ಶಿವಮೊಗ್ಗ: ಶುಕ್ರವಾರ ಸಂಜೆ ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕಾಶ್ ಟ್ರಾವೆಲ್ಸ್ ನ ಮಾಲೀಕ ಪ್ರಕಾಶ್ (54) ಶವವಾಗಿ ಪತ್ತೆಯಾಗಿದ್ದಾರೆ.


ಹೊಸನಗರ ತಾಲೂಕಿನ ಪಟಗುಪ್ಪ ಸೇತುವೆ ಸಮೀಪದ ಪಟಗುಪ್ಪ ಹೊಳೆಯಲ್ಲಿ ಅವರ ಶವ ಪತ್ತೆಯಾಗಿ
ಶನಿವಾರ ಕಾರಿನಿಂದ ಸ್ವಲ್ಪ ದೂರದಲ್ಲಿ ಸೇತುವೆ ಮೇಲೆ ಚಪ್ಪಲಿಗಳು ಪತ್ತೆಯಾಗಿತ್ತು. ಪ್ರಕಾಶ್‌ಗಾಗಿ ನಿರಂತರವಾಗಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಶೋಧ ಕಾರ್ಯ ನಡೆಸಿದ್ದರು.


ಶಿವಮೊಗ್ಗದ ಸಾಗರ ಭಾಗದಲ್ಲಿ ಪ್ರಕಾಶ್ ಟ್ರಾವೆಲ್ಸ್ ಚಿರಪರಿಚಿತರಾಗಿದ್ದರು. ಪ್ರಕಾಶ್ ಸಾವಿಗೆ ಈವರೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸುಮಾರು 20 ವರ್ಷಗಳಿಂದ ಬಸ್ಸುಗಳ ಸೇವೆ ಒದಗಿಸುತ್ತಿರುವ ಪ್ರಕಾಶ್ ಟ್ರಾವೆಲ್ಸ್, ಲಾಕ್ ಡೌನ್ ಆದ ಬಳಿಕ ದೊಡ್ಡ ಪ್ರಮಾಣದ ನಷ್ಟ ಅನುಭವಿಸಿತ್ತು ಎನ್ನಲಾಗಿದೆ.
ಪ್ರಕಾಶ್ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದು, ಪೊಲೀಸರ ತನಿಖೆಯಿಂದಲೇ ಸಾವಿಗೆ ಕಾರಣವೆನೆಂದು ತಿಳಿಯಬೇಕಿದೆ. ವಿವಿಧ ಆಯಾಮದಿಂದ ತನಿಖೆ ಮುಂದುವರಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದೆ.
ಈ ಕುರಿತು ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕಾಶ್ ಕುಟುಂಬಸ್ಥರು ದೂರು ನೀಡಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!