ಶಿವಮೊಗ್ಗ, ಜ.08:
ವಾರಾಂತ್ಯ ಕರ್ಫ್ಯೂ ನಿನ್ನೆ ರಾತ್ರಿಯಿಂದ ಆರಂಭಗೊಂಡಿದ್ದು ಬೆಳಗಿನ ಜಾವದಿಂದ ಬಹುತೇಕ ಸಂಚಾರ, ವ್ಯಾಪಾರ ವಹಿವಾಟು ಎಂದಿಗಿಂತ ಕಡಿಮೆಯಾಗಿದೆ.
ಎಲ್ಲಾ ಶಾಲಾ ಕಾಲೇಜು ರಜೆ ಇದ್ದರೂ ಸಹ ಶಿವಮೊಗ್ಗ ಅಕ್ಷರ ಕಾಲೇಜಿನ ಬಸ್ ಮಕ್ಕಳನ್ನು ಕಾಲೇಜಿಗೆ ಕರೆದೊಯ್ಯುತ್ತಿದೆ. ಬೆಳಿಗ್ಗೆ ಎಂಟೂ ಮುವತ್ತರ ಹೊತ್ತಿಗೆ ಆ ಕಾಲೇಜಿನ ಬಸ್ ಪೊಲೀಸ್ ಚೌಕಿಯಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಿದೆ. ಕಾರಣ ಕೇಳಿದರೆ ವಿದ್ಯಾರ್ಥಿಗಳು ವ್ಯಾಕ್ಸಿನೇಷನ್ ಎನ್ನುತ್ತಾರೆ. ಇವತ್ತೇ ಈ ಸರ್ಕಸ್ ಬೇಕಿತ್ತಾ…?
ಈಗಾಗಲೇ ಕರ್ಪ್ಯೂ ಆರಂಭಗೊಂಡು 12 ಗಂಟೆ ಕಳೆದಿದ್ದು,ಈ ಅವಧಿಯಲ್ಲಿ ಜನರ ಸಂಚಾರ ಬಹಳನೇ ವಿರಳವಾಗಿವೆ. ಬೆಳ್ಳಂಬೆಳಿಗ್ಗೆ ಸದಾ ಜನರ ಸಾಂದ್ರತೆಯಿಂದ ಕೂಡಿರುತ್ತಿದ್ದ ನೆಹರೂ ಕ್ರೀಡಾಂಗಣ, ಗಾಂಧಿ ಪಾರ್ಕ್, ಪ್ರೀಡಂ ಪಾರ್ಕ್ ಗಳು ಬಂದ್ ಆಗಿವೆ. ಆದರೆ ಕೆಲ ಬಡಾವಣೆಗಳಲ್ಲಿರುವ ಪಾರ್ಕ್ ಗಳಲ್ಲಿ ಜನ ವಾಕ್ ಮಾಡುವುದು, ಎಕ್ಸೈಸ್ ಮಾಡುವ ದೃಶ್ಯ ಕಾಣುತ್ತಿತ್ತು.
ತರಕಾರಿ ಮಾರುಕಟ್ಟೆಯಲ್ಲಿ ಖರೀದಿಗೆ ಈ ಬಾರಿ ಜನ ಮುಗಿಬಿದ್ದಿಲ್ಲ. ಪ್ರತಿಬಾರಿ ಲಾಕ್ ಡೌನ್ ಆದ ವೇಳೆ ಜನ ಎಪಿಎಂಸಿ ತರಕಾರಿ ಮಾರುಕಟ್ಟೆ
ಜನಸಾಂಧ್ರತೆಯಿಂದ ಕೂಡಿರುತ್ತಿತ್ತು. ಆದರೆ ಈ ಬಾರಿ ಜನ ಸರಳವಾಗಿ ಬಂದು ಖರೀದಿಸಿ ವಾಪಾಸಾಗುತ್ತಿದ್ದಾರೆ. ಗಾಂಧಿ ಬಜಾರ್ ನ ತರಕಾರಿ ಮಾರುಕಟ್ಟೆಗಳಲ್ಲಿಯೂ ಖರೀದಿಗೂ ಈ ಬಾರಿ ಜನ ಮುಗಿ ಬಿದ್ದಿಲ್ಲ.
ಬಸ್ ನಿಲ್ದಾಣದಲ್ಲಿ ಬಸ್ ಗಳ ಸಂಚಾರ ಎಂದಿನಂತೆ ಇವೆ. ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣಗಳಲ್ಲಿ ದೂರದ ಊರಿಗೆ ಸಾಗುವ ಬಸ್ ಗಳು ಹೆಚ್ಚಿಗೆ ಇದ್ದವು. ಪ್ರಯಾಣಿಕರೂ ಸಹ ಎಂದಿನಂತೆ ಸರಳವಾಗಿ ಪ್ರಯಾಣಿಸಿದ್ದಾರೆ.
ಖಾಸಗಿ ಬಸ್ ಗಳು ಸಹ ರಸ್ತೆಗಳಿದಿವೆ. ನಗರ ಸಂಚಾರಿ ಬಸ್ ಗಳು ಬೆರಳೆಣಿಕೆಯಷ್ಟು ಸಂಚರಿಸುತ್ತಿವೆ. ಇದರಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆ ಉಂಟಾಗಿಲ್ಲ.
ವಿನೋಬ ನಗರ ಚೌಕಿ ವೃತ್ತದಲ್ಲಿ ಪೊಲೀಸರು ಬ್ಯಾರಿಕೇಡ್ ನಿರ್ಮಿಸಿ ಪೊಲೀಸರು ಅನಾವಶ್ಯಕ ತಿರುಗಾಟ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬ್ಯಾರಿಕೇಡ್ ನಿರ್ಮಿಸಿ ಸಂಚರಿಸದಂತೆ ನಿರ್ಬಂದಿಸಿದರೂ ಸಹ ಜನ ನುಸುಳಿಕೊಂಡು ಓಡಾಡುತ್ತಿದ್ದಾರೆ. ವೀಕೆಂಡ್ ಲಾಕ್ ಒಂದು ತರ ಎಲ್ಲದಕ್ಕೂ ಒಪನ್ ಮಾಡಲು ಅವಕಾಶ ನೀಡಲಾಗಿದ್ದು ಜನ ಮಾತ್ರ ಬರಬೇಡಿ ಎಂಬಂತಾಗಿದೆ.