ಶಿವಮೊಗ್ಗ ನವೆಂಬರ್ 12 ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಮಕ್ಕಳ ದಿನಾಚರಣೆಯ ಪ್ರಯುಕ್ತ ನ.14 ರಂದು ಗೋಪಾಲಗೌಡ ಬಡಾವಣೆಯಲ್ಲಿರುವ ಕ್ರೀಡಾಸಂಕೀರ್ಣದಲ್ಲಿ 6 ರಿಂದ 20 ವರ್ಷ ವಯೋಮಿತಿಯೊಳಗಿನ ಬಾಲಕ/ಬಾಲಕಿಯರಿಗೆ 500ಮೀ, 1000 ಮೀ, 15000 ಮೀ ಮತ್ತು 2000ಮೀ ಫ್ರೀಸ್ಟೈಲ್ ಈಜು ಸ್ಪರ್ಧೆಯನ್ನು ಆಯೋಜಿಸಿದೆ.


ಆಸಕ್ತರು ನ. 14 ರಂದು ಬೆಳಗ್ಗೆ 6.00 ಗಂಟೆಗೆ ಆಯೋಜನಾ ಸ್ಥಳದಲ್ಲಿ ಹಾಜರಾಗಿ ನೊಂದಣಿ ಮಾಡಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸಚಿನ್ ಬಿ.ಎಸ್. -9743820293 ಇವರನ್ನು ಸಂಪರ್ಕಿಸುವುದು.

——————————

ವಾಲ್ಮೀಕಿ ಭವನ ಬಾಡಿಗೆಗೆ ಲಭ್ಯ
ಶಿವಮೊಗ್ಗ: ನವೆಂಬರ್ 12; ಶಿವಮೊಗ್ಗ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ವಿದ್ಯಾನಗರದ ಕಂಟ್ರಿ ಕ್ಲಬ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮಹರ್ಷಿ ವಾಲ್ಮೀಕಿ ಜಿಲ್ಲಾ ಭವನವನ್ನು ದಿನದ ಆಧಾರದ ಮೇಲೆ ಬಾಡಿಗೆಗೆ ನೀಡಲಾಗುತ್ತಿದ್ದು

, ಈ ಭವನದಲ್ಲಿ 500 ಜನ ಕುಳಿತುಕೊಳ್ಳುವ ಸಭಾಂಗಣ, ಊಟದ ಹಾಲ್, ಅಡುಗೆ ಮನೆ, ದಾಸ್ತಾನು ಕೊಠಡಿ, ಪ್ಲಾಸ್ಟಿಕ್ ಕುರ್ಚಿಗಳು, ಊಟದ ಟೇಬಲ್ ಹಾಗೂ ಇತರೆ ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಪರಿಶಿಷ್ಟ ವರ್ಗದವರಿಗೆ ರೂ. 2500/- ಹಾಗೂ ಇತರೆಯವರಿಗೆ ರೂ. 3000/- ಬಾಡಿಗೆಯನ್ನು ನಿಗದಿಪಡಿಸಲಾಗಿದ್ದು, ವಿದ್ಯುತ್ ಮತ್ತು ಇತರೆ ವೆಚ್ಚಗಳು ಪ್ರತ್ಯೇಕ.
ಹೆಚ್ಚಿನ ಮಾಹಿತಿ ಹಾಗೂ ವಿಚಾರಣೆಗಾಗಿ ದೂ.ಸಂ.: 08182-200266/ 9986029073/ 9482762350 ಗಳನ್ನು ಸಂಪರ್ಕಿಸುವAತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಜಿ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!