ಶಿವಮೊಗ್ಗ: ಆಧುನಿಕತೆಯ ಭರದಲ್ಲಿ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿರುವುದು ವಿಷಾದನೀಯ ಸಂಗತಿಯಾಗಿದ್ದು, ತನ್ನದೇ ಪರಂಪರೆಯುಳ್ಳ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಜೋಪಾನ ಮಾಡಬೇಕಾದ ಜವಬ್ದಾರಿ ನಮ್ಮೇಲ್ಲರ ಮೇಲಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷ ಟಿ.ಆರ್.ಅಶ್ವಥ ನಾರಾಯಣಶೆಟ್ಟಿ ಕರೆ ನೀಡಿ
ನಗರದ ಜೆ.ಎನ್.ಎನ್.ಸಿ ಇಂಜಿ ನಿಯರಿಂಗ್ ಕಾಲೇಜಿನ ಎಂ.ಸಿ.ಎ ವಿಭಾಗದ ವತಿಯಿಂದ ಏರ್ಪಡಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಓರಿಯನ್‌ಟೇಷನ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಇಂದು ಯುವ ಸಮೂಹ ಆಧುನಿಕತೆ ಹಾಗೂ ಸಾಮಾಜಿಕ ಜಾಲತಾಣಗಳ ಸುಳಿಗೆ ಸಿಲುಕಿ ತಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದು ಮೊಬೈಲ್‌ಎ ಂಬುದು ಒಂದು ಸಂಪರ್ಕ ಮಾಧ್ಯಮವೇ ವಿನಃ ಅದೇ ಸಂಪೂರ್ಣ ಬದುಕಲ್ಲ. ಜ್ಞಾನಾ ರ್ಜನೆಗಾಗಿ ದಿನ ಪತ್ರಿಕೆಗಳ ಓದು ಅವ ಶ್ಯಕವಾಗಿದ್ದು ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ತುಡಿತ ಸದಾ ವಿದ್ಯಾರ್ಥಿಗಳಲ್ಲಿರಬೇಕ ಎಂದರು.
ಕಾರ್ಯಕ್ರಮದಲ್ಲಿ ವಿಭಾಗದ ಹಳೆಯ ವಿದ್ಯಾರ್ಥಿಗಳಾದ ಹರ್ಷೀತ ಹೆಚ್.ಪಿ, ಅಭಿಲಾಷ.ಕೆ.ಪಿ, ಲೊಕೇಶ್, ಸ್ವರೂಪ, ಪ್ರಿಯಾಂಕ ಹೆಚ್.ಪಿ, ಸಿ.ಎಂನೃಪತುಂಗ ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಖಜಾಂಚಿ ಸಿ.ಆರ್.ನಾಗರಾಜ ಕಾಲೇ ಜಿನ ಪ್ರಾಂಶುಪಾಲ ಡಾ.ಶಶೀಧರ ಕುದರಿ, ಡಾ.ಪಿ.ಮಂಜುನಾಥ, ಎಂ.ಸಿ. ಎ ವಿಭಾಗದ ನಿರ್ದೇಶಕರಾದ ಡಾ. ಪ್ರಭುದೇವ, ಸಹ ಪ್ರಾದ್ಯಾಪಕರಾದ ಡಾ.ರಾಘವೇಂದ್ರ, ಅರುಣ್‌ಕುಮಾರ. ಕೆ.ಎಲ್, ಸುನಿತ ಮತ್ತಿತರರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!