ಕ್ರೀಡೆಯಲ್ಲಿ ಜಯಸಿದ್ದರೂ ಪ್ರಶಸ್ತಿ ನೀಡದೇ ಕ್ರೀಡಾಪಟುಗಳಿಗೆ ಅಗೌರವ ಮತ್ತು ಅವಮಾನ, ನರೇನ್‌ ಜಿಮ್‌ಗೆ ಹೊಸದಾಗಿ ಸೇರ್ಪಡೆಯಾದ ಯುವಕರಿಂದ ಹಣ ಪಡೆದು
ಸರಿಯಾದ ತರಬೇತಿ ನೀಡದ ದೂರು.


ಶಿವಮೊಗ್ಗ, ಜೂ.29:

ಕ್ರೀಡೆಯಲ್ಲಿ ಜಯಸಿದ್ದರೂ ಪ್ರಶಸ್ತಿ ನೀಡದೇ ಕ್ರೀಡಾಪಟುಗಳಿಗೆ
ಅಗೌರವ ಮತ್ತು ಅವಮಾನ, ಶಿವಮೊಗ್ಗ ನರೇನ್‌ ಜಿಮ್‌ಗೆ ಹೊಸದಾಗಿ ಸೇರ್ಪಡೆಯಾದ ಯುವಕರಿಂದ ಹಣ ಪಡೆದು
ಸರಿಯಾದ ತರಬೇತಿ ನೀಡದ ಬಗ್ಗೆ ನರೇನ್ ಪಿಟ್ನೆಸ್ ಸದಸ್ಯ ರಾಕೇಶ್ ಗಂಭೀರವಾಗಿ ಆರೋಪಿಸಿ ಸುದೀರ್ಘ ಪತ್ರ ಬರೆದಿದ್ದಾರೆ. ಅದರ ಯಥಾವತ್ತಾದ ಪ್ರತಿಯನ್ನು ಹಾಕಲಾಗಿದೆ. ಉತ್ತರ ನೀಡಬೇಕಾದವರು ಉತ್ತರಿಸಲಿ., ತಪ್ಪಾಗಿದ್ದರೆ ಸಾರೀ ಕೇಳಿ, ನ್ಯಾಯ ಕೊಡಲಿ ಎಂಬುದು ಸಾರ್ವಜನಿಕ ಆರೋಪ.


