ಶಿವಮೊಗ್ಗ,ಜು.೨೨: ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಜುಲೈ ೨೦ ರಂದು ನಡೆದ ಭೋವಿ ಜನೋತ್ಸವ ಸಮಾವೇಶವೂ ಪಕ್ಷಾತೀತವಾಗಿ ಯಶಸ್ವಿಯಾಗಿದ್ದು, ರಾಜ್ಯ ಭೋವಿ ಅಭಿವೃದ್ದಿ ನಿಗಮಕ್ಕೆ ೫೦೦ ಕೋಟಿ ರೂ. ಅನುದಾನ ನೀಡುವಂತೆ ಸಮಾವೇಶದೊಂದಿಗೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ತಿಳಿಸಿದ್ದಾರೆ.


ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮಸಮಾಜದ ಗುರುಗಳಾದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ ಹುಟ್ಟು ಹಬ್ಬ, ದೀಕ್ಷಾ ರಜತ ಮಹೋತ್ಸವ ಹಾಗೂ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸಮಾಜದ ಜನಪ್ರತಿನಿಧಿಗಳಿಗೆ ಸನ್ಮಾನ ಸೇರಿ ಹಲವು ಕಾರ್ಯಕ್ರಮಗಳ ಮಹಾಮಿಲನವಾಗಿ ಭೋವಿ ಜನೋತ್ಸವ ನಡೆಯಿತು.

ಸಮಾವೇಶಕ್ಕೆ ಎಲ್ಲಾ ಪಕ್ಷಗಳ ಮುಖಂಡರು, ಗಣ್ಯರು ಭಾಗವಹಿಸುವ ಮೂಲಕ ಸಮಾವೇಶ ಪಕ್ಷಾತೀತವಾಗಿ ಯಶಸ್ವಿ ಯಾಗಿದ್ದು ಸಮಾಜದ ಜನರಿಗೆ ತುಂಬಾ ಸಂತಸ ತಂದಿದೆ ಎಂದು ಹೇಳಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಸಾವಿರಾರು ಬಸ್ಸುಗಳ ಮೂಲಕ ಜನರು ಸ್ವಯಂ ಪ್ರೇರಿತವಾಗಿ ಬಂದಿದ್ದರು. ಸಮಾವೇಶಕ್ಕೆ ಸುಮಾರು ೧ ಲಕ್ಷ ಜನ ಸೇರಬಹುದೆಂದು ನಾವು ನಿರೀಕ್ಷೆ ಮಾಡಿದ್ದೇವು,ಆದರೆ ಸಮಾವೇಶಕ್ಕೆ ಬಂದ ಜನರ ಸಂಖ್ಯೆ ಒಂದೂವರೆ ಲಕ್ಷದಷ್ಟಿತ್ತು. ಇದು ನಮ್ಮ ಭೋವಿ ಸಮಾಜದ ಸಂಘಟನೆಗೆ ಹಿಡಿದ ಕನ್ನಡಿ ಆಗಿದೆ ಎಂದು ವಿವರಿಸಿದರು.


ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ, ಶೋಭಾ ಕರಂದ್ಲಾಜೆ ಸಮಾವೇಶದಲ್ಲಿ ಪಾಲ್ಗೊಂಡರು.ಅವರೊಂದಿಗೆ ರಾಜ್ಯದ ವಿವಿಧ ಮಠಗಳ ಅನೇಕಮಂದಿ ಮಠಾಧೀಶರು ಕೂಡ ಸಮಾವೇಶಕ್ಕೆ ಬಂದು ಶ್ರೀಗಳಿಗೆ ಶುಭಾ ಹಾರೈಸಿದರು.ಇದು ನಮ್ಮ ಸಮಾಜದ ಸಂಘಟನೆಯ ಶಕ್ತಿಗೆ ಕನ್ನಡಿ ಹಿಡಿದಂತಾಗಿದೆ. ವಿಶೇಷವಾಗಿ ಸಮಾವೇಶದಲ್ಲಿ ನಮ್ಮಸಮಾಜದ ೫೦೦ ನಮ್ಮ ಸಮಾಜದ ಮುಖಂಡರೂ ಹಾಗೂ ಸಚಿವರಾದ ಶಿವರಾಜ್ ತಂಗಡಗಿ,ಮುಖಂಡರಾದ ಅರವಿಂದ ಲಿಂಬಾವಳಿ ಸೇರಿದಂತೆ ಪಕ್ಷಾತೀತವಾಗಿ ,ಪಾಲ್ಗೊಂಡು ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದು, ಸಮಾವೇಶದ ಯಶಸ್ಸು ಗೊಳಿಸಲು ಕಾರಣವಾಯಿತು


ಈ ಕಾರ್ಯಕ್ರಮದ ಮೂಲಕ ನಾವು ಸರ್ಕಾರಗಳ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದ್ದೇವೆ. ಪ್ರಮುಖವಾಗಿ ಕಲ್ಲುಕ್ವಾರಿಗೆ ಅವಕಾಶ ನೀಡುವುದನ್ನು ಹೇಳಿದ್ದೇವೆ .ಸಮಾಜದ ಆಬಿವೃದ್ದಿಗೆ ಪೂರಕವಾಗಿ ಇನ್ನು ಹಕವು ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದಾರಮಯ್ಯ ಅವರು ಮುಂದಿಟ್ಟಿದ್ದೇವೆ. ರಾಜ್ಯ ಬೋವಿ ಆಭಿವೃದ್ದಿ ನಿಗಮಕ್ಕೆ ಹೆಚ್ಚಿನ ಅನುದಾನ ಕೊಡಬೇಕೆಂದು ಕೇಳಿದ್ದೇವೆ . ಒಟ್ಟಿನಲ್ಲಿ ಸಮಾಜವೇಶ ದೊಡ್ಡ ಮಟ್ಟಕ್ಕೆ ಯಶಸ್ವಿ ಆಗಿದ್ದು, ಖುಷಿ ತಂದಿಧ. ಸಮಾಜದ ಸಂಘಟನೆಗೆ ಹೊಸ ಹುರುಪು ಸಿಕ್ಕಂತಾಗಿದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಧೀರರಾಜ್ ಹೊನ್ನಾವಿಲೆ, ಬಸವರಾಜ್ ಬೂದಿಗೆರೆ, ವೀರಭದ್ರಪ್ಪ ಪೂಜಾರ್, ವೀರೇಶ್ ಕ್ಯಾತಿನಕೊಪ್ಪ, ಹರ್ಷ ಬೋವಿ, ಜಗದೀಶ್ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!