ಶಿವಮೊಗ್ಗ : ಇಲ್ಲಿನ ಸೋಮಿನಕೊಪ್ಪ ಭೋವಿ ಕಾಲೋನಿ ಕೆರೆಯಲ್ಲಿ ನಿನ್ನೆ ರಾತ್ರಿ ಮೀನು ಹಿಡಿಯಲು ಹೋದ ನಾಲ್ವರಲ್ಲಿ ಓರ್ವ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಸಾವು ಕಂಡ ಘಟನೆ ಇಂದು ಬೆಳಿಗ್ಗೆ ಪತ್ತೆಯಾಗಿದೆ.
ಹೆಚ್ಚು ಮಳೆ ಬಿದ್ದ ಹಿನ್ನೆಲೆಯಲ್ಲಿ ಕೆರೆ ತುಂಬಿ ನೀರು ಹೊರಹೋಗಿತ್ತಿತ್ತು. ಆಗ ಮೀನಿಗಾಗಿ ಹರಸಾಹಸ ಪಡಲು ಹೋಗಿ ಸಾವು ಕಂಡ ಘಟನೆ ಇದಾಗಿದೆ.
ಭೋವಿ ಕಾಲೋನಿಯ ನಿವಾಸಿ ಹಾಲೇಶ (35) ಮೃತ ದುರ್ದೈವಿ.
ಘಟನೆ ವಿವರ : ಸೋಮಿನಕೊಪ್ಪ ದಲ್ಲಿ ಎಲ್ಲರಿಗೂ ಚಿರಪರಿಚಿತನಾಗಿದ್ದ ಈತನನ್ನು ಕೆಲಸಕ್ಕೆ ಕರೆಯಲು ಹೋದಾಗ ಈತ ಮನೆಯಲ್ಲಿ ಇಲ್ಲದಿರುವುದು ತಿಳಿದು ಬಂದಿದೆ. ರಾತ್ರಿ ಸೋಮಿನಕೊಪ್ಪ ಕೆರೆಗೆ ನಾಲ್ವರು ಮೀನು ಹಿಡಿಯಲು ಹೋಗಿದ್ದ ವಿಷಯ ತಿಳಿದು ಬಂದಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಭೋವಿ ಕಾಲೋನಿ ಯುವಕರು ಆತನ್ನನ್ನು ಹುಡುಕಲು ಆರಂಭಿಸಿದರು. ಹುಡುಕಾಟ ನಡೆಸಿದ ಯುವಕರು ಹಾಲೇಶನ ಶವ ಪಕ್ಕದಲ್ಲಿ ಇರುವ ಗದ್ದೆಯಲ್ಲಿ ಆತನ ಶವ ಪತ್ತೆಯಾಗಿದೆ.
ಈಗ ಸ್ಥಳಕ್ಕೆ ಬೇಟಿ ನೀಡಿದ ವಿನೋಬನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.