ಶಿವಮೊಗ್ಗ,ಜೂ.01:

ಇಲ್ಲಿನ ಎನ್ ಇ ಎಸ್ ನ ಎಟಿಎನ್ ಸಿಸಿ ವಿದ್ಯಾರ್ಥಿನಿ ಲೀನಾ ಎಸ್ ಹೆಚ್ ಇವರು ರಾಷ್ಟ್ರೀಯ ಕ್ರೀಡಾ ಸಾಫ್ಟ್ ಬಾಲ್ ಕ್ರೀಡೆಯಲ್ಲಿ ಕುವೆಂಪು ವಿಶ್ವ ವಿದ್ಯಾಲಯ ದಿಂದ ಆಯ್ಕೆ ಯಾಗಿದ್ದಾರೆ.

ಜೂನ್ 4 ,5,6 ರಂದು ಪಂಜಾಬ್ ನಲ್ಲಿ ನಡೆಯುವ ಪಂದ್ಯಾವಳಿ ಯಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಇವರು ಶ್ರೀ ಸಿದ್ದಾರ್ಥ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಗೀತಾ ಇವರ ಮಗಳಾಗಿದ್ದಾರೆ. ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಲೀನಾ ಎಸ್ ಹೆಚ್
ಇವರಿಗೆ ಸಿದ್ದಾರ್ಥ ಎಜುಕೇಶನ್ ಸೊಸೈಟಿ ಅಧ್ಯಕ್ಷರಾದ ಕೆ ಟಿ ಶಿವಕುಮಾರ್ ಹಾಗೂ ಸ್ನೇಹಿತರು ಶುಭ ಹಾರೈಸಿದ್ದಾರೆ.

ಎನ್ ಇ ಎಸ್ ಅಭಿನಂದನೆ: ರಾಷ್ಟ್ರಮಟ್ಟದ ಕ್ರೀಡೆಗೆ ಆಯ್ಕೆಯಾದ ನಮ್ಮ ಸಂಸ್ಥೆಯ ವಿದ್ಯಾರ್ಥಿನಿ ಲೀನಾ ಅವರಿಗೆ ಶುಭ ಹಾರೈಕೆಗಳು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಪರವಾಗಿ ಕಾರ್ಯದರ್ಶಿ ನಾಗರಾಜ ಅವರು ಅಭಿನಂದಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!