವಸ್ಥಾನವು ಮಧ್ಯ ಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಹರಿದಿರುವ ನರ್ಮದಾ ನದಿಯ ಮೇಲಿರುವ ಶಿವಪುರಿ/ಮಂಡತ ಎಂಬ ದ್ವೀಪದಲ್ಲಿ ಸ್ಥಿತವಿದೆ. ಈ ದ್ವೀಪವು ಹಿಂದುಗಳ ಪವಿತ್ರ ಸಂಕೇತವಾದ #ॐ ಆಕಾರದಲ್ಲಿರುವುದರಿಂದ ಓಂಕಾರೇಶ್ವರ ಎಂಬ ಹೆಸರು ಬಂದಿದೆ. ಈ ದ್ವೀಪದಲ್ಲಿ ಎರಡು ದೇವಸ್ಥಾನಗಳಿದ್ದು ಅವುಗಳು ಪ್ರಣವನಾದ ಓಂಕಾರೇಶ್ವರ ದೇವಸ್ಥಾನ ಹಾಗು ಚಿರಾಯು/ಅಮರನಾದ ಅಮರೇಶ್ವರ ದೇವಸ್ಥಾನ. ದಂತಕಥೆಯ ಪ್ರಕಾರ, ಶಿವ ಲಿಂಗವನ್ನು ಎರಡು ಭಾಗಗಳನ್ನಾಗಿ ಮಾಡಿ ಒಂದು ಓಂಕಾರೇಶ್ವರವಾಗಿಯೂ ಇನ್ನೊಂದು ಮಾಮಲೇಶ್ವರ ಅಥವಾ ಅಮರೇಶ್ವರವಾಗಿಯೂ ಪ್ರಸಿದ್ಧವಾಗಿವೆ.
  4. ಕೇದಾರನಾಥ.
    ಉತ್ತರಾಖಂಡ್ ರಾಜ್ಯದ ಹಿಮಾಲಯ ಶ್ರೇಣಿಯ ಗಡ್ವಾಲ್ ಪ್ರದೇಶದ ಮಂದಾಕಿನಿ ನದಿ ಬಳಿಯಿರುವ ಕೇದಾರನಾಥ ಒಂದು ಪ್ರಸಿದ್ಧವಾದ ಹಿಂದು ಧಾರ್ಮಿಕ ಕೇಂದ್ರವಾಗಿದೆ. ಪ್ರದೇಶದ ವಾತಾವರಣದಲ್ಲಿ ಏರು ಪೇರು ಹೆಚ್ಚಾಗುವುದರಿಂದ ಈ ಜ್ಯೋತಿರ್ಲಿಂಗವು ವರ್ಷದ ಏಪ್ರಿಲ್ ಕೊನೆಯಿಂದ ನವಂಬರ್ ತಿಂಗಳಿನವರೆಗೆ ಮಾತ್ರ ತೆರೆದಿರುತ್ತದೆ.
  5. ಭೀಮಾಶಂಕರ.
    ಜ್ಯೋತಿರ್ಲಿಂಗ ತಾಣವಾದ ಭೀಮಾಶಂಕರ ದೇವಸ್ಥಾನವು ಮಹಾರಾಷ್ಟ್ರ ರಾಜ್ಯದ ಪುಣೆ ಬಳಿಯಿರುವ ಖೇದ್ ತಾಲೂಕಿನಲ್ಲಿದೆ. ಭೀಮಾ ನದಿ ತಟದಲ್ಲಿ ಶಿವನು ಭೀಮಾಶಂಕರನಾಗಿ ನೆಲೆಸಿ ಭಕ್ತರನ್ನು ಅಶಿರ್ವದಿಸುತ್ತಿದ್ದಾನೆ.
  6. ಕಾಶಿ ವಿಶ್ವನಾಥ.
    ಉತ್ತರ ಪ್ರದೇಶದ ವಾರಣಾಸಿ ಅಥವಾ ಕಾಶಿಯಲ್ಲಿ ಶಿವನು ವಿಶ್ವನಾಥನಾಗಿ ಭಕ್ತರನ್ನು ಹರಸುತ್ತಿದ್ದಾನೆ. ಇದೊಂದು ಬಹು ಪ್ರಖ್ಯಾತ ಹಿಂದು ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ.
  7. ತ್ರಯಂಬಕೇಶ್ವರ.
    ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ತ್ರಯಂಬಕ ಪಟ್ಟಣದಲ್ಲಿರುವ ತ್ರಯಂಬಕೇಶ್ವರ ದೇವಸ್ಥಾನವು ಪುರಾತನ ಪ್ರಸಿದ್ಧ ಜ್ಯೋತಿರ್ಲಿಂಗ ದೇವಾಲಯವಾಗಿದೆ. ನಾಶಿಕ್ ಪಟ್ಟಣದಿಂದ 28 ಕಿ.ಮೀ ದೂರದಲ್ಲಿರುವ ತ್ರಯಂಬಕೇಶ್ವರವು ಪೆನಿನ್ಸುಲಾ ಭಾರತದ ಅತಿ ಉದ್ದನೆಯ ನದಿಯಾದ ಗೋದಾವರಿ ನದಿ ಮೂಲದ ಸಮೀಪ ಸ್ಥಿತವಿದೆ.
  8. ವೈದ್ಯನಾಥ.
    ಇದರ ನಿಖರವಾದ ಸ್ಥಳದ ಕುರಿತು ಇನ್ನೂ ವಿವಾದವಿದ್ದರೂ ಜಾರ್ಖಂಡ್ ರಾಜ್ಯದ ದೇವ್ಗಡ್ ನಲ್ಲಿರುವ ವೈದ್ಯನಾಥ ಜ್ಯೋತಿರ್ಲಿಂಗವನ್ನು 12 ಜ್ಯೋತಿರ್ಲಿಂಗಗಳ ಪೈಕಿ ಒಂದನ್ನಾಗಿ ಪರಿಗಣಿಸಲಾಗಿದೆ.
  9. ನಾಗೇಶ್ವರ.
    ಉತ್ತರಾಖಂಡ್ ರಾಜ್ಯದ ಜಾಗೇಶ್ವರದಲ್ಲಿರುವ ನಾಗೇಶ್ವರ ಜ್ಯೋತಿರ್ಲಿಂಗ ತಾಣವು ಬಹು ಪ್ರಖ್ಯಾತವಾದ ಜ್ಯೋತಿರ್ಲಿಂಗ ತಾಣವಾಗಿದೆ. ಈ ಜ್ಯೋತಿರ್ಲಿಂಗವನ್ನು ಭೂಮಿಯ ಮೊದಲ ಜ್ಯೋತಿರ್ಲಿಂಗವೆಂದು ಪರಿಗಣಿಸಲಾಗಿದೆ.
  10. ರಾಮೇಶ್ವರ.
    ತಮಿಳುನಾಡಿನ ರಾಮೇಶ್ವರಂ ನಲ್ಲಿರುವ ರಾಮೇಶ್ವರ ಜ್ಯೋತಿರ್ಲಿಂಗ ದೇವಸ್ಥಾನವು ದಕ್ಷಿಣದ ಪ್ರಮುಖ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ.
  11. ಮಲ್ಲಿಕಾರ್ಜುನ.
    ಆಂಧ್ರದ ಕರ್ನೂಲ್ ಜಿಲ್ಲೆಯ ಶ್ರೀಶೈಲಂ ನಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನವು ಪವಿತ್ರ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿದೆ. ಕೃಷ್ಣಾ ನದಿ ತಟದಲ್ಲಿ ನೆಲೆಸಿರುವ ಭ್ರಮರಾಂಬಾ ಮಲ್ಲಿಕಾರ್ಜುನ ದೇವಸ್ಥಾನವು ಪ್ರಖ್ಯಾತವಾದ ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ.
  12. ಘುಶ್ಮೇಶ್ವರ.
    ರಾಜಸ್ಥಾನದ ಜೈಪುರ್ ನಗರದಿಂದ 100 ಕಿ.ಮೀ ದೂರವಿರುವ ಶಿವಾರ್ ಎಂಬಲ್ಲಿದೆ ಈ ಜ್ಯೋತಿರ್ಲಿಂಗ ದೇವಸ್ಥಾನ. ಇದನ್ನು ಕೊನೆಯ ಅಂದರೆ ಹನ್ನೆರಡನೆಯ ಜ್ಯೋತಿರ್ಲಿಂಗವೆಂದು ಪರಿಗಣಿಸಲಾಗಿದೆ.

“ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರ.”

ಸೌರಾಷ್ಟ್ರೇ ಸೋಮನಾಥಂಚ,
ಶ್ರೀಶೈಲೇ ಮಲ್ಲಿಕಾರ್ಜುನಮ್ |
ಉಜ್ಜೈನ್ಯಾಂ ಮಹಾಕಾಲಂ
ಓಂಕಾರಮಮಲೇಶ್ವರಮ್ ||
ಪರಲ್ಯಾಂ ವೈದ್ಯನಾಥಂಚ
ಡಾಕಿನ್ಯಾಂ ಭೀಮ ಶಂಕರಮ್ |
ಸೇತು ಬಂಧೇತು ರಾಮೇಶಮ್
ನಾಗೇಶಂ ದಾರುಕಾವನೇ ||
ವಾರಾಣಸ್ಯಾಂತು ವಿಶ್ವೇಶಂ
ತ್ರ್ಯಂಬಕಂ ಗೌತಮೀ ತಟೇ |
ಹಿಮಾಲಯೇತು ಕೇದಾರಂ
ಘೃಶ್ಮೇಶಂಚ ಶಿವಾಲಯೇ ||
ಏತಾನಿ ಜ್ಯೋತಿರ್ಲಿಂಗಾನಿ
ಸಾಯಂ ಪ್ರಾತಃ ಪಠೇನ್ನರಃ |
ಸಪ್ತ ಜನ್ಮ ಕೃತಂ ಪಾಪಂ
ಸ್ಮರಣೇನ ವಿನಶ್ಯತಿ ||
ಏತೇಶಾಂ ದರ್ಶನಾದೇವ
ಪಾತಕಂ ನೈವ ತಿಷ್ಠತಿ |
ಕರ್ಮಕ್ಷಯೋ ಭವೇತ್ತಸ್ಯ
ಯಸ್ಯ ತುಷ್ಟತ್ರ್ಯಂಬಕೇಶ್ವರಃ ||
‌‌‌- ‌‌‌‌‌(ಸಂಗ್ರಹ)

By admin

ನಿಮ್ಮದೊಂದು ಉತ್ತರ

error: Content is protected !!