ಬೆಂಗಳೂರು,ಜ.20:
ನಾವು ಹೋಗುವ ಜಾಗ ಅಥವಾ ಬಸ್ ಸ್ಟಾಪ್ ಯಾವುದೆಂದು ತಿಳಿಸಿದ ಬಳಿಕ, ಅದಕ್ಕೆ ಸೂಕ್ತವಾದ ಟಿಕೆಟ್ ನೀಡ್ತಾರೆ ನಾವು ಹಣವನ್ನ ಪವತಿಸ್ತೀವಿ.. ಇದು ಲೋಕಾರೂಡಿ, ಇದರಲ್ಲಿ ಹೊಸತೇನು ಇಲ್ಲ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಾಯಾಣಿಕರ ಅನುಕೂಲಕ್ಕಾಗಿ ಬಹಳ ಹಿಂದೆಯೇ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಿಕೊಟ್ಟಿತ್ತು, ಇದೀಗೆ ಒಂದು ಹೆಜ್ಜೆ ಮುಂದೆ ಹೋಗಿ “BHIM U.P.I”( ಫೋನ್ ಪೆ, ಗೂಗಲ್ ಪೆ, paytm) ವ್ಯವಸ್ಥೆಯನ್ನು ಸಹ ಅಳವಡಿಸಿದೆ, ಕಂಡಕ್ಟರ್ಗಳ ಬಳಿ U. P. I ನ Q.R ಕೊಡ್ ಇರುತ್ತದೆ ನಮ್ಮ ಫೋನ್ ಬಳಸಿ ಅದನ್ನು ಸ್ಕ್ಯಾನ್ನ್ ಮಾಡಿ ನಿಗದಿತ ದರವನ್ನ ನಮ್ಮ ಖಾತೆಯಿಂದ ವರ್ಗಾಯಿಸಬಹುದು. ಕ್ಯಾಶ್ ಲೆಸ್ ಟ್ರಾನ್ಸಾಕ್ಷನ್ ವ್ಯವಸ್ಥೆ ಜಾರಿಗೆ ಬರುತ್ತಿದೆ.
ಲಾಕ್ಡೌನ್ ತೆರವುಗೊಳಿಸಿದ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಸ್ಸಗಳಲ್ಲಿ ಪ್ರಾಯಣಿಸಲು ಪ್ರಾರಬಿಸಿದ್ದಾರೆ, ಜನರಿಗೆ ಇದು ಸೌಕರ್ಯವೂ ಹೌದು ಸುರಕ್ಷತೆಯೂ ನಿಜ.
ಜೇಬಲ್ಲಿ ಕರೆನ್ಸಿ ನೋಟುಗಳು ಇಲ್ಲದಿದ್ದರೂ ಪರವಾಗಿಲ್ಲ U.P.I ನ ಉಪಯೋಗಿಸಿ ಪ್ರಯಾಣಿಸಬಹುದು. ಈ ಸೌಲಭ್ಯವನ್ನು ಜಾರಿ ಗೊಳಿಸಿದ ಎಂ. ಚಂದ್ರಪ್ಪ (ಅಧ್ಯಕ್ಷರು) ಎಸ್.ಎನ್. ಈಶ್ವರಪ್ಪ (ವ್ಯವಸ್ಥಾಪಕ ನಿರ್ದೇಶಕರು) ಅವರಿಗೆ ಪ್ರಯಾಣಿಕರಿಂದ ಮೆಚ್ಚುಗೆ, ಪ್ರಶಂಸೆ ದೊರಕಿದ್ದು ಇದರ ಸದ್ಬಳಕೆಯಾಗಿದೆ.
(ಸಂಗ್ರಹ ಸುದ್ದಿ)

By admin

ನಿಮ್ಮದೊಂದು ಉತ್ತರ

error: Content is protected !!