Shivamogga Sp Trafic jam


ಶಿವಮೊಗ್ಗ: ನಗರದಲ್ಲಿ ಒಮ್ಮೆಲೆ ಭಾರೀ ಸಂಖೈಯ ವಾಹನಗಳು ರಸ್ತೆಗಿಳಿದ ಕಾರಣ ಬಹುತೇಕ ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಸಂಚಾರದಟ್ಟಣೆ ಉಂಟಾಗಿತ್ತು. ಬಹು ಹೊತ್ತಿನವರೆಗೆ ವಾಹನಗಳು ಮುಂದೆ ಸಾಗದೇ ಸಾಧ್ಯವಾಗದಿದ್ದಾಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿ ಪ್ರಸಾದ್ ಅವರೇ ಫೀಲ್ಡಿಗಿಳಿದರು.
ನಗರದಲ್ಲಿ ವಾರಾಂತ್ಯದ ಕರ್ಫ್ಯೂ ಮುಗಿಯುತ್ತಿದ್ದಂತೆ ಶಿವಮೊಗ್ಗ ನಗರ ಮತ್ತೊಮ್ಮೆ ವಾಹನ ಸಂಚಾರ ದಟ್ಟಣೆಯಿಂದ ಕೂಡಿದ್ದು, ಇಂದು ಬೆಳಗಿನಿಂದಲೇ ವಾಹನಗಳು ಭಾರೀ ಸಂಖ್ಯೆಯಲ್ಲಿ ರಸ್ತೆಗಳಿದವು. ಕಚೇರಿ ಸಮಯವಾಗುತ್ತಿದ್ದಂತೆಯೇ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಒಂದೊಂದು ವೃತ್ತದಲ್ಲಿ ಕನಿಷ್ಠ 10-20 ನಿಮಿಷ ಕಾಯಬೇಕಾದ ಪರಿಸ್ಥಿತಿ ಉಂಟಾಗಿತ್ತು. ಕೆಲವು ಕಡೆ ಪಾದಾಚಾರಿಗಳು ಓಡಾಡುವುದೇ ಕಷ್ಟವಾಗಿತ್ತು. ಅಂಗಡಿ, ಹೋಟೆಲ್ ಓಪನ್ ಆಗಿದ್ದರಿಂದ ಜನದಟ್ಟಣೆ ಹೆಚಾಗಿತ್ತು.
ಕೊರೋನಾದ ಯಾವ ಭಯವೂ ಜನರನ್ನು ಬಾಧಿಸಲಿಲ್ಲ ಎಂದು ಕಾಣುತ್ತದೆ. ಹಲವರು ಮಾಸ್ಕ್ ಹಾಕಿಕೊಂಡಿರಲಿಲ್ಲ. ಮಾಸ್ಕ್ ಸರಿಯಾಗಿ ಧರಿಸಿರಲಿಲ್ಲ. ಅಂತರವಂತೂ ಇರಲೇ ಇಲ್ಲ. ಕೊರೋನಾ ಹೋಗೇಬಿಟ್ಟಿದೆ ಎಂದು ಜನ ತಿಳಿದುಕೊಂಡಂತಿತ್ತು. ಯಾವ ವೃತ್ತಗಳಲ್ಲೂ ಎಂದಿನಂತೆ ನಿಯಂತ್ರಿಸಲು ಪೊಲೀಸರೂ ಇರಲಿಲ್ಲ. ಅನೇಕ ಸಂಚಾರ ವಾಹನಗಳು ನಿಯಮಗಳನ್ನೂ ಪಾಲಿಸುತ್ತಿರಲಿಲ್ಲ. ಏಕಮುಖ ರಸ್ತೆಗಳಲ್ಲೂ ಎರಡೂ ಕಡೆ ವಾಹನ ಸಂಚರಿಸಿದ್ದರಿಂದ ದಟ್ಟಣೆ ಹೆಚ್ಚಾಗಿತ್ತು. ಕೆಲವು ರಸ್ತೆಗಳು ಕಾಮಗಾರಿಯಿಂದಾಗಿ ಬಂದ್ ಆಗಿದ್ದರಿಂದ ವಾಹನ ಸಂಚಾರಕ್ಕೆ ಮತ್ತಷ್ಟು ಅಡ್ಡಿ ಉಂಟಾಗಿತ್ತು.
ಇದರ ನಡುವೆಯೂ ಲಸಿಕೆ ಹಾಕಿಸಲು ಇಂದು ಕೂಡ ಉದ್ದನೆಯ ಸಾಲಿನಲ್ಲಿ ಸಾರ್ವಜನಿಕರು ನಿಂತಿದ್ದು ಕಂಡು ಬಂದಿತು. ಬೀದಿ ಬದಿ ವ್ಯಾಪಾರಿಗಳು ಹೆಚ್ಚಾಗಿಯೇ ಇದ್ದರು. ಗಾಂಧಿ ಬಜಾರ್, ಕುವೆಂಪು ರಸ್ತೆ, ದುರ್ಗಿಗುಡಿ, ನೆಹರೂ ರಸ್ತೆ, ಸವಳಂಗ ರಸ್ತೆ, ಬಿ.ಹೆಚ್. ರಸ್ತೆ, ಬಾಲರಾಜ್ ಅರಸ್ ರಸ್ತೆ ಮುಂತಾದದ ಕಡೆಗಳಲ್ಲಂತೂ ಜನದಟ್ಟಣೆ, ವಾಹನದಟ್ಟಣೆ ಹೆಚ್ಚಾಗಿತ್ತು. ಕೆಲವು ರಸ್ತೆಗಳಲ್ಲಿ ಬೆರಳೆಣಿಕೆಯಷ್ಟಿದ್ದ ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಿಸಲು ಹರಸಾಹಸ ನಡೆಸುವಂತಾಗಿತ್ತು.
ವಾಹನಗಳು ಮುಂದೆ ಸಾಗುವಂತೆ ಮಾಡಿ ಸಂಚಾರ ಸುಗಮಗೊಳಿಸಿದರು. ಏಕಾಏಕಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಪೊಲೀಸರಿಗೆ ತಲೆನೋವಾಗಿತ್ತು.

By admin

ನಿಮ್ಮದೊಂದು ಉತ್ತರ

error: Content is protected !!