ಶಿವಮೊಗ್ಗ, ಜ.21:
ಜನವರಿ 20ರ ರಾತ್ರಿ ಜಿಲ್ಲಾಡಳಿತದ ವರದಿಯಂತೆ 525ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಎರಡನೇ ದಿನವೂ ಅರ್ಧ ಸಾವಿರ ದಾಟಿದ ಕೊರೊನಾ ಮಹಾಮಾರಿ ಇಡೀ ಜಿಲ್ಲೆಯ ಜನರಲ್ಲಿ ಆತಂಕ ಹುಟ್ಟಿಸಿದೆ.
ವರದಿಯಲ್ಲಿ ಸೋಂಕಿಗೆ ಒಬ್ಬರು ಬಲಿಯಾಗಿದ್ದು ಒಟ್ಟಾರೆ ಸಾವಿನ ಸಂಖ್ಯೆ 1076 ಕ್ಕೆ ಏರಿದೆ. ಅಂದರೆ ಮೂರನೇ ಅಲೆಯಲ್ಲಿದು ನಾಲ್ಕನೇ ಸಾವು.
2584 ಜನರನ್ನ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿತ್ತು ಇದರಲ್ಲಿ 2434 ಜನರಲ್ಲಿ ನೆಗೆಟಿವ್ ಎಂದು ವರದಿಬಂದಿದೆ.
ವಿದ್ಯಾ ಕ್ಷೇತ್ರದ 420ಮಕ್ಕಳು, ಶಿಕ್ಷಕರು ಹಾಗೂ ಇತರರ ಪರೀಕ್ಷೆಯಲ್ಲಿ 12 ಜನರಿಗೆ ಪಾಸಿಟೀವ್ ಬಂದಿದೆ.
ಇಂದು 253 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೋವಿಡ್ ಕೇರ್ ಸೆಂಟರ್ ಗೆ 00 ಜನರನ್ನ ಇಂದು ಸೇರಿಸಲಾಗಿದ್ದು, 20 ಜನರನ್ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. 2164 ಜನರನ್ನ ಹೋಂ ಐಸೋಲೇಷನ್ ನಲ್ಲಿರಲು ಸೂಚಿಸಲಾಗಿದೆ.
ಒಟ್ಟು ಜಿಲ್ಲೆಯಲ್ಲಿ 2300 ಜನರಲ್ಲಿ ಕೊರೋನ ಪಾಸಿಟಿವ್ ಆಕ್ಟಿವ್ ಕೇಸ್ ಗಳಿವೆ. ಶಿಕ್ಷಣ ಸಂಸ್ಥೆಗಳಲ್ಲಿರುವ ಇಂದು 420 ಶಿಕ್ಷಣ ಸಂಸ್ಥೆಗಳವರನ್ನ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು ಇವರಲ್ಲಿ 12ಜನರಿಗೆ ಕೊರೋನ ಪಾಸಿಟಿವ್ ಪತ್ತೆಯಾಗಿದೆ ಎಂದು ಬುಲಿಟಿನ್ ತಿಳಿಸಿವೆ.
ತಾಲೂಕವಾರು ಹೀಗಿದೆ
ಶಿವಮೊಗ್ಗ ತಾಲೂಕಿನಲ್ಲಿ 239, ಭದ್ರಾವತಿ 138, ತೀರ್ಥಹಳ್ಳಿಯಲ್ಲಿ 44, ಶಿಕಾರಿಪುರದಲ್ಲಿ 23, ಸಾಗರದಲ್ಲಿ 29, ಹೊಸನಗರದಲ್ಲಿ 18, ಸೊರಬದಲ್ಲಿ 27, ಹೊರ ಜಿಲ್ಲೆಯಲ್ಲಿ 07 ರಲ್ಲಿ ಪಾಸಿಟಿವ್ ಕಂಡುಬಂದಿದೆ.