ಶಿವಮೊಗ್ಗ,ಡಿ.೨: ನಗರದ ಬಿ.ಹೆಚ್.ರಸ್ತೆಯಲ್ಲಿರುವ ಶಿವಮೊಗ್ಗದ ಪ್ರಸಿದ್ಧ ಮೇನ್ ಮಿಂಡ್ಲ್ ಸ್ಕೂಲ್ ಸರ್ಕಾರಿ ಉರ್ದು ಪ್ರೌಢಶಾಲೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಬಾಲಕಿಯರ ಕಾಲೇಜಿನ ಆವರಣ ಗೋಡೆ ಕುಸಿದು ಅನೇಕ ವರ್ಷಗಳೇ ಕಳೆದರು, ಶಿಕ್ಷಣ ಸಚಿವರ ತವರೂರಲ್ಲಿ ಅಧಿಕಾರಿಗಳ ಗಮನಕ್ಕೆ ಇನ್ನೂ ಬಂದಿಲ್ಲ.


ಈ ಬಗ್ಗೆ ಮುಖ್ಯೋಪಧ್ಯಾಯರುಗಳು, ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೆ ಗಮನಕ್ಕೆ ತಂದಿದ್ದು, ಯಾವುದೇ ಅನುದಾನ ಬಿಡುಗಡೆಯಾಗದೆ ಅವ್ಯವಸ್ಥೆಯ ತಾಣವಾಗಿದ್ದು, ಬಾಲಕಿಯರ ಈ ಶಿಕ್ಷಣ ಸಂಸ್ಥೆಗೆ ಭದ್ರತೆ ಇಲ್ಲದಂತ್ತೆ ಆಗಿದೆ.


ಸಂಜೆ ಆದರೆ ಸಾಕು ಪೋಲಿ, ಪುಂಡರ ಕಾಟ ಶುರುವಾಗುತ್ತದೆ. ಶಾಲಾ ಆವರಣದಲ್ಲೇ ನೇರವಾಗಿ ಗಾಂಜಾ ಸೇವನೆ, ಇಸ್ಪೀಟು ಮತ್ತು ಅನೈತಿಕ ಚಟುವಟಿಕೆಯ ತಾಣವಾಗಿದ್ದು, ಸ್ಥಳೀಯರು ಈ ಬಗ್ಗೆ ಮಾಧ್ಯಮಗಳ ಗಮನಕ್ಕೆ ಅನೇಕ ಬಾರಿ ತಂದಿದ್ದಾರೆ. ಮಾಧ್ಯಮಗಳು ಕೂಡ ಈ

ವಿಚಾರವಾಗಿ ಹಲವು ಬಾರಿ ಪ್ರಕಟಿಸಿದರು ಕೂಡ ಶಿಕ್ಷಣ ಸಚಿವರ ಜಿಲ್ಲೆಯಲ್ಲೇ ನಗರ ಮಧ್ಯದ ಈ ಪ್ರಮುಖ ಶಾಲೆ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ.
ಸರ್ಕಾರಿ ಶಾಲೆ ಉಳಿಸಲೇಬೇಕು ಎಂದು ಹೇಳುವ ಶಿಕ್ಷಣ ಸಚಿವರು ಕೂಡಲೇ ಇದಕ್ಕೆ

ಸೂಕ್ತ ಅನುದಾನ ಬಿಡುಗಡೆಗೊಳಿಸಿ ಜಿಲ್ಲೆಯ ಅತ್ಯಂತ ಹಳೆಯ ಶಾಲೆಗಳಲ್ಲಿ ಒಂದಾದ ಈ ಶಾಲೆಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!