ಬೆಂಗಳೂರು: ರಾಜ್ಯ ಸರ್ಕಾರಿ‌ ನೌಕರರಿಗೆ ರಾಜ್ಯ ಸರ್ಕಾರದಿಂದ ದೀಪಾವಳಿಗೆ ಭರ್ಜರಿ ಗಿಫ್ಟ್ ನೀಡಿದೆ.
ಜುಲೈ 1 ರಿಂದ ಪೂರ್ವಾನ್ವಯ ಆಗುವಂತೆ ತುಟ್ಟಿಭತ್ಯೆಯನ್ನು ಶೇ 3 ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ನೌಕರನ ಮೂಲವೇತನದ ಶೇ 21.50 ರಷ್ಟಿದ್ದ ತುಟ್ಟಿಭತ್ಯೆ ಯನ್ನು ಶೇ 24.50 ಗೆ ಏರಿಸಲಾಗಿದೆ.

ಕೇಂದ್ರ ಸರ್ಕಾರದ ನೌಕರರಿಗೆ ತುಟ್ಟಿಭತ್ಯೆಯನ್ನು ಮೂಲವೇತನದ ಶೇಕಡ 31ರಷ್ಟಕ್ಕೆ 2021ರ ಜುಲೈ 1ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಹೆಚ್ಚಿಸಿದೆ.


ತುಟ್ಟಿಭತ್ಯೆಯು ಮೂಲವೇತನದ ಶೇ 28ರಷ್ಟರಿಂದ, ಶೇ 31ಕ್ಕೆ ಹೆಚ್ಚಳ ಆಗಲಿದೆ. ಸಶಸ್ತ್ರ ಪಡೆಗಳ ಸಿಬ್ಬಂದಿ ಹಾಗೂ ರೈಲ್ವೆ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶವನ್ನು ಸಂಬಂಧ‍ಪಟ್ಟ ಸಚಿವಾಲಯಗಳು ಹೊರಡಿಸಲಿವೆ.

By admin

ನಿಮ್ಮದೊಂದು ಉತ್ತರ

error: Content is protected !!