tungataranga.Com ಶಿವಮೊಗ್ಗ ಜಿಲ್ಲೆಯ ಸಮಗ್ರ ಸುದ್ದಿಗಾಗಿ
ಶಿವಮೊಗ್ಗ : ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಹಾಗೂ ವಿಧಾನಪರಿಷತ್ ನಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ ಅಪರೂಪದ ಜನಪ್ರತಿಗಳಲ್ಲಿ ಒಬ್ಬರಾದ ಆಯನೂರು ಮಂಜುನಾಥ್ ಅವರಿಗೆ ಈ ಬಾರಿ ಸಚಿವಯೋಗ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.
ದೇಶದ ನಾಲ್ಕೂ ಸದನಗಳಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಪ್ರತಿನಿಧಿಸಿರುವ ಆಯನೂರು ಬಡವರ, ಕಾರ್ಮಿಕರ, ನೊಂದವರ ಪಾಲಿಗೆ ಆ ಕ್ಷಣದ ಸಹಾಯವಾಣಿ ಎಂದೇ ಹೆಸರಾದವರು.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಅಪ್ತರು ಎಂದೇ ಗುರುತಿಸಿಕೊಂಡಿರುವ ಅವರು ಬಿಜೆಪಿ ಪಕ್ಷದ ಸಂಘಟನೆಗಾಗಿ ತನ್ನದೇ ಆದ ಪರಿಶ್ರಮದೊಂದಿಗೆ ರಾಜ್ಯ ಹಾಗೂ ಜಿಲ್ಲಾ ಬಿಜೆಪಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ.
ಲಿಂಗಾಯತ ಸಮುದಾಯದ ರಾಜಕೀಯ ಮತ್ಸದ್ದಿ, ನೇರ, ನಿಷ್ಟುರವಾದಿಯಾಗಿರುವ ಇವರು ಶಿವಮೊಗ್ಗ ಜಿಲ್ಲೆಗೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದರೆ ತಪ್ಪಗಲಾರದು.
ಆಯನೂರು ಮಂಜುನಾಥ್ ಅವರು ಕಾರ್ಮಿಕ ಹೋರಾಟ, ದಿನಗೂಲಿ ನೌಕರರ, ಅತಿಥಿ ಉಪನ್ಯಾಸಕರ ಪರ ಹೋರಾಟ, ಶ್ರಮಿಕರ ಪರವಾಗಿರುವ ಇವರು ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿ ಸ್ಥಾನ ಪಡೆಯುವಲ್ಲಿ ಯೋಗ್ಯರಾಗಿದ್ದಾರೆ ಎಂದು ಬಿಜೆಪಿಯ ಕೆಲ ಕಟ್ಟಾಳುಗಳು ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆಯಿಂದ ಸಚಿವ ಸ್ಥಾನಕ್ಕಾಗಿ ಬಹುಶಃ ಬಿಜೆಪಿ ಶಾಸಕರ (ಪರಿಷತ್ ಸದಸ್ಯರೂ ಸೇರಿ) ಹೆಸರುಗಳು ಚಾಲ್ತಿಯಲ್ಲಿದ್ದು, ಈ ಪಟ್ಟಿಯಲ್ಲಿ ಆಯನೂರು ಮಂಜುನಾಥ್ ಅವರ ಹೆಸರೂ ಸಹ ಇದೇ ಎನ್ನುವುದು ಬಲ್ಲ ಮೂಲಗಳ ಮಾಹಿತಿ.
ಆಯನೂರು ಮಂಜುನಾಥ್ ಸಚಿವರಾದರೆ ಒಂದಿಷ್ಟು ಸಮಾಜಮುಖಿ ಕೆಲಸ ಜೊತೆ ಜಿಲ್ಲೆಯ ಅಭಿವೃದ್ಧಿಯೂ ಆಗುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಆಯನೂರು ಮಂಜುನಾಥ್ ಗೆ ಸಚಿವ ಸ್ಥಾನ ಸಿಕ್ಕರೆ ಜಿಲ್ಲೆಯಲ್ಲಿ ಒಂದು ಹೊಸ ಸಂಚಲನ ಉಂಟಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ.
ಒಟ್ಟಾರೆ ಈ ಭಾರಿ ಆಯನೂರು ಮಂಜುನಾಥ್ ಗೆ ಮಂತ್ರಿಯಾಗುವ ಅದೃಷ್ಟ ಈ ಬಾರಿಯಾದರೂ ಫಲಿಸಲಿದೆಯೇ ಎಂದು ಕಾದುನೋಡಬೇಕಿದೆ.