ಶಿವಮೊಗ್ಗ,ಜ.25:
ಇಲ್ಲಿನ ಸಹ್ಯಾದ್ರಿ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ ನ ಚುನಾವಣೆ ಭಾನುವಾರ ನಡೆದಿದ್ದು, ಹಾಲಿ ಅಧ್ಯಕ್ಷೆ ವೀರಮ್ಮ ತಂಡ ಬರ್ಜರಿ ಗೆಲುವು ಸಾಧಿಸಿದೆ.
ಹನ್ನೆರಡು ನಿರ್ಧೇಶಕರ ಸ್ಥಾನದ ಚುನಾವಣೆಯಲ್ಲಿ ವೀರಮ್ಮ ಅವರ ತಂಡದಲ್ಲಿ ಸ್ಪರ್ಧಿಸಿದ್ದ ಹತ್ತು ಜನರಲ್ಲಿ ಹತ್ತೂ ಜನ ಗೆಲುವು ಸಾಧಿಸಿದ್ದಾರೆ.
ವಿರೋಧವಾಗಿ ಸ್ಪರ್ಧಿಸಿದ್ದ ಯಶೋಧ ಮಂಜುನಾಥ್ ತಂಡದಿಂದ ಸ್ಪರ್ಧಿಸಿದ್ದ ಹನ್ನೆರಡು ಜನರಲ್ಲಿ ಇಬ್ಬರು ಮಾತ್ರ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಒಟ್ಟು ಮತಗಳು 143 ಇದ್ದು ಇದರಲ್ಲಿ 123 ಮತಗಳು ಚಲಾವಣೆಗೊಂಡಿದ್ದವು. 6 ಮತಗಳು ಅಸಿಂಧುವಾಗಿತ್ತು.
12 ಜನ ನಿರ್ದೇಶಕರ ಆಯ್ಕೆಗೆ 22 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸಾಮಾನ್ಯ ಕ್ಷೇತ್ರಕ್ಕೆ 11 ಜನ ನಿರ್ದೇಶಕರು ಆಯ್ಕೆ ಆದರೆ ಒಬ್ಬರು ನಿರ್ದೇಶಕರು ಹಿಂದುಳಿದ ವರ್ಗಗಳಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
ಗೆದ್ದವರು
ಹಾಲಿ ಅಧ್ಯಕ್ಷೆ ವೀರಮ್ಮ , ಪ್ರೇಮ ಜಿ. ಹೆಚ್., ಪುಷ್ಪಲತಾ ಪಿ ಎಸ್. , ಉಮಾ ರವಿಶಂಕರ್, ಕವಿತಾ, ತಬಸುಮ್ ಅರಾ, ಸುನಿತಾ ಜಿ.ರಾವ್, ಸುಧಾಮಣಿ, ಉಷಾ ಪ್ರಕಾಶ್, ಸುಮನಾ ರಾಣಿ , ಯಶೋಧ ಮಂಜುನಾಥ್, ಉಮಾ ಸುರೇಶ್, ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.