ದಿನಾಂಕ : 15-04-2024 ರಿಂದ 03-06-2024ರ ವರೆಗಿನ 50 ದಿನಗಳ Body Transperation Challenge ನಲ್ಲಿ ಭಾಗವಹಿಸಲು ಸ್ಫೂರ್ತಿ ತುಂಬಿ, ಕೆಲವು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದ್ದು, ಅದೇ ರೀತಿ 50 ದಿನ ಶ್ರಮಪಟ್ಟು, ಪ್ರತಿದಿನ ಎರಡು ಗಂಟೆಗಳ ಸಮಯ ಬೆಳಿಗ್ಗೆ ಮತ್ತು ಸಂಜೆ ಒಂದು ಗಂಟೆ ಸಮಯ ಕೊಟ್ಟು ವ್ಯಾಯಾಮವನ್ನು ಮಾಡಿ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸ್ಫರ್ಧಿಗಳಾಗಿ ಮಾರ್ಪಟ್ಟು, ನಿಮ್ಮದೇ ಬಿ.ಸಿ.ಎ. ಯಂತ್ರದಲ್ಲಿ ಉತ್ತಮ ಫಲಿತಾಂಶ ಬಂದಿದ್ದರು ಅದನ್ನು ಸರಿಯಾಗಿ ಮಾಪನ (Valuation) ಮಾಡದೇ ಕ್ರೀಡಾಪಟುಗಳಿಗೆ ಕಾರ್ಯಕ್ರಮದಲ್ಲಿ ನಿಜವಾದ ವಿಜೇತರಿಗೆ ಪ್ರಶಸ್ತಿ ನೀಡದೇ ಅಗೌರವ ತೋರಿಸುತ್ತೀರಾ?, ಕ್ರೀಡೆಯಲ್ಲಿ ಭಾಗವಹಿಸಿದ ಮೇಲೆ ಸ್ಟೇಜ್‌ ಮೇಲೆ ಪ್ರಶಸ್ತಿ ತೆಗೆದುಕೊಳ್ಳಬೇಕು ಎಂದು 50 ದಿನ ಪರಿಶ್ರಮದ ಮತ್ತು ಆಹಾರ ಪದಾರ್ಥಗಳ ತ್ಯಾಗದ ಫಲ ಪ್ರಶಸ್ತಿ ಅದನ್ನೇ ನೀಡದ ನಿಮ್ಮ ತಪ್ಪು ನಿರ್ಧಾರಗಳು,ಮೋಸದ ವ್ಯವಸ್ಥೆಯ ವಿರುದ್ಧ ಮಾತನಾಡಿದರೆ ತಪ್ಪೇ. ಮತ್ತು ನಾಲ್ಕು ಜನ ತರಬೇತಿದಾರರಾದ ರಂಜಿತ್‌, ನಾಗೇಂದ್ರ, ಗಂಗಾಧರ ಮತ್ತು ಮತ್ತೊಬ್ಬ ಹಾಗೂ ಒಬ್ಬರು ಮ್ಯಾನೇಜರ್‌ ಮನು ಹಾಗೂ ಜಿಮ್ ಮಾಲೀಕರು ಸಹ ಅನುಭವವಿದ್ದು, ಮೊದಲ ಲಿಸ್ಟ್‌ನಲ್ಲಿ ಹನುಮಂತ ಎಂಬ ಹೆಸರನ್ನು ಆಯ್ಕೆಮಾಡಿದ್ದು, ಆ ಹನುಮಂತ ಕ್ರೀಡಾಪಟುವು ಮೋಸದ ಬಿ.ಸಿ.ಎ. ರಿಸಲ್ಟ್ 20% Fat Loss & 7Kg. Mussle Gain & 3Kg. Weight Loss ಎಂದು ನಿಮ್ಮ ಮೊದಲನೆಯ ಪಟ್ಟಿಯಲ್ಲಿ ಘೋಷಣೆ ಮಾಡುತ್ತೀರಾ, ಅದನ್ನು ಪ್ರಶ್ನೆ ಮಾಡಿದಾಗ ನಿಮ್ಮ ಜಿಮ್‌ ತರಬೇತಿದಾರರಾದ ರಂಜಿತ್‌ ಅವರು 15 ನಿಮಿಷಗಳ ಕಾಲ ರಿಸ್ಪಷನ್ ಛೇರಿನಲ್ಲಿ ಕೂತುಕೊಂಡು ಅವರು ಚೆನ್ನಾಗಿ ವ್ಯಾಯಾಮ ಮತ್ತು ತುಂಬ ಡಯಾಟ್‌ ಮಾಡಿದ್ದಾರೆ.

ಅವರದೇ ಆದ ಡ್ರೈಫುಡ್‌ ಅಂಗಡಿ ಇದೆ. ಒಳ್ಳೆಯ ಫಲಿತಾಂಶ ಬಂದಿದೆ ಎಂದು ಮಂಡು ವಾದ ಮಾಡಿ, ಅವರೇ ಸಮರ್ಥನೆ ಮಾಡಿಕೊಂಡರು, ಇವರೇ ಟ್ರೈನ್ ಮಾಡಿ ಫಲಿತಾಂಶ ಕೊಟ್ಟಹಾಗೆ ಉತ್ತರ ನೀಡಿದ್ದರು. ಬಿ.ಸಿ.ಎ. ಯಂತ್ರದಲ್ಲಿ ಎತ್ತರ & ತೂಕ ಬದಲಾವಣೆ ಮಾಡಿ ಫಲಿತಾಂಶದಲ್ಲಿ ಹನುಮಂತನ ಬಿ.ಸಿ.ಎ. ರಿಪೋರ್ಟ್ ಏರುಪೇರು ಮಾಡಿ ಮೋಸಮಾಡಲು ಪ್ರಯತ್ನಿಸಿದ ಆ ವ್ಯಕ್ತಿ ಯಾರು?

