ಶಿವಮೊಗ್ಗ, ಫೆ.20:
ಮದ್ಯರಾತ್ರಿಯೇ ಎರಡು ಕೊಲೆ ಕಂಡಿದ್ದ ಶಿವಮೊಗ್ಗ ಸರಹದ್ದಿನ ಸೀಗೆಹಟ್ಟಿಯಲ್ಲಿ ಈಗಷ್ಟೆ ಅಂದರೆ ರಾತ್ರಿ ಹತ್ತರ ಹೊತ್ತಿಗೆ ಮತ್ತೊಂದು ಮಾರಾಮಾರಿಯ ಕೊಲೆ ಕಂಡಿದೆ.
ಸೀಗೆಹಟ್ಟಿ ನಿವಾಸಿ ಎನ್ನಲಾದ ಹರ್ಷ ಎಂಬಾತನನ್ನ ದುಷ್ಕರ್ಮಿಗಳು ಕೊಚ್ಚಿಕೊಲೆ ಮಾಡಿದ್ದಾರೆ. ಈತ ಬಜರಂಗದಳದ ಕಾರ್ಯಕರ್ತನಾಗಿದ್ದ ಎಂದು ಹೇಳಲಾಗುತ್ತಿದೆ.
ಭಾರತೀ ಕಾಲೋನಿಯ ಕಾಮತ್ ಪೆಟ್ರೊಲ್ ಬಂಕ್ ಬಳಿ ಈ ಹತ್ಯೆ ನಡೆಸಿದ್ದಾರೆ.
ಈ ಕೊಲೆ ನಗರದ ಬಹುತೇಕ ಕಡೆ ತಲ್ಲಣ ಹುಟ್ಟಿಸಿದ್ದು ಬಸ್ ಸ್ಟಾಂಡ್ ಸೇರಿದಂತೆ ನಗರದ ಬಹುತೇಕ ಕಡೆ ಗಲಾಟೆಗೆ ಪೂರಕವೆಂಬಂತಹ ಚಿಕ್ಕಪುಟ್ಟ ಘಟನೆಗಳು ನಡೆದಿದ್ದು ಬಿಗಿ ಪೊಲೀಸ್ ಬಂದೂಬಸ್ತಿನಿಂದ ಶಿವಮೊಗ್ಗ ನಗರವನ್ನು ಪೊಲೀಸರು ಹದ್ದುಬಸ್ತಿನಲ್ಲಿಟ್ಟಿದ್ದಾರೆ.
ಮಿಕ್ಕ ವಿವರಗಳು ಸಿಗಬೇಕಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!