ಪ್ರೋತ್ಸಾಹಧನ ಮತ್ತು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ಶಿವಮೊಗ್ಗ, ಸೆಪ್ಟೆಂಬರ್ 25: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳಾದ ಚೇತನ ಯೋಜನೆ, ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ
ಯೋಜನೆ, ಧನಶ್ರೀ ಯೋಜನೆಯಡಿ ಪ್ರೋತ್ಸಾಹಧನ ಮತ್ತು ಉದ್ಯೋಗಿನಿ ಯೋಜನೆಯ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಸೆ.30 ರೊಳಗಾಗಿ ಗ್ರಾಮಾ ಒನ್, ಶಿವಮೊಗ್ಗ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಖುದ್ದಾಗಿ ಅಥವಾ ದೂ, ಸಂ 08182-295514 ಸಂಪರ್ಕಿಸುವAತೆ ಶಿವಮೊಗ್ಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
————————-
ಸೆ,29ರಂದು ಮಕ್ಕಳ ದಸರಾ ಕ್ರೀಡಾ ಮತ್ತು ವಿವಿಧ ಸ್ಪರ್ಧಾ ಕಾರ್ಯಕ್ರಮ
ಶಿವಮೊಗ್ಗ, ಸೆಪ್ಟೆಂಬರ್ 25, () : ಶಿವಮೊಗ್ಗ ಮಹಾನಗರ ಪಾಲಿಕೆಯು ನಾಡಹಬ್ಬ ದಸರಾ 2024ರ ಕಾರ್ಯಕ್ರಮದಲ್ಲಿ ಸೆ. 29 ರಂದು ಬೆಳಗ್ಗೆ 9 ಗಂಟೆಗೆ ಮಕ್ಕಳ ದಸರಾ ಕ್ರೀಡಾ ಮತ್ತು ಸ್ಪರ್ಧೆಯನ್ನು ಅನುದಾನಿತ ಹಾಗೂ ಅನುದಾನ ರಹಿತ ಶಾಲೆಯ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಿಳಘಟ್ಟ ಸರ್ಕಾರಿ ಪ್ರೌಡ ಶಾಲೆಯಲ್ಲಿ ಏರ್ಪಡಿಸಿದೆ.
ಈ ಕಾರ್ಯಕ್ರಮದಲ್ಲಿ ಚಿತ್ರಕಲಾ, ಛದ್ಮ ವೇಷ, ಮ್ಯೂಸಿಕಲ್ ಛೇರ್, ಲೋಟದಲ್ಲಿ ಪಿರಮಿಡ್ ಮಾಡುವುದು, ಕಪ್ಪೆ ಜಿಗಿತ, ಮೆಮೊರಿ ಟೆಸ್ಟ್, ಪ್ರಬಂಧ ರಚನೆ, 100 ಮತ್ತು 200 ಮೀ ಓಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹಸನ್ ಸಾಬ್ ಕೆ. ಹೆಚ್ ಮೊ, ನಂ 9901711486 ಹಾಗೂ ಸಿ.ಆರ್.ಪಿ ಅಶೋಕ್ ಪಾಟೀಲ್ 9480369937 ಸಂಪರ್ಕಿಸುವAತೆ ಶಿವಮೊಗ್ಗ ಮಹಾನಗರಪಾಲಿಕೆ ಮಕ್ಕಳ ದಸರಾ ಸಮಿತಿ ಕಾರ್ಯದರ್ಶಿ ಪ್ರಕಟಣೆ ತಿಳಿಸಿದ್ದಾರೆ.
——————-
ವಿದ್ಯಾರ್ಥಿಗಳಿಂದ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ
ಶಿವಮೊಗ್ಗ, ಸೆಪ್ಟೆಂಬರ್ 25 : ಶಿವಮೊಗ್ಗ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು 2024-25 ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸ್ಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಇಲಾಖೆಯ ವೆಬ್‌ಸೈಟ್ www.tw.kar.nic.in ರಲ್ಲಿ ಅರ್ಜಿ ಸಲ್ಲಿಸಿ, ಹಾರ್ಡ್ ಕಾಪಿಯನ್ನು ದಾಖಲಾತಿಗಳೊಂದಿಗೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸಲ್ಲಿಸುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಜಿ. ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-279222 / 9482762350 ಗಳನ್ನು ಸಂಪರ್ಕಿಸುವುದು.