ಶಿವಮೊಗ್ಗ, ಡಿ.02:
ಶಿವಮೊಗ್ಗ ಮತ್ತೊಮ್ಮೆ ಕರಾಳ ಕೊರೋನಾದ ಬೀಕರತೆ ನೋಡಬೇಕಾಗಿದೆಯೇ…? ಮೊನ್ನೆಯಿಂದ ದಶಕದ ಸಮೀಪ ತಲುಪಿದ್ದ ಕೊರೊನಾ ಪಾಸೀಟೀವ್ ಗೆ ಇಂದು ಆತಂಕದ ಸುದ್ದಿಯೊಂದು ಸೇರಿದೆ. ಶಿವಮೊಗ್ಗ ಸಾಗರ ರಸ್ತೆಯ ನರ್ಸಿಂಗ್ ಕಾಲೇಜಿನ 16 ಜನ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೋನ ಪಾಸಿಟಿವ್ ಬಂದಿದೆ.


ನಿನ್ನೆಯಿಂದ ಆರಂಭವಾದ ನರ್ಸಿಂಗ್ ಪರೀಕ್ಷೆ ಬರೆಯಲು ಕೇರಳದಿಂದ ಬಂದಿದ್ದ ಈ 16 ಜನರಲ್ಲಿ ಪ್ರೋಟೋಕಾಲ್ ಪ್ರಕಾರ ಪ್ರಕಾರ ಆರ್ ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರಲ್ಲಿ ಕೊರೋನ ಪಾಸಿಟಿವ್ ಕಂಡುಬಂದಿದೆ ಎಂದು ಮೂಲಗಳು ತಿಳಿಸಿದ್ದರೆ, ಮತ್ತೊಂದೆಡೆ 13 ವಿದ್ಯಾರ್ಥಿಗಳಿಗಷ್ಟೆ ಕಾಣಿಸಿಕೊಂಡಿದೆ ಎನ್ನುತ್ತಿದ್ದಾರೆ.


ಇವರ ಜೊತೆಗಿದ್ದ 41 ಜನ ವಿದ್ಯಾರ್ಥಿಗಳನ್ನ ಪ್ರಾಥಮಿಕ ಸಂಪರ್ಕವೆಂದು ಗುರುತಿಸಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿರುವ 41 ಜನರನ್ನ ಕಾಲೇಜಿನಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ.
ನಂಜಪ್ಪ ಲೈಫ್ ಕೇರ್ ನರ್ಸಿಂಗ್ ಕಾಲೇಜಿನ ಈ ಘಟನೆ ಆತಂಕ ಸೃಷ್ಟಿಸಿದೆ.


ಕೇರಳದಿಂದ ವಾಪಸ್ಸಾಗಿದ್ದ ವಿದ್ಯಾರ್ಥಿಗಳಿಗೆ ತಪಾಸಣೆಗೆ ಒಳಪಡಿಸಿದಾಗ ಕೋವಿಡ್ ಪಾಸಿಟಿವ್ ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಕಾಲೇಜ್ ನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.ಕೋವಿಡ್ ಪಾಸಿಟಿವ್ ಸಂಖ್ಯೆ ಸಹ ಹೆಚ್ಚಾಗುವ ಸಾದ್ಯತೆ ಇದೆ ಎನ್ನಲಾಗಿದೆ.
ಕಾಲೇಜ್ ಸಿಬ್ಬಂದಿಗೆ ಕೋವಿಡ್ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇದು ಶಿವಮೊಗ್ಗದಲ್ಲಿನ ಜನರಲ್ಲಿ ಆತಂಕ ಹುಟ್ಟಿಸಿದೆ.

By admin

ನಿಮ್ಮದೊಂದು ಉತ್ತರ

error: Content is protected !!