ಮಾಲೀಕರಾದ ರಾಹುಲ್‌ ರವರಿಗೆ ಇದರ ಮಾಹಿತಿ ನಾನೇ ತಿಳಿಸಿದ್ದು, ನಿಮ್ಮ 4 ಟ್ರೈನರ್‌ಗಳು ಯಾಕೆ ಇದರ ಬಗ್ಗೆ ಗಮನಕೊಡಲಿಲ್ಲ. ಇದರ ಹಿಂದಿನ ಉದ್ದೇಶ ಮುಂದಿನ ಭವಿಷ್ಯದಲ್ಲಿ ಅಪಾಯಕಾರಿ, ಬೆಳವಣಿಗೆ ವ್ಯಾಯಾಮ ದೇಗುಲದ ಕ್ರೀಡಾಪಟುಗಳಿಗೆ, ಸಣ್ಣ ಕ್ರೀಡೆ ಇರಬಹುದು ದೊಡ್ಡ ಕ್ರೀಡೆಯಿರಬಹುದು ಎಲ್ಲವನ್ನೂ ಸಮಾನವಾಗಿ ತೆಗೆದುಕೊಳ್ಳುವ ಮನೋಭಾವ ನಮ್ಮದು, 2ನೇ ಲೀಸ್ಟ್‌ ಮಾಡಿದ್ದೇವೆ ಎಂದು ರಾಹುಲ್‌ ರವರು ನನಗೆ ತಿಳಿಸಿದಾಗ ಅವರ ಹೆಸರನ್ನು ಕೇಳಿದಾಗ ಹೇಳಲು ನಿರಾಕರಿಸಿದರು, ಕಾರ್ಯಕ್ರಮದ ಬೆಳಿಗ್ಗೆ ಆ ದಿನವೇ ಅವರು ತಿಳಿಸದ್ದರೇ, 50 ದಿನ

ಶ್ರಮಪಟ್ಟ ಕ್ರೀಡಾಪಟುಗೆ ಕಾರ್ಯಕ್ರಮದಲ್ಲಿ ನಿಮ್ಮ ನರೇನ್‌ ಫಿಟ್‌ನೆಸ್‌ನಿಂದ ಪ್ರಶಸ್ತಿನೀಡದೇ ಅವಮಾನ ಮತ್ತು ಅಗೌರವ ಆಗುತ್ತಿರಲಿಲ್ಲ
(2) ಆ ನಂತರ ಎರಡನೇ ಆಯ್ಕೆಪಟ್ಟಿಯನ್ನು ಮಾಡುತ್ತೇನೆ ಎಂದು ಮಾಲೀಕರಾದ ರಾಹುಲ್‌ ರವರು ಹೇಳಿದ್ದರು ಆದರು ಎರಡನೇ ಆಯ್ಕೆಪಟ್ಟಿಯಲ್ಲಿ ರಾಕೇಶ್‌ (ರಾಕಿ), ಸುಮಿತ್‌ ಹೆಸರು ಇರುವುದಿಲ್ಲ ಕ್ರೀಡಾಪಟು ಸಾಗರ್‌ ಹೆಸರು ಆಯ್ಕೆ ಮಾಡಿರುತ್ತಾರೆ.


ರಾಕೇಶ್‌ ಕ್ರೀಡಾಪಟು ವ್ಯಾಯಾಮ ದೇಗುಲದಲ್ಲಿ ನಡೆಯುತ್ತಿರುವ ಪ್ರಶಸ್ತಿ ಕಾರ್ಯಕ್ರಮದಲ್ಲಿ 2ನೇ ಆಯ್ಕೆಪಟ್ಟಿಯ ಮೊದಲನೆಯ ಪ್ರಶಸ್ತಿಪಡೆದ ಕ್ರೀಡಾಪಟುವಿನ ಬಿ.ಸಿ.ಎ. ತೋರಿಸಿ ಎಂದರೆ ಕಾರ್ಯಕ್ರಮ ಮುಗಿದ ಮೇಲೆ ತೋರಿಸುತ್ತೇನೆ ಎನ್ನುತ್ತಾರೆ. ಆ ನಂತರ ಕಾರ್ಯಕ್ರಮ ಮಧ್ಯದಲ್ಲಿ ಆಯ್ಕೆಪಟ್ಟಿಯನ್ನು ರಾಕೇಶ್‌ ನೋಡಿರುತ್ತಾರೆ ಮತ್ತು ಮೋಸ ಆಗಿದೆ ಎಂಬ ಮಾಹಿತಿ ತಿಳಿದುಕೊಂಡ ರಾಕಶ್‌ ರವರು ಮಾಲೀಕರಾದ ರಾಹುಲ್‌ ರವರಿಗೆ ತಿಳಿಸುತ್ತಾರೆ. ಮಾಲೀಕರಾದ ರಾಹುಲ್‌ ರವರು ನಮ್ಮ ಕಡೆಯಿಂದ ತಪ್ಪಾಗಿದೆ ಎಂದು 2ನೇ ಬಾರಿ ಸಾರಿ ಎಂದು ಕೇಳುತ್ತಾರೆ. ಮೊದಲನೇ ಬಾರಿಯು ತಪ್ಪಾಗಿರಬಹುದು ಮಾಲೀಕರಿಂದ, ಎರಡನೇ ಪಟ್ಟಿಯಲ್ಲೂ ತಪ್ಪು ಹೇಗೆ ಆಗಲು ಸಾಧ್ಯ ಮತ್ತು ಬಿ.ಸಿ.ಎ. ಮಾಪನ ರಿಸಲ್ಟ್‌ ನೋಡುವುದು ಕ್ರೀಡಾಪಟುಗಳ ಕೆಲಸವಲ್ಲ, ಅದರ ಸಂಪೂರ್ಣ ಕೆಲಸ ವ್ಯವಸ್ಥಾಪಕರು ಮತ್ತು ನ್ಯೂಟ್ರಿಷನ್‌ ಮತ್ತು ಟ್ರೈನರ್‌ ಗಳದ್ದಾ ಗಿರುತ್ತದೆ. ಆದ್ದರಿಂದ ಈ ಕ್ರೀಡಾಪಟುಗಳಿಗೆ ಮತ್ತು ಕ್ರೀಡೆಗೆ ಆಗಿರುವ ಅವಮಾನಕ್ಕೆ ಆಯೋ ಜಕರೇ ನೇರ ಕಾರಣಕರ್ತರಾಗಿರುತ್ತಾರೆ. ಮೊದಲ ಕಾರಣ ಮಾಲೀಕರಾದ ರಾಹುಲ್‌ ರವರು ಮಾತನಾಡುವ ಸ್ವಭಾವ ಒರಟುತನ ಮತ್ತು ಹಣದ ಅಹಂಕಾರವೇ ಕಾರಣ.


