ಶಿವಮೊಗ್ಗ,ಆ.೧೨: ಮೈಕ್ರೋಪೈನಾನ್ಸ್‌ಗಳಿಂದ ಜಿಲ್ಲೆಯ ಬಡ ಮಹಿಳೆಯರಿಗೆ ತೊಂದರೆಯಾಗುತ್ತಿದ್ದು, ಮೈಕ್ರೋಫೈನಾನ್ಸ್‌ರವರ ಸಭೆ ಕರೆದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ

ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಏಕಾಂಗಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.


ಜಿಲ್ಲೆಯಲ್ಲಿ ೪೦ಕ್ಕೂ ಹೆಚ್ಚು ಮೈಕ್ರೋಫೈನಾನ್ಸ್‌ಗಳಿದ್ದು, ಎಲ್ಲಾ ಫೈನಾನ್ಸ್‌ರವರು ಆರ್‌ಬಿಐನ ನಿಯಮ ಪಾಲಿಸದೇ ತಮಗಿಷ್ಟ ಬಂದಂತೆ ಕಾರ್ಯನಿರ್ವಹಿಸುತ್ತಿದ್ದು, ಬಡ ಮಹಿಳೆಯರಿಗೆ ಸಾಲ ನೀಡಿದ ನಂತರ ಸಾಲ ವಸೂಲಿ ನೆಪದಲ್ಲಿ ಮಹಿಳೆಯರ

ಮನೆಗಳಿಗೆ ಹಗಲು ರಾತ್ರಿ ಎನ್ನದೇ ಹಣ ಕಟ್ಟುವ ತನಕ ಸಾಲಗಾರ ಮಹಿಳೆಯ ಮನೆಯಲ್ಲಿಯೇ ಕುಳಿತುಕೊಂಡು ಸಾಲ ವಸೂಲಿ ಮಾಡುತ್ತಿರುವುದು ಕಂಡು ಬಂದಿದ್ದು, ಇದು ಕಾನೂನು ಬಾಹಿರವಾಗಿರುತ್ತದೆ.


ಆರ್‌ಬಿಐ ನಿಯಮಾನುಸಾದ ಬೆಳಿಗ್ಗೆ ೮ ರಿಂದ ಸಂಜೆ ೬ರವರೆಗೆ ಸಾಲ ವಸೂಲಿ ಮಾಡಬೇಕೆಂಬ ನಿಯಮವಿದೆ. ಆದರೆ, ನಿಯಮ ಮೀರಿ ಮಹಿಳೆಯರಿಗೆ ಬಾಯಿಗೆ ಬಂದಂತೆ ಮಾತನಾಡಿ, ಬಡ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದು,

ಕಿರುಕುಳಕ್ಕೆ ನೊಂದ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಆದ್ದರಿಂದ ಕೂಡಲೇ ಲೀಡ್ ಬ್ಯಾಂಕ್ ಮುಖ್ಯಸ್ಥರು ಹಾಗೂ ಜಿಲ್ಲಾಧಿಕಾರಿಗಳು ಮೈಕ್ರೋಪೈನಾನ್ಸ್‌ರವರ ಸಭೆ ನಡೆಸಿ ನೊಂದ ಮಹಿಳೆಯರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!