ಶಿವಮೊಗ್ಗ:
ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಹಳ್ಳಿ ಹಳ್ಳಿಗಳಲ್ಲೂ ಮಾಮೂಲಿ ಹಂಚಿಕೆ ನಡೆಯುತ್ತಿದೆ. ಅಕ್ಕಿ, ಉಪ್ಪು, ಎಣ್ಣೆ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಒಂದೆಡೆ ನೀಡುತ್ತಿದ್ದರೆ ಮತ್ತೊಂದೆಡೆ ಕುಡಿತಕ್ಕೂ ದಾರಿ ಮಾಡಿಕೊಡುತ್ತಿದೆ.
ಇಲ್ಲೊಂದು ದುರಂತವೆಂದರೆ ಭದ್ರಾವತಿ ತಾಲ್ಲೂಕು ಹುಣಸೆಕಟ್ಟೆಯ ಹಾಲು ಉತ್ಪಾದಕರ ಸಂಘದ ಚುನಾವಣೆಯಲ್ಲಿ ತಮ್ಮವರನ್ನು ಗೆಲ್ಲಿಸಲು ಇಲ್ಲಿನ ಪ್ರಗತಿ ದತ್ತ ಶಾಲೆ ನಿರ್ವಾಹಣಾ ಸಮಿತಿಯ ಕಾರ್ಯದರ್ಶಿಯ ಸೀಲ್‌ನ್ನು ಬಳಸಿಕೊಂಡು ಚೀಟಿ ನೀಡುತ್ತಿರುವ ಸುದ್ದಿ ದೊಡ್ಡದಾಗಿ ಸದ್ದಾಗಿದೆ.
ಶಾಲೆಯ ಹೆಸರನ್ನು ಬಳಸಿಕೊಂಡು ಚೀಟಿ ನೀಡುವ ಮೂಲಕ ಅದನ್ನು ಕೊಟ್ಟರೆ ಸಿಗುವ ಸಾಮಗ್ರಿಗಳ ಚಿತ್ರಣವೂ ಕೂಡ ನಿಮ್ಮ ಮುಂದಿದೆ. ಇದು ಚುನಾವಣಾ ನಿಯಮಕ್ಕೆ ಹೊಂದಿಕೊಳ್ಳುತ್ತದಾ..? ಶಾಲೆಯ ಹೆಸರು ಬಳಕೆ ಎಷ್ಟರ ಮಟ್ಟಿಗೆ ಸರಿ. ಹಾಲು ಉತ್ಪಾದಕರ ಸಂಘದ ಚುನಾವಣೆ ಎಲ್ಲಿಗೆ ಬಂತು ಸಂಗಯ್ಯ ಎಂಬ ಪ್ರಶ್ನೆಯನ್ನು ಜನ ಕೇಳುತ್ತಿದ್ದಾರೆ.