ಭದ್ರಾವತಿ : ನಗರದ ತರೀಕೆರೆ ರಸ್ತೆಯ ಶಿವನಿ ಕ್ರಾಸ್ ಬಳಿಯ ಮನೆಯೊಂದರ ಹಂಚಿನ ಮೇಲ್ಚಾವಣಿ ಮೇಲಿನ ಶೆಡ್ನಲ್ಲಿದ್ದ 3 ಚೀಲ ಅಡಿಕೆ ಕಳ್ಳತನ ಮಾಡಿದ ನಾಲ್ವರು ಕಳ್ಳರನ್ನು ಹಳೇನಗರ ಪೋಲೀಸರು ಬಂಧಿಸಿ ಆರೋಪಿಗಳಿಂದ 67,200 ರೂ ಬೆಲೆ ಬಾಳುವ ಅಡಿಕೆಯನ್ನು ವಶ ಪಡಿಸಿಕೊಂಡಿದ್ದಾರೆ.
ಟಿ.ಕೆ.ರಸ್ತೆಯ ನೆಹರೂ ನಗರದ ಹನುಮಂತಪ್ಪ ಶೆಡ್ ವಾಸಿಗಳಾದ ಅಮಿಲ್ (20), ಸಲ್ಮಾನ್ ಖಾನ್ (26), ಜಾವಿದ್ (48) ಹಾಗು ಟಿ.ಕೆ.ರಸ್ತೆಯ ಎಂ.ಎಂ.ಕಾಂಪೌಂಡ್ ವಾಸಿ ಎಂ.ಪುನೀತ್ ಅಲಿಯಾಸ್ ಮಣಿ (23) ಎಂಬ ನಾಲ್ವರು ಆರೋಪಿಗಳನ್ನು ನ್ಯಾಯಾಲಯವು ಮೇ:14 ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ. ಸಬ್‌ಇನ್ಸ್‌ಪೆಕ್ಟರ್ ಶ್ರೀನಿವಾಸ್, ಸಿಬ್ಬಂದಿಗಳಾದ ಹಾಲಪ್ಪ, ಗಿರಿಧರ, ಮಹಮ್ಮದ್ ಫರೋಜ್, ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಎಸ್‌ಪಿ, ಎಎಸ್‌ಪಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕೃಷ್ಣಮೂರ್ತಿ ಮತ್ತು ಸಿಪಿಐ ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ ಆರೋಪಿಗಳ ದಸ್ತಗಿರಿ ಮಾಡಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!