ಶಿವಮೊಗ್ಗ: ಪೌರಕಾರ್ಮಿಕರ ಮೇಲೆ ಹಲ್ಲೆ ನಡೆಸುವುದು, ಜಾತಿ ಹೆಸರಿನಲ್ಲಿ ನಿಂದನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಅಂತಹವರ ವಿರುದ್ಧ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡದ(ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ ಯಡಿ ಕ್ರಮಜರುಗಿಸುವುದಾಗಿ

ಪೌರಾಡಳಿತ ನಿರ್ದೇಶನಾಲಯ ಹೊರಡಿಸಿದ್ದು,ಈ ಆದೇಶವನ್ನು ಶಿವಮೊಗ್ಗ ಮಹಾನಗರಪಾಲಿಕೆ ಪೌರಸೇವಾ ನೌಕರರ ಸಂಘದ ಅಧ್ಯಕ್ಷರಾದ ಎನ್.ಗೋವಿಂದ ಅವರು ಸ್ವಾಗತಿಸಿದ್ದಾರೆ.


ಪೌರಕಾರ್ಮಿಕರ ಮೇಲೆ ಹಲ್ಲೆ, ದೌರ್ಜನ್ಯ ದ ಪ್ರಕರಣಗಳು ಹೆಚ್ಚುತ್ತಿರುವ

ಬಗ್ಗೆ ಮೊನ್ನೆಯಷ್ಟೆ ಶಿವಮೊಗ್ಗ ನಗರದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ಸಂದರ್ಭದಲ್ಲೆ ಮಹಾನಗರ ಪಾಲಿಕೆ ಪೌರಸೇವಾನೌಕರರ ಸಂಘವು ರಾಜ್ಯಸರ್ಕಾರದ ಗಮನಸೆಳೆದಿದ್ದು,

ಪೌರಕಾರ್ಮಿಕರ ಮೇಲೆ
,ನಿಂದನೆ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಗಿತ್ತು.


ಪೌರಕಾರ್ಮಿಕರ ಜೊತೆ ಸೌಹಾರ್ದ ತೆಯಿಂದ ನಡೆದುಕೊಳ್ಳಬೇಕು,ಅವರನ್ನು ಅಗೌರವದಿಂದ ಕಾಣುವುದು ಶಿಕ್ಷಾರ್ಹ ಅಪರಾಧ,

ಅಂತಹವರ ವಿರುದ್ಧ ಕಠಿಣ ಕಾನೂನುಕ್ರಮ ಜರುಗಿಸುವುದಾಗಿ ಪೌರಾಡಳಿತ ನಿರ್ದೇಶನಾಲಯ ಆದೇಶ ಹೊರಡಿಸಿರುವುದು ಸೂಕ್ತವಾಗಿದೆ ಎಂದು ಸಂಘದ ಅಧ್ಯಕ್ಷರಾದ ಎನ್.ಗೋವಿಂದ ಅವರು ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!