ಶಿವಮೊಗ್ಗ,ಜು.೧:
ಸಂಸ್ಕೃತ ಭಾಷೆಯನ್ನು ಸರಳವಾಗಿ ಕಲಿಸುವ ನಿಟ್ಟಿನಲ್ಲಿ ಪಠಾಮಿ ಸಂಸ್ಕೃತಮ್ ಎಂಬ ಹೆಸರಿನಲ್ಲಿ ಆನ್‌ಲೈನ್ ತರಗತಿಗಳನ್ನು ಆರಂಭಿಸಲಾಗಿದೆ ಎಂದು ಸಂಸ್ಕೃತ ಭಾರತಿ ಹಾಗೂ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಅಧ್ಯಕ್ಷ ಟಿ.ವಿ.ನರಸಿಂಹಮೂರ್ತಿ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಸ್ಕೃತ ಭಾಷೆ ವಿಶ್ವಭಾಷೆಯಾಗಿದೆ. ಯಾವುದೇ ಹೊಸ ಭಾಷೆ ಕಲಿಯಲು ಮಾತೃಭಾಷೆಯ ಮೂಲಕವೇ ಕಲಿಯಬೇಕಾಗಿದೆ. ಈಗ ಹೊಸ ಹೊಸ

ತಂತ್ರಜ್ಞಾನದ ಮೂಲಕ, ಸೂಕ್ಷ್ಮ ತರಂಗಗಳ ಮೂಲಕ ಭಾಷೆಯನ್ನು ಕಲಿಯಬಹುದಾಗಿದೆ. ಅದೇ ರೀತಿ ಸಂಸ್ಕೃತ ಭಾಷೆಯನ್ನು ಕೂಡ ಕೇವಲ ನೂರು ದಿನಗಳಲ್ಲಿ ಮಾತನಾಡುವುದನ್ನು

ಮತ್ತು ಓದುವುದನ್ನು ಕಲಿಸುವ ಒಂದು ವಿನೂತನ ಯೋಜನೆ ಪಠಾಮಿ ಸಂಸ್ಕೃತಮ್ ಆಗಿದೆ ಎಂದರು.
ಈ ಸಂಸ್ಕೃತ ಕಲಿಕಾ ಶಿಬಿರವು ಈಗಾಗಲೇ ಆರಂಭವಾಗಿದೆ. ಸುಮಾರು ೫೦೦ ಕ್ಕೂ ಹೆಚ್ಚು ಆಸಕ್ತರು ಕಲಿತಿದ್ದಾರೆ. ಕಲಿಕಾ ಶಿಬಿರವು ಪ್ರತಿ ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳಿನಲ್ಲಿ

ಆರಂಭಿಸ ಲಾಗುತ್ತದೆ. ಆನ್‌ಲೈನ್ ಮೂಲಕ ವಾರದಲ್ಲೇ ೨ ದಿನ ಶಿಕ್ಷಣ ನೀಡಲಾಗುವುದು. ಇದಕ್ಕಾಗಿ ೨೦೦ ರೂ. ಶುಲ್ಕ ವಿಧಿಸಲಾಗಿದೆ. ಆಸಕ್ತರು ಮೊ.ನಂ. ೯೯೦೨೯೪೨೦೬೦, ೭೩೫೩೭೭೮೨೩೯ಗೆ ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅ.ನಾ.ವಿಜಯೇಂದ್ರರಾವ್, ಸಚ್ಚಿದಾನಂದ, ಗುರುರಾಜ್ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!