ಎರಡೆರಡು ಬಾರಿ ನಾಲ್ಕುಜನ ಟ್ರೈನರ್‌, ಮ್ಯಾನೇಜರ್‌, ಮಾಲೀಕರು, ಮತ್ತು ವ್ಯವಸ್ಥಾಪಕರು ಸೇರಿ ಆಯ್ಕೆಪಟ್ಟಿಯಲ್ಲಿ ಕ್ರೀಡಾಪಟುಗಳಾದ ರಾಕೇಶ್‌ ಮತ್ತು ಸುಮಿತ್‌ ಹೆಸರು ಯಾಕೆ ಇರುವುದಿಲ್ಲ ಇದರ ಹಿಂದಿನ ಉದ್ದೇಶ ಏನು? ನಿಮ್ಮ ಟ್ರೈನರ್‌ಗಳು ಟ್ರೈನ್‌ ಮಾಡಿದ ಕ್ರೀಡಾಪಟುಗಳೇ ಗೆಲ್ಲಬೇಕು ಎಂದು ನಿಮ್ಮ ನಿರ್ಧಾರಗಳು ಗೋಚರಿಸುತ್ತಿದೆ. ಪ್ರತಿ ಒಬ್ಬ ಕ್ರೀಡಾಪಟು ಸಮಯ‌, ಹಣ, ಡಿಸಿಪ್ಲಿನ್, ಆಹಾರ ಪದ್ಧತಿ, ವಾಟರ್‌ ಕಟ್‌ Carb Cycling, Natural Food 3 ಗಂಟೆಗಳ ಕಾಲ ವ್ಯಾಯಾಮ ದೇಗುಲದಲ್ಲಿ ಕಷ್ಟಪಟ್ಟು ಬೆವರುಸುರಿಸಿ, ಹಲವಾರು ದೇಹದ ಅಂಗಗಳನ್ನು ನೋವಿನ ದವಡೆಗೆ ದೂಕಿ ದೇಹವನ್ನು ಎಚ್ಚರಿಸಿ ಎಲ್ಲಾ ತ್ಯಾಗಗಳನ್ನು ಮಾಡಿ ತಮ್ಮ ದೇಹವನ್ನು ಹೊಸರೀತಿ ಮಾರ್ಪಡಿಸಿಕೊಳ್ಳುವುದು ಎಷ್ಟು ಕಷ್ಟಕರ. ಆ ಅನುಭವ ಒಬ್ಬ ಕ್ರೀಡಾಪಟುಗಳಿಗೆ ಗೊತ್ತಾಗುತ್ತದೆ. ಕ್ರೀಡೆ, ಕ್ರೀಡೆಯಾಗಿ ಇರಬೇಕು ಹೊರತು ಯಾವುದೇ ಪಾರ್ಷಲಿಟಿ ಮಾಡದೇ ಪ್ರಶಸ್ತಿಗಳನ್ನು ನೀಡಬೇಕು ಇಷ್ಟೆಲ್ಲಾ ಆದರೂ ಕಾರ್ಯಕ್ರಮ ಕೊನೆಯಲ್ಲಿ ನಿಮ್ಮ ಜಿಮ್‌ನ ತೀರ್ಪುಗಾರರು ತಿಳಿಸಿದ ಕೊನೆಯ ಪಟ್ಟಿಯಲ್ಲಿ ರಾಕೇಶ್‌ ಮೊದಲನೆಯ ಸ್ಥಾನ, ಸುಮಿತ್‌ ಎರಡನೆಯ ಸ್ಥಾನ, ಸಾಗರ್‌ ಮೂರನೇ ಸ್ಥಾನ. ಎಂದು ತಿಳಿಸಿದರು. ಈ ವಿಷಯ ತಿಳಿದ ನಂತರ ಜಿಮ್‌ ಮಾಲೀಕ ರಾಹುಲ್‌ರವರು