ಸಾಗರ(ಶಿವಮೊಗ್ಗ),ಸೆ,೧೩:ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಣಕಾಸಿನ ಕೊರತೆಯಿಲ್ಲ.ಜೋಗ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ೯೦ ಕೋಟಿ ರೂಗಳ ಬಿಡುಗಡೆ ಮಾಡಿಸಿದ್ದೇನೆ ಎಂದು ಶಾಸಕ ಗೋಪಾಲಕೃಷ್ಣಬೇಳೂರು ಹೇಳಿದರು.


ಅವರು ೯೦ ಲಕ್ಷ ರೂಗಳ ಅನುದಾನದಲ್ಲಿ ಜೋಗ ಯೂತ್ ಹಾಸ್ಟೆಲ್ ಅಬಿವೃದ್ಧಿಗೆ ಶಂಕುಸ್ಥಾಪನೆ ನರವೇರಿಸಿ ಮಾತನಾಡಿ ಪ್ರವಾಸಿತಾಣ ಜೋಗ ವೀಕ್ಷಣೆಗೆ ಬಸ್ಸುಗಳಲ್ಲಿ ಆಗಮಿಸುವ ಜನಸಾಮಾನ್ಯರುಗಳಿಗೆ ಕಡಿಮೆ ವೆಚ್ಚದಲ್ಲಿ ಸುಸಜ್ಜಿತ ವಸತಿ ವ್ಯವಸ್ಥೆ ಕಲ್ಪಿಸಲು ಯೂತ್ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ ಎಂದರು.


ಇನ್ನೂ ಹೆಚ್ಚಿನ ಅಬಿವೃದ್ಧಿಗೆ ಮತ್ತೆ ೯೦ ಲಕ್ಷ ರೂಗಳ ಹಣ ಬಿಡುಗಡೆಗೊಳಿಸುವ ಭರವಸೆ ನೀಡಿದ ಅವರು ಜೋಗಾ ಅಬಿವೃದ್ಧಿಗೂ ಇನ್ನೂ ೧೦೦ ಕೋಟಿ ರೂಗಳ ಬಿಡುಗಡೆಗೊಳಿಸುತ್ತೇನೆ.ವಿಶ್ವವಿಖ್ಯಾತ ಜೋಗ ಸಕಲ ಮೂಲಭೂತ ಸೌಕರ್ಯಗಳಿಂದ ಕೂಡಿರುವ ಭೂಲೋಕದ ಸ್ವರ್ಗದಂತಿರಬೇಕು ಎಂಬ ಯೋಜನೆ ರೂಪಿಸಲಾಗುವುದು ಎಂದರು.


ಕಾರ್ಗಲ್ ಪೊಲೀಸ್ ಠಾಣೆ ಕಾಮಗಾರಿಗೆ ೧ಕೋಟಿ ೩೩ ಲಕ್ಷ ರೂಗಳ ಅನುದಾನ ನೀಡಿದ್ದು,ಕಾಮಗಾರಿ ಪ್ರಗತಿಯಲ್ಲಿದೆ.ಪೊಲೀಸ್ ವಸತಿ ಸಮುಚ್ಚಾಯ ನಿರ್ಮಾಣಕ್ಕೆ ೩ಕೋಟಿ ೮೩ ಲಕ್ಷ ರೂಗಳ ಅನುದಾನ ನೀಡಿದ್ದು,ಪೊಲೀಸ್ ವಸತಿ ಸಮುಚ್ಚಾಯ ಮುಕ್ಯಾಯದ ಹಂತದಲ್ಲಿದ್ದು,೧೨ ವಸತಿ ಗೃಹಗಳನ್ನೊಳಗೊಂಡಿದೆ ಎಂದು ಮಾಹಿತಿ ನೀಡಿದರು.


ಕರ್ನಾಟಕ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ೫ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿದ್ದರೂ ರಾಜ್ಯದ ಅಬಿವೃದ್ಧಿಗೆ ಯಾವುದೇ ಹಣಕಾಸಿನ ಕೊರತೆಯಿಲ್ಲ.ಮುಂದಿನ ೩ ವರ್ಷಗಳಲ್ಲಿ ಅಬಿವೃದ್ಧಿಯ ಮಹಾಪೂರವೇ ನಡೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪಟ್ಟಣಪಂಚಾಯಿತಿ ಅಧ್ಯಕ್ಷ ರಾಜು,ಉಪಾಧ್ಯಕ್ಷ ಜಯಲಕ್ಷ್ಮಿ ಲಕ್ಷ್ಮಣ,ಪಟ್ಟಣಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್,ಶಾಸಕರ ವಿಶೇಷ ಅಧಿಕಾರಿ ಟಿ.ಪಿ.ರಮೇಶ್ ಸ್ಥಳಿಯ ಮುಖಂಡರುಗಳು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!