ಶಿವಮೊಗ್ಗ, ಅ.8
ತೀರ್ಥಹಳ್ಳಿಯ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಶಬನಂ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಸದಸ್ಯ ಜಯಪ್ರಕಾಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಈ ಮೂಲಕ ಬಹಳ ಕುತೂಹಲಕ್ಕೆ ಕಾರಣವಾಗಿದ್ದ ತೀರ್ಥಹಳ್ಳಿ ಪಪಂ ಚುನಾವಣೆಗೆ ತೆರೆಬಿದ್ದಿದೆ.


ಬಹಳಷ್ಟು ನಿರೀಕ್ಷೆ ಇಟ್ಡುಕೊಂಡಿದ್ದ ಕಾಂಗ್ರೆಸ್ ನ ಗೀತಾ ರಮೇಶ್ ಅವರಿಗೆ ಅಧ್ಯಕ್ಷ ಸ್ಥಾನ ತಪ್ಪಿ ಹೋಗಿದೆ. ಪಕ್ಷದ ಆಂತರಿಕ ವಲಯದಲ್ಲಿ ಶಬನಂಗೆ ಅದೃಷ್ಟ ಖುಲಾಯಿಸಿದೆ. ಈ ಮೊದಲು ಕಾಂಗ್ರೆಸ್ ಪಕ್ಷದ ವತಿಯಿಂದ ಚೀಟಿ ಮೂಲಕ ಆಯ್ಕೆ ಮಾಡಲಾಯಿತು.
ಗೀತಾ ರಮೇಶ್, ಶಬನಂ, ಸುಶೀಲಾ ಶೆಟ್ಟಿ ಅವರನ್ನ ಚೀಟಿ ಮೂಲಕ ಪಕ್ಷ ಆಯ್ಕೆ ಮಾಡಿ ಅಧ್ಯಕ್ಷ ಸ್ಥಾನಕ್ಕೆ ಆರಿಸಲಾಯಿತು. ಎಂದಿನಂತೆ ಪಕ್ಷದ ನಿರ್ದೇಶನದಂತೆ ಜಯಪ್ರಕಾಶ್ ಶೆಟ್ಟಿಯನ್ನ ಕಣಕ್ಕಿಳಿಸಲಾಯಿತು.


ಅದರ ಜೊತೆಗೆ 6 ಜನ ಸದಸ್ಯರಿದ್ದ ಬಿಜೆಪಿಯಿಂದಲೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನ ಕಣಕ್ಕಿಳಿಸಲಾಗಿತ್ತು. ಜ್ಯೋತಿ ಮೋಹನ್ ಮತ್ತು ಉಪಾಧ್ಯಕ್ಷರಾಗಿ ರವೀಶ್ ಸಹ ಕಣದಲ್ಲಿ ಸ್ಪರ್ಧಿಸಿದ್ದರು.


15 ಜನ ಸದಸ್ಯರಿದ್ದ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ನ ಶಬನಂ ಅವರಿಗೆ 9 ಜನ ಮತಹಾಕಿದರೆ ಉಪಾಧ್ಯಕ್ಷರಾದ ಜಯಪ್ರಕಾಶ್ ಶೆಟ್ಟಿಗೂ ಅಷ್ಟೆ ಮತ ದೊರೆತಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿಯ ಜ್ಯೋತಿ ಮೋಹನ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ರವೀಶ್ ಗೆ ತಲಾ 6 ಮತಗಳು ಪಡೆದರು.

By admin

ನಿಮ್ಮದೊಂದು ಉತ್ತರ

error: Content is protected !!