ತೀರ್ಥಹಳ್ಳಿ: ಪಟ್ಟಣದ ಬಾಳೇಬೈಲಿನಲ್ಲಿರುವ ಸರ್ಕಾರಿ ಡಿಗ್ರಿ ಕಾಲೇಜಿನ ಅತಿಥಿ ಉಪನ್ಯಾಸಕ ಗಣಕ ವಿಜ್ಞಾನ ವಿಭಾಗದ ಶ್ರೀಹರ್ಷ ಶಾನ್ ಬೋಗ್(38)ಇವರು ತಮ್ಮ ಹೆಬ್ರಿ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಶ್ರೀಹರ್ಷ ಸುಮಾರು 13 ವರ್ಷಕ್ಕೂ ಹೆಚ್ಚು ಕಾಲದಿಂದ ಈ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಅತ್ಯಂತ ಉತ್ತಮ ಉಪನ್ಯಾಸಕ ಎಂದು ಹೆಸರು ಪಡೆದವರು, ಕೊರೊನ ಸಂಕಷ್ಟ ಪರಿಸ್ಥಿತಿ ಜೀವನ ನಿರ್ವಹಣೆಯ ಕಷ್ಟ ಸಾಧ್ಯ, ಅತಿಥಿ ಉಪನ್ಯಾಸರಿಗೆ ಸರ್ಕಾರದ ಸೇವಾ ಭದ್ರತೆ ಆರ್ಥಿಕ ನೆರವು ಇಲ್ಲದಿರುವುದನ್ನು ಮನಗಂಡು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅವರ ಸಹಪಾಠಿಗಳು ತಿಳಿಸಿದ್ದಾ
ಇತ್ತೀಚೆಗೆ ರಾಜ್ಯಾದ್ಯಂತ ಅತಿಥಿ ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದಾರೆ ಆದರೆ ಸರ್ಕಾರ ಇವರ ಪ್ರತಿಭಟನೆಗೆ ಕಿವಿಗೊಡುತ್ತಿಲ್ಲದ್ದಿರುವುದು ವಿಷಾಧನೀಯ ಸಂಗತಿಯಾಗಿದೆ.
ತೀರ್ಥಹಳ್ಳಿ ಶಾಸಕ ಶಾಸಕ, ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ ಅವರ ಕ್ಷೇತ್ರದ ಶಿಕ್ಷಕರೋರ್ವರು ಸರ್ಕಾರದ ನೆರವನ್ನು ಸಿಗದೆ ಮನನೊಂದು ಈ ರೀತಿ ಆತ್ಮಹತ್ಯೆಗೆ ಶರಣಾಗಿರುವುದು ನಿಜಕ್ಕೂ ದುರ್ದೈವವೇ ಸರಿ.