ತೀರ್ಥಹಳ್ಳಿ: ಕರ್ನಾಟಕ ಮುಜರಾಯಿ ದೇವಾಲಯಗಳಲ್ಲಿ ಪ್ರಾಣಿ ಬಲಿ ನಿಷೇಧ ಅನ್ವಯ ತಾಲೂಕಿನ ಹಣಗೆರೆಯ ಶ್ರೀ ಭೂತರಾಯ ಚೌಡೇಶ್ವರಿ ದೇವಾಲಯ ಮತ್ತು ಸೈಯದ್ ಸಾದತ್ ದರ್ಗಾ ಪರಿಸರದಲ್ಲಿ ಕುರಿ ಕೋಳಿ ಪ್ರಾಣಿ ಬಲಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು ತೀರ್ಥಹಳ್ಳಿ ತಹಸೀಲ್ದಾರ್ ಡಾ. ಶ್ರೀಪಾದ್ ಆದೇಶ ಹೊರಡಿಸಿದ್ದಾರೆ.
ಕಾನೂನು ಮೀರಿ ಯಾರಾದರೂ ಕುರಿ – ಕೋಳಿ ಬಲಿ ನೀಡಿದರೆ ಅವರುಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು,
ಹಣಗೆರೆಕಟ್ಟೆ ಅಭಿವೃದ್ಧಿ ಮತ್ತು ಪ್ರವಾಸಿ ತಾಣವಾಗಿ ಮಾಡಲು ಈಗಾಗಲೇ ಜಿಲ್ಲಾಡಳಿತ ಕಾಮಗಾರಿ ಕೈಗೆತ್ತಿಕೊಂಡಿದೆ. ಅಲ್ಲಿನ ಕೆರೆ, ಅರಣ್ಯ ಎಲ್ಲವೂ ಅಲ್ಲಿ ಪ್ರಾಣಿ ಬಲಿ ಕಾರಣ ಕೊಳಕಾಗಿದ್ದು,ಇದೀಗ ಈ ನಿಯಮ ತರಲಾಗಿದೆ ಎಂದು ತಿಳಿಸಿದ್ದಾರೆ.