ಶಿವಮೊಗ್ಗ: ನುಡಿಗಿಡ ಪತ್ರಿಕೆಯ ಉಪಸಂಪಾದಕ ಅಂಜನಪ್ಪ ಹೆಚ್. (45) ಇಂದು ಬೆಳಗ್ಗೆ ನಿಧನರಾದರು.
ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು, ಪತ್ನಿ ಭದ್ರಾವತಿ ನಗರಸಭೆಯ ಕಂದಾಯ ನಿರೀಕ್ಷಕರಾದ ಮಹಾಲಕ್ಷ್ಮೀ, ಪುತ್ರಿ, ಸಹೋದರ ನುಡಿಗಿಡ ಪತ್ರಿಕೆಯ ಸಂಪಾಕದ ಮಂಜುನಾಥ್ ಸೇರಿದಂತೆ ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಸಂಜೆ ನಗರದ ಗುಡ್ಡೆಕಲ್ನ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.