ಭೂತಾಯಿಯ ಮನಸಿನ ಹೆಣ್ಣುಮಕ್ಕಳಿಗೆ ಸದಾ ನಮನವಿರಲಿ…, ಮಾತೆಯ ಕುರಿತ ಒಂದೊಳ್ಳೆ ಬರಹ https://tungataranga.com/?p=8157. ಜನವರಿ 24ರ ನಾಳೆ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಶ್ರೀಮತಿ ಗಾಯತ್ರಿ ಅವರ ವಿಶೇಷ ಲೇಖನ ಓದಿ

ಶಿವಮೊಗ್ಗ, ಜ.23:
ನಿನ್ನೆ ರಾತ್ರಿ ಜಿಲ್ಲಾಡಳಿತದ ವರದಿಯಂತೆ ಸಾವಿರ ಸಮೀಪದ 870 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಇಂದಿನ ವರದಿಯಲ್ಲಿ 518.
ನಾಲ್ಕನೇ ದಿನವೂ ಅರ್ಧ ಸಾವಿರ ದಾಟಿದ ಕೊರೊನಾ ಮಹಾಮಾರಿ ನಿನ್ನೆ ಸಾವಿರ ಸನಿಹದಲ್ಲಿತ್ತು. ಇದು ಇಡೀ ಜಿಲ್ಲೆಯ ಜನರಲ್ಲಿ ಆತಂಕ ಹುಟ್ಟಿಸಿತ್ತು. ಇವತ್ತು ಕಡಿಮೆಯಾಗಿದೆ ಎಂಬುದೇ ಸಂತಸದ ವಿಷಯ.
ಇಂದಿನ ವರದಿಯಲ್ಲಿ ಸೋಂಕಿಗೆ ಒಬ್ಬರು ಬಲಿಯಾಗಿದ್ದು ಒಟ್ಟಾರೆ ಸಾವಿನ ಸಂಖ್ಯೆ 1078 ಕ್ಕೆ ಏರಿದೆ. ಅಂದರೆ ಮೂರನೇ ಅಲೆಯಲ್ಲಿದ್ದು ಆರನೆಯ ಸಾವು.
ಇಂದು 693 ಜನರನ್ನ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿತ್ತು ಹಳೆಯದು ಸೇರಿ 2050 ಜನರಲ್ಲಿ ನೆಗೆಟಿವ್ ಎಂದು ವರದಿಬಂದಿದೆ.


ವಿದ್ಯಾ ಕ್ಷೇತ್ರದ 0 ಮಕ್ಕಳು, ಶಿಕ್ಷಕರು ಹಾಗೂ ಇತರರ ಪರೀಕ್ಷೆಯಲ್ಲಿ 150 ಜನರಿಗೆ ಪಾಸಿಟೀವ್ ಬಂದಿದೆ.
ಇಂದು 253 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೋವಿಡ್ ಕೇರ್ ಸೆಂಟರ್ ಗೆ 00 ಜನರನ್ನ ಇಂದು ಸೇರಿಸಲಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ 16 ಜನರನ್ನು ದಾಖಲಿಸಲಾಗಿದೆ. ಜನರನ್ನ ಹೋಂ ಐಸೋಲೇಷನ್ ನಲ್ಲಿರಲು ಸೂಚಿಸಲಾಗಿದೆ.


ಒಟ್ಟು ಜಿಲ್ಲೆಯಲ್ಲಿ 2914 ಜನರಲ್ಲಿ ಕೊರೋನ ಪಾಸಿಟಿವ್ ಆಕ್ಟಿವ್ ಕೇಸ್ ಗಳಿವೆ ಎಂದು ಬುಲಿಟಿನ್ ತಿಳಿಸಿವೆ.


ತಾಲೂಕವಾರು ಹೀಗಿದೆ
ಶಿವಮೊಗ್ಗ ತಾಲೂಕಿನಲ್ಲಿ 180 ಭದ್ರಾವತಿ 78, ತೀರ್ಥಹಳ್ಳಿಯಲ್ಲಿ 42, ಶಿಕಾರಿಪುರದಲ್ಲಿ 79, ಸಾಗರದಲ್ಲಿ 68, ಹೊಸನಗರದಲ್ಲಿ 31, ಸೊರಬದಲ್ಲಿ 26,ಹೊರ ಜಿಲ್ಲೆಯಲ್ಲಿ 14 ರಲ್ಲಿ ಪಾಸಿಟಿವ್ ಕಂಡುಬಂದಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!