ಕೆಳಗೆ ಹೋದವರು ಹಿಂತಿರುಗಿ ಬರಲೇ ಇಲ್ಲ. ಕಾರ್ಯಕ್ರಮ ಮುಗಿದು ಈ ದಿನಕ್ಕೆ 8 ದಿನಗಳಾದರೂ ಕಷ್ಟಪಟ್ಟು ಹಣ ಖರ್ಚು ಮಾಡಿ, ಸಮಯನೀಡಿ ಶ್ರಮಪಟ್ಟ ಕ್ರೀಡಾಪಟುಗಳಿಗೆ ಇಂದಿಗೂ ಒಂದೇ ಒಂದು ಮಾಹಿತಿಯನ್ನು ಸಹ ನೀಡಿರುವುದಿಲ್ಲ ಕರೆ ಮೂಲಕವಾಗಲೀ ಮತ್ತು ಜಿಮ್‌ನ ನೋಟಿಸ್‌ ಬೋರ್ಡ್‌ ಮೇಲೆ ವಿಜೇತರ ಪಟ್ಟಿಯನ್ನು ಹಾಕಿರುವುದಿಲ್ಲ. 50 ದಿನಗಳು ಕಷ್ಟಪಟ್ಟಿರುವ ಕ್ರೀಡಾಪಟುಗಳಿಗೆ ಆಗಿರುವ ಅವಮಾನವಿದು, ನರೇನ್‌ ಜಿಮ್‌ನ ವ್ಯವಸ್ಥಾಪಕರು 50 ದಿನದ ಫಿಟ್‌ನೆಸ್ ಚಾಲೆಂಜ್‌ನಲ್ಲಿ ಕ್ರೀಡಾಪಟುಗಳು ವಿಜೇತರಾಗಿದ್ದರು ಎರಡು ಬಾರಿಯು ತಪ್ಪುಪಟ್ಟಿಯನ್ನು ಮಾಡಿರುವ ವ್ಯವಸ್ಥೆಯ ಬಗ್ಗೆ ಮತ್ತು ಕ್ರೀಡಾಪಟುಗಳಿಗೆ ಆದ ಅವಮಾನಕ್ಕೆ ನ್ಯಾಯ ಸಿಗದ ಕಾರಣ ಮತ್ತು ಜಿಮ್‌ಗೆ ಸೇರ್ಪಡೆಯಾದ ಹೊಸ ಯುವಕರಿಗೆ ತರಬೇತಿ ನೀಡುವುದರಲ್ಲಿ ಭೇದ-ಭಾವ ಮತ್ತು ವ್ಯಾಯಾಮಗಳನ್ನು ಸರಿಯಾಗಿ ಹೇಳಿಕೊಡದೇ ಹಣಕ್ಕೋಸ್ಕರ ನಡೆಸುತ್ತಿರುವ ಒಂದು ಸಂಸ್ಥೆಯಾಗಿ ಮಾರ್ಪಟ್ಟಿದೆ. ಇದೆಲ್ಲಾ ನೋಡುತ್ತಿರುವ ನಾನು ಅಸಮಾಧಾನ ಮತ್ತು ಮನನೊಂದು ಜಿಮ್‌ನ ಸದಸ್ಯತ್ವವನ್ನು ವಾಪಸ್‌ ಪಡೆಯುತ್ತೇನೆ.
‌ ರಾಕೇಶ್
ಸದಸ್ಯರು ನರೇನ್‌ ಫಿಟ್‌ನೆಸ್, ವಿನೋಬನಗರ, ಶಿವಮೊಗ್ಗ

By admin

ನಿಮ್ಮದೊಂದು ಉತ್ತರ

You missed

error: Content is protected !!