ಶಿವಮೊಗ್ಗ, ಅ.7:
ಇದೊಂದು Good News…, ಅಂತೂ ಇಂತೂ ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿ ಪ್ರಥಮ ದರ್ಜೆ ಸಹಾಯಕ ಗಿರಿರಾಜ್ ಸೇಪಾಗಿ ಸಿಕ್ಕಿದ್ದಾರೆ.
ಕೆಲಸದ ಒತ್ತಡ, ಹಿರಿಯ ಅಧಿಕಾರಿಗಳ ಅಸಹಕಾರಕ್ಕೆ ನೊಂದು ಮೊಬೈಲ್ ಮೇಸೆಜ್‌ನಲ್ಲೇ ವಿಲ್ ಬರೆದು ಕಳೆದ ಹನ್ನೊಂದಿನದಿನದಿಂದ ನಾಪತ್ತೆಯಾಗಿದ್ದ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿಯ ಪ್ರಥಮ ದರ್ಜೆಸಹಾಯಕ ಹಾಗೂ ಸರ್ಕಾರಿ ನೌಕರರ ಸಂಘದ ಜಿಲ್ಲಾ ನಿರ್ದೇಶಕ ಗಿರಿರಾಜ್ ಇಂದು ಈಗಷ್ಟೆ ಧರ್ಮಸ್ಥಳದಲ್ಲಿ ಪತ್ತೆಯಾಗಿದ್ದಾರೆ.


ತೀವ್ರ ಅಸ್ವಸ್ಥಗೊಂದಿದ್ದ ಗಿರಿರಾಜ್ ಅವರನ್ನ ಧರ್ಮಸ್ಥಳದ ಅಡುಗೆ ಬಟ್ಟರೊಬ್ಬರು ಪತ್ತೆ ಹಚ್ಚಿದ್ದಾರೆ. ಅವರ ಮೂಲಕ ಮಾಹಿತಿ ಪಡೆದ ಸರ್ಕಾರಿ ನೌಕರರ ಸಂಘದ ಪದಾದಿಕಾರಿಗಳು ಗಿರಿರಾಜ್ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಹಿಂದೆ ಕೆಲವರ ಮೊಬೈಲ್‌ಗೆ ಗಿರಿರಾಜ್ ಅತ್ಯಂತ ಸುದೀರ್ಘವಾಗಿ ಮೊಬೈಲ್ ನಲ್ಲಿ ಪತ್ರ ಬರೆದು ನಾಪತ್ತೆಯಾಗಿದ್ದರು.
ಶಿವಮೊಗ್ಗ ಜಿಲ್ಲಾಧಿಕಾರಿ ಶಿವಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಸೇರಿದಂತೆ ಪೊಲೀಸ್ ಇಲಾಖೆ ಅವರನ್ನು ಅತ್ಯಂತ ಕಾಳಜಿಯಿಂದ ಹುಡುಕುತ್ತಿದ್ದರು. ಅವರು ವಾಪಾಸಾಗುವ ಸಾದ್ಯತೆಗಳನ್ನು ಎಸ್ಪಿ ಲಕ್ಷ್ಮಿಪ್ರಸಾದ್ ತಿಳಿಸಿದ್ದರು.
ಭದ್ರಾವತಿ ತಾಲ್ಲೂಕು ಎರೆಹಳ್ಳಿ ಬಳಿ ಅವರ ಮೊಬೈಲ್ ಸ್ವಿಚ್‌
ಆಫ್ ಆಗಿತ್ತು.


ಗಿರಿರಾಜ್ ಅವರ ಮೊಬೈಲ್ ಲೋಕೇಷನ್ ಭದ್ರಾವತಿ ತಾಲೂಕಿನ ಶಿವನಿ ರಸ್ತೆಯ ಯರೇಹಳ್ಳಿ, ಉದ್ಧಾಮ ಆಂಜನೇಯ ಸುತ್ತಾಮುತ್ತಲ ೧೦ ಕಿ.ಮೀ. ವ್ಯಾಪ್ತಿ ಯಲ್ಲಿ ಸಿಕ್ಕಿತ್ತು. ಆ ಕ್ಷಣದಿಂದ ಇಂದಿನವರೆಗೆ ಅದೇ ಸರ ಹದ್ದಿನಲ್ಲಿ ಗಿರಿರಾಜ್ ಅವರನ್ನು ಹುಡುಕುತ್ತಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!